ಹಾಸನ : ನಗರಕ್ಕೆ 24×7 ಕುಡಿಯುವ ನೀರು ಪೂರೈಸುವ ಅಮೃತ್ ಯೋಜನೆ ಶೇ 90ರಷ್ಟು ಪೂರ್ಣ, ಗುರುವಾರ ದಿಂದಲೇ ಪ್ರಾಯೋಗಿಕವಾಗಿ ಚಾಲನೆ ” -ಪ್ರೀತಂ ಗೌಡ (ಹಾಸನ ವಿಧಾನಸಭಾ ಕ್ಷೇತ್ರ ಶಾಸಕರು)
• ಪ್ರಸ್ತುತ ನಗರಸಭೆಯ 35 ವಾರ್ಡ್‍ಗಳ ಪೈಕಿ 16 ವಾರ್ಡ್‌ಗಳಿಗೆ ಪೈಪ್‌ಲೈನ್ ಅಳವಡಿಕೆ ಕಾರ್ಯ ಮುಕ್ತಾಯ
• ಪ್ರಾಯೋಗಿಕ ವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ
• ಉಳಿದ 17 ವಾರ್ಡ್‌ಗಳಿಗೆ ಮುಂದಿನ ಹಂತವಾಗಿ ಪೈಪ್‌ಲೈನ್ ಅಳವಡಿಸಿದ ನಂತರ ನೀರು ಪೂರೈಕೆ
• ನಗರಸಭೆಗೆ ಹೊಸದಾಗಿ ಸೇರ್ಪಡೆ ಯಾಗಿರುವ 25 ಹಳ್ಳಿಗಳಿಗೂ ನೀರು ಪೂರೈಕೆ ಮಾಡಲು ಅಸ್ತು
• ಪ್ರಾಯೋಗಿಕವಾಗಿ ನೀರು ಹರಿಸುತ್ತಿರು ವುದರಿಂದ ಕ್ಲೋರಿನ್ ಮಿಶ್ರಿತ ನೀರು ಪೂರೈಕೆ ಆಗಲಿದ್ದು, ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ
• ಅಮೃತ್ ಯೋಜನೆ 136 ಕೋಟಿ ವೆಚ್ಚ ಈಗಾಗಲೇ ಆಗಿದೆ
• ಜಯನಗರದಲ್ಲಿ ಬೃಹತ್ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆಗೆ 60 ಕೋಟಿ ವೆಚ್ಚ ಅನುದಾನ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ
• ಸದ್ಯ ಮನೆಗಳಿಗೆ ಮೀಟರ್ ಅಳವಡಿಸುವುದಿಲ್ಲ
• ಪೈಪ್‌ಲೈನ್ ಅಳವಡಿಕೆ ಪೂರ್ಣಗೊಂಡ ಬಳಿಕ ಮೀಟರ್ ಅಳವಡಿಸಿ, ನಾಗರಿಕರು, ಸದಸ್ಯರ ಜತೆ ಚರ್ಚಿಸಿ ಶುಲ್ಕ ನಿಗದಿ
• ವಿದ್ಯಾನಗರ, ಜಯನಗರಕ್ಕೆ ಪೈಪ್ ಲೈನ್ ವ್ಯವಸ್ಥೆ
• ಬೂವನಹಳ್ಳಿ, ಗವೇನಹಳ್ಳಿಗಳಿಗೆ ಹೊಸದಾಗಿ ಪೈಪ್‌ಲೈನ್ ಅಳಡಿಸಲು ಕರೆ • ಕೃಷ್ಣನಗರ ಸೇರಿದಂತೆ ಹೊಸ ಬಡಾವಣೆ ಗಳಿಗೂ ನೀರೂ ಪೂರೈಕೆ ಶೀಘ್ರದಲ್ಲೇ
-ಪ್ರೀತಮ್ ಜೆ ಗೌಡ (ಹಾಸನ ವಿಧಾನಸಭಾ ಕ್ಷೇತ್ರ ಶಾಸಕರು)