ಆಲೂರು ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಎಸ್.ಕೆ.ಎನ್.ಆರ್.ಪ್ರೌಢಶಾಲೆ ಕೆ.ಹೊಸಕೋಟೆ ವಿದ್ಯಾರ್ಥಿಗಳ ಉತ್ತಮ ಸಾದನೆ :- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.ಆಲೂರು ತಾಲ್ಲೂಕು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆಲೂರು ಹಾಗೂ ಸರ್ಕಾರಿ ಪ್ರೌಢಶಾಲೆ ಮಡಬಲು. ಇವರ ಸಂಯುಕ್ತಾಶ್ರಯದಲ್ಲಿ ನಡೆದ ಆಲೂರು ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕೆ.ಹೊಸಕೋಟೆಯ ಎಸ್.ಕೆ.ಎನ್.ಆರ್.ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾದನೆ ಮಾಡಿರುತ್ತಾರೆ.
ಬಾಲಕರ ವಾಲಿಬಾಲ್ ಪ್ರಥಮ
ಬಾಲಕಿಯರ ವಾಲಿಬಾಲ್ ಪ್ರಥಮ
ಬಾಲಕರ ಖೋ ಖೋ ದ್ವಿತೀಯ
ಬಾಲಕರ ಟ್ರಿಪಲ್ ಜಂಪ್ ದಿಗಂತ ಕೆ ಪಿ ಪ್ರಥಮ ,ಹರೀಶ ದ್ವಿತೀಯ
ಬಾಲಕರ 4×100 ಮೀ ಪ್ರಥಮ
ಬಾಲಕಿಯರ 4×100 ಮೀ ದ್ವಿತೀಯ
ಬಾಲಕಿಯರ 200 ಮೀ ವರಲಕ್ಷ್ಮಿ ದ್ವಿತೀಯ
ಬಾಲಕಿಯರ 400 ಮೀ ಆಶಾ ದ್ವಿತೀಯ
ಬಾಲಕರ 1500 ಮೀ ದಿಗಂತ್ ಕೆ.ಪಿ ದ್ವಿತೀಯ
ಬಾಲಕಿಯರ ಎತ್ತರ ಜಿಗಿತ ಆಶಾ ಪ್ರಥಮ
ಬಾಲಕರ ಎತ್ತರ ಜಿಗಿತ ನಿತಿನ್ ಕೆ.ಟಿ ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಎಮ್.ಪಿ.ಶಿವಕುಮಾರ್ ತಿಳಿಸಿರುತ್ತಾರೆ.
ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ದೈಹಿಕ ಶಿಕ್ಷಕರಾದ ಹೆಚ್.ಪಿ.ವೆಂಕಟೇಶ ರವರನ್ನು ಮಲ್ನಾಡ್ ಪ್ರೌಢಶಾಲಾ ಸಂಘದ ಅಧ್ಯಕ್ಷರಾದ ಶ್ರೀ ಎಸ್.ವಿ.ರುದ್ರಪ್ಪರವರು,ಉಪಾದ್ಯಕ್ಷರಾದ ಶ್ರೀ ಎನ್.ಕೆ.ಶ್ಯಾಮರಾವ್ ರವರು,ಕಾರ್ಯದರ್ಶಿಗಳಾದ ಶ್ರೀ ಕೆ.ಎ.ಕೊಟ್ಟೂರಪ್ಪರವರು,ಸಂಘದ ನಿರ್ದೇಶಕರುಗಳು,ಸದಸ್ಯರುಗಳು,ಪೋಷಕರುಗಳು,ಮತ್ತು ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರುಗಳು ಅಭಿನಂದನೆ ಸಲ್ಲಿಸಿರುತ್ತಾರೆ.