ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗ್ರಾಮ ಲೆಕ್ಕಿಗ

0

ಹಾಸನ / ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಚಂಗಡಿಹಳ್ಳಿ ಗ್ರಾಮ ಲೆಕ್ಕಿಗ ಹರಿಪ್ರಸಾದ್‌ ಅವರು ಬಗರ್ ಹುಕುಂ ಸಾಗುವಳಿ ಚೀಟಿ ನೀಡಲು ಪರಿಶೀಲನಾ ವರದಿಗಾಗಿ ವ್ಯಕ್ತಿಯಿಂದ ಬುಧವಾರ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರೋ ಘಟನೆ ನಡೆದಿದೆ

ಸರ್ಕಾರಿ ಅಧಿಕಾರಿ ಹರಿಪ್ರಸಾದ್ ಅವರು ಗ್ರಾಮಸ್ಥರೊಬ್ಬರ ಪರಿಶೀಲನಾ ವರದಿ ನೀಡೋಕೆ ಸಕಲೇಶಪುರ ತಾಲ್ಲೂಕಿನ ಹೇರೂರು ಗ್ರಾಮದ ದರ್ಶನ್ ಅವರಿಗೆ ಬರೋಬ್ಬರಿ 20,000 ರೂ ಲಂಚದ ಬೇಡಿಕೆ ಇಟ್ಟಿದ್ದರಂತೆ. ಅಂತೆಯೇ ದರ್ಶನ್ ಪೂರ್ತಿ ಹಣ ನೀಡುವಾಗ ವಿಷಯ ತಿಳಿದಿದ್ದ ಪೊಲೀಸರು ದಾಳಿ ಮಾಡಿ ಲಂಚಬಾಕನನ್ನು ಸೆರೆಹಿಡಿದಿದ್ದಾರೆ.

ಇದು ಕೃಷ್ಣಮೂರ್ತಿ(DYSP) ನೇತೃತ್ವದಲ್ಲಿ : ಶಿಲ್ಪಾ (SI) ಇತರೆ ಸಿಬ್ಬಂದಿಗಳ ಸಹಾಯದಿಂದ ಸ್ಥಳ ದಾಳಿ ನಡೆಸಿ ಗ್ರಾಮದ ಭ್ರಷ್ಟ ಲೆಕ್ಕಿಗನನ್ನು ಬಂಧಿಸಿ, ಹಣ ವಶಪಡಿಸಿಕೊಂಡು ಭ್ರಷ್ಟಾಚಾರ ನಿರ್ಮೂಲನೆ ಪಣತೊಟ್ಟಿತುವ ಈ ಘಟನೆ ಗ್ರಾಮದಲ್ಲಿ ಶ್ಲಾಘನೀಯ ವಾತಾವರಣ ನಿರ್ಮಾಣವಾಯಿತು

* ಭ್ರಷ್ಟಾಚಾರ ನಿರ್ಮೂಲನೆಗೆ ಹಣ ನೀಡುವ ಅಥವಾ ಕೊಡುವ ಎರಡು ಕಾನೂನು ಬಾಹಿರ ಪ್ರಚೋದನ ಕೆಲಸ ನಮ್ಮಿಂದಲೇ ನಿಲ್ಲಬೇಕು , ಆಗಲೇ ಸಮೃದ್ಧ ದೇಶ ಕಟ್ಟಲು ಸಾಧ್ಯ*

ಇದು ಹಾಸನ್ ನ್ಯೂಸ್ ಕಳಕಳಿ

LEAVE A REPLY

Please enter your comment!
Please enter your name here