ಹಾಸನ ಜಿಲ್ಲೆಯ ಹಳೇಬೀಡು ಹೋಬಳಿಯ ಅಡಗೂರು ಶಿವಪುರ ಕಾವಲಿನ ಬೆಟ್ಟಗುಡ್ಡಗಳ ನಡುವೆ ನಿಸರ್ಗ ತಾಣದಲ್ಲಿರುವ ಜೈನರಗುತ್ತಿ ಯಲ್ಲಿ ಎಂದಿನಂತೆ ಮೂರು ದಿನ ನಡೆಯುವ 24 ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವಕ್ಕೆ ಕಳೆದ ಭಾನುವಾರ ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ಸಿಕ್ಕಿದೆ
°ಭಾನುವಾರ (7.feb.2021) ನಸುಕಿನಿಂದಲೇ ಧಾರ್ಮಿಕ ವಿಧಾನ ಆರಂಭವಾಗಿ ಆ ಬೆಟ್ಟದ ಮೇಲೆ ಮುಗಿಲು ಮುಟ್ಟುವಂತೆ ಮಂತ್ರಘೋಷ ಜೇಂಕರಿಸಲಾರಂಭಿಸುಥತಿದ್ದಂತೆ ಜೈನಾಗಮ ಧರ್ಮದ ಸಂಪ್ರದಾಯದ ವಿಧಿ ಪ್ರಕಾರ ಮುನಿಶ್ರೀ ವೀರಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ
ಅವರ ಶ್ರೇಷ್ಠ ಪಂಚಕಲ್ಯಾಣ ಮಹೋತ್ಸವಕ್ಕೆ ಯಾವದೇ ತೊಡಕು ಉಂಟಾಗದಂತೆ ಶಾಂತಿಯುತವಾಗಿ ಸಾಗಲೆಂದು ಕ್ಷೇತ್ರ, ವಾಯು , ವಾಸ್ತು, ಮೇಘ, ಅಗ್ನಿ ಸಹಿತ ಪಂಚಕುಮಾರರಿಗೆ ಮೊದಲು ಪೂಜೆ ಅರ್ಪಿಸಿದರು .