ಜೀವನದಲ್ಲಿ ಪ್ರತಿಯೊಬ್ಬರೂ ಗ್ರಾಹಕರಾಗಿದ್ದು ತಮ್ಮ ಹಕ್ಕುಗಳ ಬಗ್ಗೆ ಹಾಗೂ ಮೋಸದ ವ್ಯವಹಾರದ ಬಗ್ಗೆ ಜಾಗೃತರಾಬೇಕು – ಲೋಕೇಶ್ ಕುಮಾರ್(ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ)

0

ಹಾಸನ ಜ.20(ಹಾಸನ್_ನ್ಯೂಸ್ !,  ಜೀವನದಲ್ಲಿ ಪ್ರತಿಯೊಬ್ಬರೂ ಗ್ರಾಹಕರಾಗಿದ್ದು ತಮ್ಮ ಹಕ್ಕುಗಳ ಬಗ್ಗೆ ಹಾಗೂ ಮೋಸದ ವ್ಯವಹಾರದ ಬಗ್ಗೆ ಜಾಗೃತರಾಬೇಕಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಲೋಕೇಶ್ ಕುಮಾರ್ ತಿಳಿಸಿದ್ದಾರೆ.

     ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ ,ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ,ಕಾನೂನು ಮಾಪನಶಾಸ್ತ್ರ ಇಲಾಖೆ ಮತ್ತು ಗ್ರಾಹಕ ಮಾಹಿತಿ ಕೇಂದ್ರದ ಸಂಯುಕ್ತಾಶಯದಲ್ಲಿ ನಗರದ ನಿವೃತ್ತ ಸರ್ಕಾರಿ  ನೌಕರ ಭವನದಲ್ಲಿಂದು  ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಅವರು ದೇಶದಲ್ಲಿ ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ರಚನೆಯಾಗಿದ್ದು ಸಾರ್ವಜನಿಕರು ತಮಗೆ ವ್ಯವಹಾರದಲ್ಲಾಗುವ ವಂಚನೆ ವಿರುದ್ದ ದೂರು ನೀಡಬಹುದಾಗಿದೆ ಎಂದರು.

ಗ್ರಾಹಕರ ಕಾಯ್ದೆಯು ಗ್ರಾಹಕರ ಹಿತರಕ್ಷಣೆ ಕಾಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. 2019ರ  ಕಾಯ್ದೆಯು ಜಿಲ್ಲಾ ಹಂತದಲ್ಲಿ  1 ಕೋಟಿಯವರೆಗೆ ವ್ಯಾಜ್ಯಗಳನ್ನು ವಿಚಾರಣೆ ನಡೆಸಿ  ಪರಿಹಾರ ಒದಗಿಸಲು ಕಾನೂನು ಜಾರಿಗೆ ತಂದಿದೆ . ಆದ್ದರಿಂದ ಗ್ರಾಹಕರು ಅನ್ಯಾಯವಾದಲ್ಲಿ ಜಿಲ್ಲಾ ಹಂತದಲ್ಲೇ ದೂರು ನೀಡಿ ಪರಿಹಾರ ಪಡೆದುಕೊಳ್ಳಬಹುದು ಎಂದು  ತಿಳಿಸಿದರು.
        ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಸಿ. ಚಂದ್ರಶೇಖರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದರೆ ಆರೋಗ್ಯಕರ ಸಮಾಜವನ್ನು ನಿರ್ಮಿಸಬಹುದು ಆದ್ದರಿಂದ ಎಲ್ಲಾ ವ್ಯಾಪಾರಸ್ಥರು ನ್ಯಾಯ ಸಮ್ಮತವಾಗಿ ವಹಿವಾಟು ನಡೆಸಬೇಕು ಎಂದರು.ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಕರ್ತವ್ಯವನ್ನು ಸಹ ನೀಡಿದೆ ಎಂದು ಅವರು ತಿಳಿಸಿದರು.

       ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಕಾರ್ಯಾಧ್ಯಕ್ಷರಾದ ಸಿದ್ದಯ್ಯನವರು ಮಾತನಾಡಿ  ಜಿಲ್ಲಾ ಹಂತದಲ್ಲಿ  ಮೊದಲು 20 ಲಕ್ಷ ರೂ ಗಳವರಗೆ ವ್ಯಾಜ್ಯಗಳ ಪರಿಹರಿಸುವ ಅವಕಾಶ ಇತ್ತು ಆದರೆ 2019ರ ತಿದ್ದುಪಡಿ ಕಾಯ್ದೆಯಲ್ಲಿ 1 ಕೋಟಿಯವರೆಗಿನ ವ್ಯವಹಾರಗಳ ವಿಚಾರಣೆ ನಡೆಸಿ ಜಿಲ್ಲಾ ಹಂತದಲ್ಲಿ ಪರಿಹರಿಸಬಹುದು ರಾಷ್ಟ್ರೀಯ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಒಂದೇ ಬಾರಿ ಅಫೀಲು ಹೋಗುವ ಅವಕಾಶವಿತ್ತು 2019ರ ಕಾಯ್ದೆಯು ಎರಡನೇಬಾರಿ ಆಫೀಲ್ ಹೋಗುವ ಅವಕಾಶವನ್ನು ನೀಡಿದೆ ಎಂದರು.
        ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಪುಟ್ಟಸ್ವಾಮಿ, ಗ್ರಾಹಕ ವ್ಯಾಜ್ಯಗಳ ಪರಿಹಾರದ ಆಯೋಗದ ಸದಸ್ಯರಾದ  ಮಹದೇವ್ , ಬಿಕೆ ಶಾಂತಲಾ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಬೋರೇಗೌಡ ಉಪಸಿತ್ತಿತರಿದ್ದರು.

LEAVE A REPLY

Please enter your comment!
Please enter your name here