ಜಾತ್ರೆ, ಮಹೋತ್ಸವ ಸರಳ ಆಚರಣೆಗೆ ಜಿಲ್ಲಾಧಿಕಾರಿ ಸೂಚನೆ

0

ಕೊರೋನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಡೆಯುವ ಜಾತ್ರೆ, ಮಹೋತ್ಸವಗಳು, ಮೆರವಣಿಗೆಗಳು ಸರಳ ರೂಪದಲ್ಲಿ ಆಯಾ ದೇವಸ್ಥಾನದ ಒಳ ಆವರಣದಲ್ಲಿಯೇ ಆಚರಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿಂದು ನಡೆದ ಧಾರ್ಮಿಕ ಪರಿಷದ್ ಸಭೆ ನಡೆಸಿ ಮಾತನಾಡಿದ ಅವರು ಏ.15 ರಿಂದ ನಡೆಯುವ ಎಲ್ಲಾ ಉತ್ಸವಗಳು ಹಾಗೂ ಏ.23 ಮತ್ತು 24 ರಂದು ಬೇಲೂರಿನಲ್ಲಿ ನಡೆಯುವ ಬ್ರಹ್ಮರಥೋತ್ಸವ ಹಾಗೂ ಜಿಲ್ಲೆಯ ಇತರೆಡೆ ನಡೆಯುವ ರಥೋತ್ಸವಗಳನ್ನು ದೇವಾಲಯದ ಒಳಾಂಗಣದಲ್ಲಿ ಸರಳವಾಗಿ ಆಚರಿಸುವಂತೆ ಸೂಚಿಸಿದರಲ್ಲದೆ ಜಾತ್ರೆ ಮತ್ತು ರಥೋತ್ಸವಕ್ಕೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸದಂತೆ ಎಚ್ಚರವಹಿಸಿ ಎಂದು ಅವರು ಹೇಳಿದರು.

ಕೊಂಡಜ್ಜಿ ದೇವಸ್ಥಾನವನ್ನು ಹಾಸನಾಂಬ ದೇವಾಲಯ ವತಿಯಿಂದ ದತ್ತು ಪಡೆದು ಅಭಿವೃದ್ದಿ ಪಡಿಸಲಾಗುವುದು ಎಂದರಲ್ಲದೆ, ಸಾಮೂಹಿಕ ವಿವಾಹಕ್ಕೆ ಸಂಬಂದಿಸಿದಂತೆ ಬರುವಂತಹ ಅರ್ಜಿಗಳನ್ನು ಸ್ವೀಕರಿಸಿ ಅವುಗಳನ್ನು ಪರಿಶೀಲಿಸಿ ದಿನಾಂಕ ನಿಗದಿಗೊಳಿಸಿ ಎಂದರು

ಸಭೆಯಲ್ಲಿ ಬೇಲೂರು ಚನ್ನಕೇಶವ ದೇವಾಲಯ ಮುಖ್ಯ ಕಾರ್ಯನಿರ್ವಾಣಾಧಿಕಾರಿ ವಿದ್ಯುಲತಾ, ರಾಜ್ಯ ಧಾರ್ಮಿಕ ದತ್ತಿ ಸಭೆ ಸದಸ್ಯರಾದ ಗೋವಿಂದ್ ಭಟ್, ಧಾರ್ಮಿಕ ದತ್ತಿ ಸದಸ್ಯರಾದ ರಕ್ಷಿತ್ ಭಾರದ್ವಾಜ್, ವಿಶ್ವ ಹಿಂದೂ ಪರಿಷದ್ ಕಾರ್ಯದರ್ಶಿ ನವೀನ್ ಕುಮಾರ್, ಮುಜರಾಯಿ ನಾಮ ನಿರ್ದೇಶನ ಸದಸ್ಯರಾದ ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here