ಅಪಘಾತದಲ್ಲಿ ಅರಸೀಕೆರೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಸಾವು

0

ಚನ್ನರಾಯಪಟ್ಟಣ/ಅರಸೀಕೆರೆ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಅಡ್ಡಾದಿಡ್ಡಿ ಸಂಚರಿಸಿ ರಸ್ತೆ ವಿಭಜಕದ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅರಸೀಕೆರೆ ಠಾಣೆಯ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಮಂಜುನಾಥ್ (59) ಮೃತಪಟ್ಟು ಮೂವರಿಗೆ ಗಾಯಗಳಾಗಿವೆ.

ಹರಿಹರದಿಂದ ಮೈಸೂರಿಗೆ ಹೋಗುತ್ತಿದ್ದ ಅರಸೀಕೆರೆಯಲ್ಲಿ ಹತ್ತಿಕೊಂಡ ಎಎಸ್‌ಐ ಮಂಜುನಾಥ್ ಚಾಲಕನ ಆಸನದ ಹಿಂಬದಿಯಲ್ಲಿ ಕುಳಿತಿದ್ದರು. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಆಲಗೊಂಡನಹಳ್ಳಿ ಗೇಟ್ ಬಳಿ ಚಾಲಕನ ನಿರ್ಲಕ್ಷ್ಯತೆಯಿಂದ ಬಸ್ ರಸ್ತೆ ವಿಭಜಕದಲ್ಲಿದ್ದ ಕಂಬಕ್ಕೆ ರಭಸವಾಗಿ ಹೊಡೆದು ರಸ್ತೆಯ ಮತ್ತೊಂದು ಬದಿಯ ನಿಂತಿದೆ. ಈ ವೇಗಕ್ಕೆ ಬಸ್‌ನೊಳಗಿದ್ದ ಎಎಸ್‌ಐ ಮಂಜುನಾಥ್ ತಲೆಗೆ ತೀವ್ರಪೆಟ್ಟುಬಿದ್ದು ರಕ್ತಸ್ರಾಮವಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಖಾಸಗಿ ಆಂಬುಲೆನ್ಸ್‌ನಲ್ಲಿ ಮಂಜುನಾಥ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಬಸ್ ಚಾಲಕ ಎಂ.ಪ್ರಶಾಂತ್‌ಕುಮಾರ್‌, ನಿರ್ವಾಹಕ ದುರ್ಗೇಶ್ ಕುಮಾರ್ ಹಾಗೂ ತಾಲೂಕಿನ ಜಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿ.ಎಸ್.ಸುರೇಶ್‌ಗೆ ಪೆಟ್ಟಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರು ಚನ್ನರಾಯಪಟ್ಟಣದಲ್ಲಿ ವಾಸವಾಗಿದು ಅವರ ದೊಡ್ಡಚಾಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತರ ಪತ್ರಿಯ ವಿವಾಹ ನಿಶ್ಚಯವಾಗಿದ್ದು, ಮದುವೆಗೆ ಸಿದ್ಧತೆಗಳು ನಡೆದಿತ್ತು. ಇನ್ನೊಂದು ತಿಂಗಳಿಗೆ ದಿನಾಂಕ ನಿಗದಿಯಾಗಿತ್ತು. ಡಿವೈಎಸ್ಪಿ ಮುರಳೀಧರ್, ಸಿಪಿಐ ಸುಬ್ರಹ್ಮಣ್ಯ, ಸಂಚಾರ ಠಾಣೆ ಎಸ್‌ಐ ಎಚ್.ಕೆ.ನವೀನ್ ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

LEAVE A REPLY

Please enter your comment!
Please enter your name here