ಸರ್ಕಾರಿ ಕಾಲೇಜಿನ ಬಾಲಕಿಯರ ಸಾಧನೆ

0

ಹೆಣ್ಣು ಮಕ್ಕಳು ಮನಸು ಮಾಡಿದರೆ ಏನೂ ಬೇಕಾದರೂ ಸಾಧಿಸಬಲ್ಲರು ಎಂಬುವುದಕ್ಕೆ ಸಕಲೇಶಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರೇ ಸಾಕ್ಷಿ.

ಹೌದು. ಸದಾ ಜಿಟಿ ಜಿಟಿ ಮಳೆ ಇದ್ದರೂ ಕೂಡ ಯಾವುದನ್ನು ಲೆಕ್ಕಿಸದೆ ಕ್ರೀಡೆಗೆ ಸಂಬಂಧಿಸಿದ ತಯಾರಿ ನಡೆಸಿ, ಯಾವುದೇ ದೈಹಿಕ ಶಿಕ್ಷಣದ ಉಪನ್ಯಾಸಕ ರಿಲ್ಲದೇ 9/9/2023 ರಂದು ಸಕಲೇಶಪುರದ ಸುಭಾಷ್ ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಅದ್ವಿತೀಯ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಅಥ್ಲೆಟಿಕ್ ವಿಭಾಗದ 100 ಮೀ.ಓಟದಲ್ಲಿ ಗಾಯಿತ್ರಿ ಪ್ರಥಮ, ಸವಿತಾ ಬಿ ಎಂ ತೃತೀಯ, 200 ಮೀ ಓಟ ಗಾಯಿತ್ರಿ ಪ್ರಥಮ, 400 ಮೀ. ಓಟ ಪೂರ್ಣಿಮಾ ಕೆ ಎಲ್,1500 ಮೀ. ಓಟ ರಶ್ಮಿ ಯು.ಕೆ, 3000 ಮೀ.ಓಟ ಕುಮುದಾ ತೃತೀಯ, 5000 ಮೀ. ಓಟ ಅಕ್ಷತಾ ಪ್ರಥಮ, ಸುಶ್ಮಿತಾ ಕೆ.ಸಿ ದ್ವಿತೀಯ, ಉದ್ದ ಜಿಗಿತ ಸಂಚಿತ ತೃತೀಯ, ಎತ್ತರ ಜಿಗಿತ ಸಿರಿ ಪ್ರಥಮ, ಟ್ರಿಪಲ್ ಜಂಪ್ ಪೂರ್ಣಿಮಾ ಕೆ. ಎಲ್ ತೃತೀಯ, ಭರ್ಜಿ ಎಸೆತ ಸುಧಾ ಪ್ರಥಮ, ತಟ್ಟೆ ಎಸೆತ ಸಿಂಧೂ ಎ ಕೆ ದ್ವಿತೀಯ, ಹ್ಯಾಮರ್ ಎಸೆತ ಕುಮುದಾ ಪ್ರಥಮ, ಸಿಂಚನ ದ್ವಿತೀಯ, 4100 ರಿಲೇ ಗಾಯಿತ್ರಿ,ಸುಶ್ಮಿತಾ ಕೆ ಸಿ, ಪೂರ್ಣಿಮಾ ಕೆ. ಎಲ್, ಸವಿತಾ ಬಿ ಎಂ ಪ್ರಥಮ ಸ್ಥಾನ, 4400 ರಿಲೇ ಗಾಯಿತ್ರಿ, ಅಕ್ಷತಾ, ರಶ್ಮಿ ಯು.ಕೆ, ಪ್ರಕೃತಿ ಪ್ರಥಮ ಸ್ಥಾನ ಮತ್ತು ಗುಂಪು ಕ್ರೀಡಾ ವಿಭಾಗದಲ್ಲಿ ಖೋ- ಖೋ ಪ್ರಥಮ ಸ್ಥಾನ, ಥ್ರೋಬಾಲ್ ಪ್ರಥಮ ಸ್ಥಾನ, ಕಬ್ಬಡಿ ದ್ವಿತೀಯ ಸ್ಥಾನ, ಟೆನಿಕಾಯ್ಟ್ ಸಿಂಗಲ್ ಪ್ರಥಮ, ಟೆನಿಕಾಯ್ಟ್ ಡಬಲ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಬಾಲಕಿಯರ ವಿಭಾಗದ ಅತ್ಯುತ್ತಮ ಆಟಗಾರ್ತಿ ಆಗಿ ರಾಜ್ಯ ಮಟ್ಟದ ಕ್ರೀಡಾಪಟು ಕುಮಾರಿ ಗಾಯಿತ್ರಿ ಪದಕವನ್ನು ಪಡೆದರು. ಜೊತೆಗೆ ಬಾಲಕಿಯರ ವಿಭಾಗದ ಚಾಂಪಿಯನ್ಶಿಪ್ ಹಾಗೂ ಸಮಗ್ರ ಪ್ರಶಸ್ತಿಯನ್ನು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ತನ್ನ ಮುಡಿ ಗೆರಿಸಿಕೊಂಡಿದೆ.

ಕಳೆದ ಬಾರಿಯೂ ಸಹ ರಾಜ್ಯ ಮಟ್ಟದಲ್ಲಿ ಮಿಂಚಿದ್ದ ಮಲೆನಾಡಿನ ಹೆಣ್ಣು ಮಕ್ಕಳು ಈ ಬಾರಿಯೂ ಅದೇ ನಿರೀಕ್ಷೆಯಲ್ಲಿದ್ದಾರೆ.

ಕಾಲೇಜಿನ ಪ್ರಾಚಾರ್ಯ ವಿ ಪಿ ರಮೇಶ್ ರವರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಾಂಶುಪಾಲರು ಕ್ರೀಡಾಪಟುಗಳಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿದ್ದು ಗೆಲುವಿಗೆ ಕಾರಣವಾಗಿದೆ. ಕಾಲೇಜಿನ ಸಮಸ್ತ ಉಪನ್ಯಾಸಕರು, ಸಿಬ್ಬಂದಿ ವರ್ಗ ಪಾತ್ರ ವಿಶೇಷವಾಗಿದ್ದು, ಸಹ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಾಲೇಜುಗಳು ಇನ್ನೂ ಎತ್ತರಕ್ಕೆ ಬೆಳೆಯಲಿ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸ್ಥಾನಕ್ಕೆ ಏರಲಿ ಎಂಬುದು ಈಡಿ ಸಕಲೇಶಪುರ ತಾಲೂಕಿನ ಜನತೆಯ ಮಾತಾಗಿದೆ.

LEAVE A REPLY

Please enter your comment!
Please enter your name here