ಹಾಸನ ನಗರ : (ಹಾಸನ್_ನ್ಯೂಸ್ !, live@10AM ಹಾಸನ ನಗರದ ಬಿ.ಎಂ.ರಸ್ತೆಯಲ್ಲಿ ನಡೆದ ರಸ್ತೆ ಅಪಘಾತ ,
i20 ಕಾರಿನ ಚಾಲಕನ ನಿಯಂತ್ರಣ ತಪ್ಪಿ , ಆಜ಼ಾದ್ ರೋಡ್ ಟರ್ನಿಂಗ್ (ಸಿಟಿ ಫರ್ನಿಚರ್ ಮುಂಭಾಗ) ಇರುವ ಡಿವೈಡರ್ ಗೆ ಬಡಿದು , ಕಾರಿನ ಮುಂಭಾಗ ಜಖಂ ಗೊಂಡಿದ್ದು ,.,
ಕಾರಿನಲ್ಲಿದ್ದ ಐವರು ಅದೃಷ್ಠವಶಾತ್ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿರುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ . ಹಾಸನ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಹಾಗೂ ಆಡಳಿತ ವರ್ಗಕ್ಕೆ ಅಭಿನಂದನೆಗಳು, ನಿಮ್ಮ ಗಮನಕ್ಕೆ ಬಾರದೆ ಅನೇಕ ಸಾರ್ವಜನಿಕ ಸಮಸ್ಯೆ ಗಳಿದ್ದು ತಮ್ಮ ಗಮನಕ್ಕೆ ಜಯನಗರ ಎರಡನೇ ಹಂತದ ಕೆಲವು ಪ್ರದೇಶ ತೇಜೂರು ಗ್ರಾಮ ಪಂಚಾಯತ್ ಗೆ ಒಳಪಟ್ಟಿದ್ದು ನಾಗರೀಕರೇ ವಾಸವಿದ್ದು ಕುಡಿಯುವ ನೀರಿನ ಸಮಸ್ಯೆ ಇದ್ದು ಸಕಾಲದಲ್ಲಿ ತೆರಿಗೆ ಪಾವತಿಸಲಾಗಿದಗದರೂ ನಿಗದಿತವಾಗಿ ನೀರಿನ ವ್ಯವಸ್ಥೆ ಇಲ್ಲ ವಾಗಿದೆ, ಪಿ.ಡಿ.ಓ. ದೂರವಾಣಿ ಸಂಪರ್ಕ ಕ್ಕೆ ಸಿಗುವುದಿಲ್ಲ ವಾಟರ್ ದುರಾಂಕರದ ಮಾತು ಹಾಗು ಸ್ಪಂದನೆ ಇಲ್ಲ.
ಅಲ್ಲದೆ ಸದರಿ ಮಾರ್ಗದಲ್ಲಿ ಚತುರ್ಪಥ ರಸ್ತೆ ನಿರ್ಮಿಸಿದ್ದು ಲೋಕೋಪಯೋಗಿ ಇಲಾಖೆಯವರು, ಚರಂಡಿ ವ್ಯವಸ್ಥೆ ಜಿಲ್ಲಾ ಪಂಚಾಯತ್ ವತಿಯಿಂದ ನಿರ್ಮಿಸಬೇಕಿದೆ, ನಿರ್ಲಷ್ಯವಹಿಸಿದ್ದು, ರಸ್ತೆಯ ತುಂಬ ಚರಂಡಿ ನೀರು ಹರಿಯುತ್ತಿದೆ. ಕೊವಿಡ್ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಗಮನಹರಿಸಿ ಸಮಸ್ಯೆ ಬಗೆಹರಿಸ ಬೇಕಾಗಿ ವಿನಂತಿ.