ನ್ಯೂಇಯರ್ ಮೊದಲ ದಿನ ಹಲವು ರಸ್ತೆ ಅಪಘಾತ ಹಾಸನ ಜಿಲ್ಲೆಯಲ್ಲಿ 5 ಸಾವು

0

ಜಿಲ್ಲೆಯ ವಿವಿಧೆಡೆ ಸಂಭವಿಸಿದ 5 ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ

ಹಾಸನ: ನ್ಯೂ ಇಯರ್ ಪಾರ್ಟಿ ಮುಗಿಸಿ ವಾಪಸ್ ಆಗುತ್ತಿದ್ದಾಗ ಕೆಎಸ್ಆರ್ಟಿಸಿ ಬಸ್, ಕಾರಿಗೆ ಡಿಕ್ಕಿ ಹೊಡೆದಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ಹಾರ್ಲೆ ಕೂಡಿಗೆ ಬಳಿ ನಡೆದಿದೆ. , ಹಾಸನದ ಕಾಕನಮನೆ ಗ್ರಾಮದ ಅಭಿ ಮೃತ ಯುವಕ. ಅಭಿ ನ್ಯೂ ಇಯರ್ ಪಾರ್ಟಿ ಮುಗಿಸಿಕೊಂಡು ಹಾನುಬಾಳು ಕಡೆಯಿಂದ ಊರಿಗೆ ವಾಪಸ್ ಆಗುತ್ತಿದ್ದನು. ಈ ವೇಳೆ ಕೆಎಸ್ಆರ್ಟಿಸಿ ಬಸ್ ಮುಂದೆಯಿಂದ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಇನ್ನೊಂದೆಡೆ : ಚನ್ನರಾಯಪಟ್ಟಣದ ವಿವೇಕನಗರ ವಾಸಿ ಮೂಲತಃ ತುಮಕೂರು ಜಿಲ್ಲೆ, ತುರುವೇಕೆರೆಯ ದಬ್ಬೆಘಟ್ಟ ಹೋಬಳಿಯ ತಂಡಗ ಗ್ರಾಮದ ಶಿಕ್ಷಕ ಟಿ.ಎನ್‌.ಮೋಹನ್‌ಕುಮಾರ್‌ (39) ಎಂಬವರ ಬೈಕ್‌ಗೆ ಚನ್ನರಾಯ ಪಟ್ಟಣದ ಹೌಸಿಂಗ್‌ ಬೋರ್ಡ್‌ ಸಮೀಪ ಲಾರಿ ಢಿಕ್ಕಿ ಹೊಡೆದಿದೆ., ಗಂಭೀರವಾಗಿ ಗಾಯಗೊಂಡಿದ್ದ ಮೋಹನ್‌ ಕುಮಾರ್‌ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಾಮನಗರದ ಕನಕಪುರ ತಾಲೂಕು, ದೊಮ್ಮರದೊಡ್ಡಿ ಬೀದಿ ವಾಸಿ ಜಯಣ್ಣ (40)ಎಂಬವರ ದ್ವಿಚಕ್ರ ವಾಹನವು ಶ್ರವಣಬೆಳಗೊಳ ಹೋಬಳಿ ಹೊಸಳ್ಳಿ ಗ್ರಾಮದ ಸಮೀಪ ಲೈಟ್‌ ಕಂಬಕ್ಕೆ ಢಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. , ಬೈಕ್‌ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸವಾರ ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡಿದ್ದಾರೆ.

ಆಲೂರು ಪಟ್ಟಣದ ಅಂಬೇಡ್ಕರ್‌ ನಗರದ ವಾಸಿ ಬ್ಯಾಂಕ್‌ ನೌಕರ, ಮೂಲತಃ ಪಾಳ್ಯ ಹೋಬಳಿ, ಮಡಬಲು ಗ್ರಾಮ ಸೋಮೇಶ್‌ (52)ಎಂಬವರ ಬೈಕ್‌ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಅವರು ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದರು.

ಅರಕಲಗೂಡು ತಾಲೂಕು, ರಾಮನಾಥಪುರ ಹೋಬಳಿ ಬಸವಾಪಟ್ಟಣ ಗ್ರಾಮದ ಅರ್ಜುನ್‌ (30 )ಎಂಬವರ ಬೈಕ್‌ ನಾಯಿ ಅಡ್ಡ ಬಂದ ಪರಿಣಾಮ ಪಲ್ಟಿಯಾಗಿ ಅವರು ಮೃತಪಟ್ಟ ಘಟನೆ ಬೆಳವಾಡಿ ಗ್ರಾಮದಲ್ಲಿ ಸಂಭವಿಸಿದೆ

ಹಾಸನ ನಗರ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾದ ಘಟನೆ ಹಾಸನದ ಹೃದಯ ಭಾಗದಲ್ಲಿ ನಡೆದಿದೆ.

ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ಕಂಟೈನರ್ ಲಾರಿಯೊಂದು ಹಾಸನದ ಎನ್. ಆರ್.  ವೃತ್ತದ ಸಿಗ್ನಲ್ ನಿಂದ ಗಾಂಧಿ ಬಜಾರ್ ಕ್ರಾಸಿಗೆ ಆಗಮಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಗಾಂಧಿ ಬಜಾರ್ ಸಮೀಪ ತಿರುವು ಇದ್ದದ್ದರಿಂದ ಚಾಲಕ ಏಕಾಏಕಿ ತಿರುವನ್ನ ಪಡೆಯಲು ಮುಂದಾದಾಗ, ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಡಿವೈಡರ್ ಗೆ ಹಾಕಿದ್ದ ಗ್ರಿಲ್ಸ್ ಗಳು ಸಂಪೂರ್ಣ ಮುರಿದು ಹೋಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡ ಕೂದಲೆಯಲ್ಲಿ ಪಾರಾಗಿದ್ದಾನೆ.

ಇನ್ನು ಅಪಘಾತ ದೃಶ್ಯಗಳು ಖಾಸಗಿ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದ್ದು ಸದ್ಯ ಪ್ರಕರಣವನ್ನ ಟ್ರಾಫಿಕ್ ಪೊಲೀಸ್ರು ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ

LEAVE A REPLY

Please enter your comment!
Please enter your name here