ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಚಾರ ಅಕ್ಮಲ್ ಜಾವೀದ್.

0

ಹಾಸನ: ಜಿಲ್ಲೆಯಲ್ಲಿ ದಿನೆ ದಿನೆ ಭ್ರಷ್ಠಾಚಾರ ಎಂಬುದು ಹೆಚ್ಚಾಗುತ್ತಿರುವುದರಿಂದ ಕಡಿವಾಣ ಹಾಕಲು ಮುಂಜಾಗೃತೆವಹಿಸಬೇಕು ಇಲ್ಲವಾದರೇ ಮುಂದಿನ ದಿನಗಳಲ್ಲಿ ಹೋರಾಟ ಹಾದಿ ಹಿಡಿಯಲಾಗುವುದು ಮತ್ತು ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷದವತಿಯಿಂದ ಅಭ್ಯರ್ಥಿಗಳನ್ನು ಸ್ಪರ್ದೆಗೆ ಇಳಿಸಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆ.ಆರ್.ಎಸ್.) ಮುಖಂಡರಾದ ಅಕ್ಮಲ್ ಜಾವಿದ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರದಂದು ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಸೇಪ್ಡೆ ಆಗುವವರಿಗೆ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೇ ನಡೆಸಿ ಹಾಸನ ಜಿಲ್ಲೆಯ ಎಲ್ಲಾ ತಾಲುಕುಗಳಲ್ಲೂ ಕೆ.ಆರ್.ಎಸ್. ಪಕ್ಷದದಿಂದ ಸ್ಪರ್ದೆ ಮಾಡುತ್ತೇವೆ ಎಂದರು. ಮುಖ್ಯವಾಗಿ ನಮ್ಮ ಹಾಸನ ಜಿಲ್ಲೆಯ ೨ ಪ್ರಮುಖ ಕಾವೇರಿ ಮತ್ತು ಹೇಮಾವತಿ ನದಿ ಗಳಿದ್ದು, ಇದರಲ್ಲಿ ನಡೆಯುತ್ತಿರುವ ಮರಳು ದಂಧೆ ತಡೆಹಿಡಿಯಬೇಕಾಗಿದೆ. ಅರಕಲಗೂಡು ತಾಲ್ಲೂಕಿನಲ್ಲಿರುವ ತಂಬಾಕು ಮಂಡಳಿಯ ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಕ್ಕದೆ ತೊಂದರೆಗೀಡಾಗಿರುವುದರಿಂದ ಸರಿಯಾದ ಬೆಲೆ ನಿಗಧಿ ಮಾಡಬೇಕು. ತಂಬಾಕು ಬೆಳೆ ಬೆಳೆಯುತ್ತಿರುವ ರೈತರಿಗೆ ಬೀಜ ವಿತರಣೆಯಲ್ಲಿ ಮೋಸವಾಗುತ್ತಿದ್ದು, ರಸಗೊಬ್ಬರ ಔಷದಿಯಲ್ಲಿ ಕಳಪೆ ಗುಣಮಟ್ಟ ಮಾಡುತ್ತಿರುವ ಬಗ್ಗೆ ಹೋರಾಟ . ೪ ) ಜಿಲ್ಲೆಯಾದ್ಯಂತ ರೈತರುಗಳಿಗೆ ಅವಶ್ಯಕವಾದ ರಸಗೊಬ್ಬರ ಹಾಗೂ ಕ್ರಮಿನಾಶಕ ಔಷದಿ ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಅಕ್ರಮವಾಗಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

ಬಡವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಗುಣ ಮಟ್ಟದ ಪಡಿತರ ಪದಾರ್ಥಗಳನ್ನು ವಿತರಿಸುತ್ತಿದ್ದು, ಹಾಗೂ ತೂಕದಲ್ಲಿಯೂ ಕೂಡ ಮೋಸದ ದಂಧೆ ಎಲ್ಲಾ ಕಡೆ ವ್ಯಾಪಿಸಿದ್ದು, ಇದರ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಛೇರಿಗಳಲ್ಲಿ ರೈತರು ತಮ್ಮ ಕೆಲಸಕ ಕಾರ್ಯಗಳಿಗೆ ಬಂದರೆ ಲಂಚದ ಹಾವಳಿ ಹೆಚ್ಚಾಗಿದ್ದು, ಸರಿಯಾದ ಸಮಯದಲ್ಲಿ ಕೆಲಸಗಳು ಆಗುತ್ತಿಲ್ಲ. ಒಂದು ಕೆಲಸಕ್ಕೆ ಹತ್ತಾರು ಬಾರಿ ಸುತ್ತಾಡಬೇಕಾದ ಸಂದರ್ಭ ಇರುವುದರಿಂದ ಕೂಡಲೇ ಉನ್ನತ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡು ರೈತರುಗಳಿಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು. ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಅರಣ್ಯ ಸಂಪತ್ತುಗಳು ಇರುವ ಕಡೆಗಳಲ್ಲಿ ಅರಣ್ಯ ನಾಶವಗುತ್ತಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಕೂಡಲೇ ಕ್ರಮಕೈಗೊಂಡು ಅರಣ್ಯ ಸಂಪತ್ತನ್ನು ಉಳಿಸಲು ಮುಂದಾಗಬೇಕು. ರೋಗಿಗಳಿಗೆ ತಾಲ್ಲೂಕು ಹಾಲಿ ರಾಷ್ಟ್ರವ್ಯಾಪಿ ಹರಿದಾಡುತ್ತಿರುವ ಕೋವಿಡ್ -೧೯ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರಕದೆ ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ ವಿದಿಸುತ್ತಿದ್ದು, ಜನಸಾಮಾನ್ಯರಿಗೆ ಬಹಳ ಹೊರೆಯಾಗುತ್ತಿರುವುದರಿಂದ ನ್ಯಾಯಕ್ಕಾಗಿ ಹೋರಾಟದ ಹಾದಿ ಹಿಡಿಯಲಾಗುವುದು. ಇನ್ನೂ ಹತ್ತಾರು ಕಡೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದರ ವಿರುದ್ದವಾಗಿ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದಿಂದ ಹೋರಾಟ ರೂಪಿಸಲಾಗುವುದು. ಈ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ನಮ್ಮ ಪಕ್ಷದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದ ನಂತರ ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನುಡಿದರು.

LEAVE A REPLY

Please enter your comment!
Please enter your name here