ಹೊಳೆನರಸೀಪುರ ಪೋಲಿಸ್ ಪ್ರಕಟಣೆ

0

ಹೊಳೆನರಸೀಪುರ :
ಸಾರ್ವಜನಿಕರಲ್ಲಿ ಮನವಿ!!!
ಇತ್ತೀಚಿನ ದಿನಗಳಲ್ಲಿ ನಗರ ಮತ್ತು ಹಳ್ಳಿ ಪ್ರದೇಶಗಳಲ್ಲಿ ಮನೆ ಕಳ್ಳತನ, ಅಂಗಡಿ ಕಳ್ಳತನ, ವಾಹನ ಕಳ್ಳತನಗಳು ಹೆಚ್ಚಾಗುತ್ತಿದ್ದು , ಹಗಲಿನ ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನು ನೋಡಿಕೊಳ್ಳಲು ಬೆಕ್ಕು ಹಿಡಿಯುವವರಂತೆ, ವಿವಿಧ ರಿಪೇರಿ ಕೆಲಸ ಮಾಡುವವರಂತೆ, ವಿವಿಧ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುವವರಂತೆ ಬಂದು

ಬೀಗ ಹಾಕಿರುವ ಮನೆಗಳನ್ನು ನೋಡಿಕೊಂಡು ರಾತ್ರಿ ವೇಳೆಯಲ್ಲಿ ಬಂದು ಮನೆಗಳ ಬಾಗಿಲನ್ನು ಮುರಿದು ಕಳ್ಳತನ ಮಾಡುತ್ತಿರುವುದು, ಅಂಗಡಿಗಳ ಬಾಗಿಲನ್ನು ಮುರಿದು ಕಳ್ಳತನ ಮಾಡುತ್ತಿರುವುದು, ವಾಹನಗಳನ್ನು ಕಳ್ಳತನ ಮಾಡುತ್ತಿರುವುದು ಹೆಚ್ಚಾಗಿದ್ದು, ಇವರು ಸಾಮಾನ್ಯವಾಗಿ ನಗರದ ಸುತ್ತಮುತ್ತ, ಹಳ್ಳಿಗಳ ಬಳಿ, ರಸ್ತೆಗಳ ಬಳಿ ತಾತ್ಕಾಲಿಕ ಟೆಂಟುಗಳನ್ನು, ಶೆಡ್ಡುಗಳನ್ನು ನಿರ್ಮಾಣ ಮಾಡಿಕೊಂಡು ಇರುತ್ತಾರೆ ಹಾಗಾಗಿ

ನಿಮ್ಮ ಸುತ್ತಮುತ್ತ ಯಾವುದಾದರೂ ಗುಡಿಸಲು,ಟೆಂಟ್ ಗಳನ್ನು ಹಾಕಿಕೊಂಡು ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಅಥವಾ112 ಕಾಲ್ ಮಾಡಿ ಅವರ ಬಗ್ಗೆ ಮಾಹಿತಿಯನ್ನು ತುರ್ತಾಗಿ ನೀಡುವುದು.
Please share 🤝

LEAVE A REPLY

Please enter your comment!
Please enter your name here