ಇಂದು ಆಕಾಶವಾಣಿಯಲ್ಲಿ ಜಿಲ್ಲಾಧಿಕಾರಿಗಳ ನೇರ ಫೋನ್ ಇನ್ ಕಾರ್ಯಕ್ರಮ

0

ಹಾಸನ : ಹಾಸನ ಆಕಾಶವಾಣಿಯಲ್ಲಿ ಇಂದು ಬೆಳಗ್ಗೆ 09.10 ಗಂಟೆಯಿಂದ 11.10 ವರೆಗೆ ಜಿಲ್ಲಾಧಿಕಾರಿಗಳಾದ ಸತ್ಯಭಾಮ ಅವರೊಂದಿಗೆ “ಜನಸ್ಪಂದನ- ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಗರಸಭೆ ಅಧ್ಯಕ್ಷರು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಸನ ನಗರಸಭಾ ವ್ಯಾಪ್ತಿಯ

ಸಮಸ್ಯೆಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿ ಸಮಸ್ಯೆಗೆ ಪರಿಹಾರ

ಕಂಡುಕೊಳ್ಳುವ ಸಲುವಾಗಿ ಆಕಾಶವಾಣಿಯ ಮೂಲಕ ಈ ನೇರ

ಫೋನ್ ಇನ್ ಕಾರ್ಯಕ್ರಮವು ಅನುಕೂಲವಾಗಲಿದೆ. ಹಾಸನ ನಗರ

ವ್ಯಾಪ್ತಿಯಲ್ಲಿನ ಮೂಲಭೂತ ಸೌಕರ್ಯಗಳು, ನಾಗರೀಕ ಸೇವೆ,

ಇವೇ ಮುಂತಾದ ಕುಂದು ಕೊರತೆಗಳನ್ನು ಕುರಿತು ಸಾರ್ವಜನಿಕರು

ನೇರವಾಗಿ ಸಂವಾದ ಮಾಡುವ ಮೂಲಕ ಸಮಸ್ಯೆಗಳನ್ನು ಜಿಲ್ಲಾಧಿಕಾ-

ರಿಗಳ ಗಮನಕ್ಕೆ ತರಬಹುದಾಗಿದೆ.

ಸಾರ್ವಜನಿಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08172-246289, 08172-245258 ಈ ಸಂಖ್ಯೆಗೆ ಸಂಪರ್ಕಿಸಿ ಕುಂದು ಕೊರತೆಗಳನ್ನು ತಿಳಿಸಬಹುದಾಗಿದೆ.

LEAVE A REPLY

Please enter your comment!
Please enter your name here