ಹಾಸನದ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಬೇಗ ಮುಗಿದರೆ ಈ ಭಾಗದ ನಗರದ  ಸಂಚಾರ ಸಮಸ್ಯೆ ಬಗೆಹರಿಯಲಿದೆ – ಪ್ರೀತಮ್ ಗೌಡ (ಶಾಸಕರು)

0

ನಗರದ ರೈಲ್ವೆ ಮೇಲು ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ:ಶಾಸಕರ ಸೂಚನೆ
ಹಾಸನ ಜ. 20 (ಹಾಸನ್_ನ್ಯೂಸ್ !,  ನಗರದ ರೈಲ್ವೆ ಮೇಲು ಸೇತುವೆ  ಕಾಮಗಾರಿ ವಿಳಂಬವಾಗಿರುವುದರಿಂದ ಆದಷ್ಟು ತ್ವರಿತವಾಗಿ ಕೆಲಸ ಮುಗಿಸಲು ಅಗತ್ಯವಿರುವ ಭೂಮಿ ತೆರವು ಗೊಳಿಸಿಕೊಡುವ ಕಾರ್ಯವನ್ನು ಶೀಘ್ರವೇ ಮಾಡುವಂತೆ ಶಾಸಕರಾದ ಪ್ರೀತಂ ಜೆ ಗೌಡ ಅವರು ತಿಳಿಸಿದರು.
     ಜಿಲ್ಲಾಧಿಕಾರಿ ಕಚೇರಿಯಲ್ಲಿಯಿಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಭೂ ಸ್ವಾಧಿನ ಪ್ರಕ್ರಿಯೆ ಬಾಕಿ ಇದ್ದರೆ ತಕ್ಷಣ ಮುಗಿಸಿ ಯೋಜನಾ ವ್ಯಾಪ್ತಿಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ ಕಾಮಗಾರಿ ಬೇಗ ಮುಕ್ತಾಯಗೊಳಿಸಲು ಸಹಕಾರ ನೀಡಿ ಎಂದು ಹೇಳಿದರು.
    ನ್ಯಾಯಸಮ್ಮತವಾಗಿ ಪರಿಹಾರ ವಿತರಣೆ ಮಾಡಿ ಬಾಕಿ ಹಣ ಇದ್ದರೆ ತಕ್ಷಣ ಬಿಡುಗಡೆ ಮಾಡಿ ಕಾಮಗಾರಿಯನ್ನು ಬೇಗ ಮುಗಿದರೆ ಈ ಭಾಗದ ನಗರದ  ಸಂಚಾರ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕರು ತಿಳಿಸಿದರು.
    ರಸ್ತೆ ಬಲ ಬದಿಯಲ್ಲಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಉಚ್ಚ ನೀಡಿರುವ ನಿರ್ದೇಶನದಂತೆ  ಅವಧಿಯೊಳಗೆ ಸಂಬಂಧಪಟ್ಟವರಿಗೆ  ನೋಟಿಸ್  ನೀಡಿ ಸಮರ್ಪಕವಾಗಿ ಮರು ಸರ್ವೇ ನಡೆಸಿ ಕಾರ್ಯಾತ್ಮಕ ವಾಗಿ ಆದೇಶ ಹೊರಡಿಸುವಂತೆ ಶಾಸಕರು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
    ಡಾನ್ ಬಾಸ್ಕ್ ಚರ್ಚ್ ರವರು ಜಾಗ ಬಿಟ್ಟು  ಕೊಡಲು ಒಪ್ಪಿದ್ದ ನಾಳೆಯಿಂದ ಕಾಮಗಾರಿ ಪ್ರಾರಂಭಿಸುವಂತೆ ಅವರು ಲೋಕಪಯೋಗಿ ಮತ್ತು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಮಾತನಾಡಿ ನ್ಯಾಯಲಯ ಆದೇಶದ ವ್ಯಾಪ್ತಿಯಲ್ಲಿ ಕಾನೂನಾತ್ಮಕವಾಗಿ ಬಾಕಿ ಕಾಮಗಾರಿ ಶೀಘ್ರ ಪ್ರಾರಂಬಿಸಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕೆಂದು ಸೂಚಿಸಿದರು.
    ಸಭೆಯಲ್ಲಿ ಉಪವಿಭಾಗಧಿಕಾರಿ ಬಿ.ಎ. ಜಗದೀಶ್, ನಗರ ಆಯುಕ್ತರಾದ ಕೃಷ್ಣಮೂರ್ತಿ, ಭೂದಾಖಲೆಗಳ ಉಪ ನಿರ್ದೇಶಕರಾದ ಹೇಮಲತಾ ಎಂ.ಡಿ ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here