ನನ್ನ ಕನಸು ನುಚ್ಚು ನೂರಾಯಿತು ಅಣ್ಣ !! ನನ್ನ ಕುಟುಂಬಕ್ಕೆ ಸಹಾಯ ಮಾಡಿ

0

UPSC ಓದಬೇಕು ಅಂತ ತಂದೆ ಹಣ ಕೂಡಿಟ್ಟಿದ್ದರು , ಕಾರು ಪಡೆದು ಮೋಸ ಮಾಡಿದವನ ಬಿಟ್ಟು ನಮ್ಮ ಬಳಿ ಹಣ ಪಡೆದರು , ನನ್ನ ಕನಸು ನುಚ್ಚು ನೂರಾಯಿತು ಅಣ್ಣ !! ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು‌ ಕಳಕಳಿಯಾಗಿ ಬೇಡುತ್ತಿರುವ

ಗ್ರಾಮೀಣ ಬಡ ರೈತ(ಚಂದ್ರಶೇಖರ್) ಅವರ ಕುಟುಂಬ ಕ್ಕೆ ನ್ಯಾಯಕ್ಕಾಗಿ ಅಲೆದು ಸಾಕಾಗಿದೆ , ಇವರಿಗೆ ನಿಜಕ್ಕು ನ್ಯಾಯ ಕೊಡಿಸೋರು ಯಾರು?? ಆರೋಪಿಯ ಹಿಡಿದು ಓದುವ ಗ್ರಾಮೀಣ ಪ್ರತಿಭೆಗೆ ಅನ್ಯಾಯವಾಗಿದೆ

ಹಾಸನ : (ಹಾಸನ್_ನ್ಯೂಸ್ !, ನಮಸ್ಕಾರ ಹಾಸನ , ನಮ್ಮ ಹಾಸನ ಜಿಲ್ಲೆಯ ಬಡ ರೈತ ಕುಟುಂಬ ಒಂದು ಈ ಲಾಕ್ ಡೌನ್ ನಲ್ಲಿ ಬೇರೆ ರೀತಿಯಲ್ಲಿ ಸಮಸ್ಯೆ ಸಿಲುಕಿಕೊಂಡಿದೆ , ನ್ಯಾಯಯುತವಾಗಿ ತಮಗೆ ಬಂದ ಕಷ್ಟಕ್ಕೆ ಕಾನೂನಿನ ಅಡಿಯಲ್ಲಿ ಸಾಲಕ್ಕೆ ಮೊರೆಯಾದರು ಅಲ್ಲಿಯು

ಮೋಸವಾಗಿದೆ , 2013 ರಲ್ಲಿ ಸಾಲ ಸೋಲ ಮಾಡಿ ಬದುಕಿನಲ್ಲಿ ಮುಂದೆ ಬರುವ ಉದ್ದೇಶದಿಂದ ಚೆವರ್ಲೆಟ್ ಕಾರೊಂದನ್ನು ಲೋನ್ ಖಾಸಗಿ ಫಿನಾನ್ಸ್ ಮೂಲಕ ಪಡೆದುಕೊಂಡಿದ್ದಾರೆ ., ಆದರೆ

ವಿಧಿಯಾಟಕ್ಕೆ ಮನೆಯಲ್ಲಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿ ಅವರ ಆಸ್ಪತ್ರೆ ಖರ್ಚಿಗೆ ಸಮಸ್ಯೆ ಯಾದ್ದರಿಂದ ಕನಸಿನ ಕಾರನ್ನು ಮಾರಿದ್ದಾರೆ ., ಕಾರನ್ನು ಪಡೆದ ಅರಸೀಕೆರೆ ಗಜೇಂದ್ರ ಎಂಬುವವರು ಲೋನ್ ಕಟ್ಟದೆ , ಈ ವರೆಗೂ ಕಾರಿಗೆ ಸಂಬಂಧಿಸಿದ

ಟ್ಯಾಕ್ಸ್ ಕಟ್ಟದೆ ಉಡಾಫೆಯಿಂದ ವರ್ತಿಸಿ , ಇದೀಗ ಚಂದ್ರಶೇಖರ್ ಅವರ ಮನೆಯ ಮುಂದೆ ಪ್ರತಿದಿನ ಖಾಸಗಿ‌ ಫಿನಾನ್ಸ್ ಕಂಪನಿಯವರು ಹಣ ಕಟ್ಟಿ ಎಂದು ಸತಾಯಿಸುತ್ತಿದ್ದು .,

RTO ಪ್ರಕಾರ ಎಲ್ಲಾ ನ್ಯಾಯಯುತ ಹಕ್ಕು ಪತ್ರಗಳು ಇವರ ಬಳಿ ಇದ್ದರೆ ಏನೂ ಮಾಡದ ಸ್ಥಿತಿ ಎದುರಾಗಿದೆ ., ಈಗಾಗಲೇ

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪೊಲೀಸ್ ಠಾಣೆ ಹಾಗೂ ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ವರೆಗೂ ದೂರು ನೀಡಲಾಗಿದ್ದು ., ಕಾರು ಪಡೆದು ಪರಾರಿಯಾದ ಗಜೇಂದ್ರನ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ., ಸಾಲ ನೀಡಿದ ಖಾಸಗಿ ಫಿನಾನ್ಸ್ ಎಂದಿನಂತೆ ಬಡ್ಡಿ ವಿಧಿಸಿ ತನ್ನ ಕಾಯಕ ಮುಂದುವರೆಸಿದೆ ., ಆದರೆ

ಈಗಾಗಲೇ ಸಾಲದ ಹೊರೆ ತಗ್ಗಿಸಿಕೊಳ್ಳಲು ತಮ್ಮಲ್ಲಿದ್ದ ಕಾರನ್ನು ಮಾರಿದರೂ ಏನೂ ಪ್ರಯೋಜನ ವಾಗದಂತಾಗಿದೆ .

ಈ ಮೂಲಕ ಹಾಸನ ಶ್ರೀರಾಮ್ ಫಿನಾನ್ಸ್ ಅವರಿಗೆ ಕಾಲಾವಕಾಶ ಕೊಟ್ಟು ಆರೋಪಿ ಗಜೇಂದ್ರ C.M.(09164143371) ಸಿಗುವ ವರೆಗೂ ಬಡ ರೈತನ ಕುಟುಂಬಕ್ಕೆ ಯಾವುದೇ ಒತ್ತಡ ಏರದಂತೆ ಸಹಾಯ ಮಾಡಬೇಕು , ಹಾಗೂ

ಹಾಸನ ಜಿಲ್ಲಾ ಪೊಲೀಸ್ ‌ವತಿಯಿಂದ ಆರೋಪಿಯ ಬಂಧಿಸಿ , ಆಲೂರಿನ ಜನ್ನಾಪುರದ ಚಂದ್ರಶೇಖರ್ ಕುಟುಂಬಕ್ಕೆ ತುರ್ತಾಗಿ ಸಹಾಯಕ್ಕೆ ಧಾವಿಸಿ ನ್ಯಾಯ ಒದಗಿಸಿಕೊಡ ಬೇಕೆಂದು ಈ ಮೂಲಕ ದಯಮಾಡಿ ವಿನಂತಿಸಿಕೊಳ್ಳುತ್ತಿದೆ 🙏

ಇಂತಿ!,

https://m.facebook.com/story.php?story_fbid=3924762200967018&id=195025720607370
ನೊಂದ ರೈತ ಕುಟುಂಬ
ಚಂದ್ರಶೇಖರ್ (62)
ಜನ್ನಾಪುರ ಗ್ರಾಮ,
ಆಲೂರು ತಾಲ್ಲೂಕು, ಹಾಸನ
ಫೋನ್ ಸಂಖ್ಯೆ : 09449945691 , 7349449312

LEAVE A REPLY

Please enter your comment!
Please enter your name here