ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಮಿಂಚಲಿದ್ದಾರೆ ಸಕಲೇಶಪುರದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು

0

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತ್ತ್ಯುತ್ತಮ ಆಟ ಪ್ರದರ್ಶಿಸಿ ರಾಜ್ಯ ಮಟ್ಟಕ್ಕೆ ಸಕಲೇಶಪುರ ತಾಲೂಕಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಆಯ್ಕೆ ಆಗಿದ್ದಾರೆ.

ಖೋ- ಖೋ ವಿಭಾಗದಲ್ಲಿ ಪ್ರೀತಿ ಎನ್ ಎಮ್, ಗಾಯತ್ರಿ, ನಿಸರ್ಗ, ದಿವ್ಯ ಕೆ. ಟಿ, ಮತ್ತು ಹರ್ಡಲ್ಸ್ ವಿಭಾಗದಲ್ಲಿ ಗಾಯತ್ರಿ, ಪೂರ್ಣಿಮಾ ಕೆ. ಟಿ ಮತ್ತು ಥ್ರೋ ಬಾಲ್ ವಿಭಾಗದಲ್ಲಿ ರಾಧಿಕಾ ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ವಿ.ಪಿ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗ, ಸಿಬ್ಬಂದಿ ಅಭಿನಂದನೆ ತಿಳಿಸಿದ್ದಾರೆ.

ಸದಾ ಮಳೆ ಸುರಿಯುವ ನಡುವೆಯೂ ಮತ್ತು ತರಬೇತಿ ನೀಡಲು ದೈಹಿಕ ಶಿಕ್ಷಕರಿಲ್ಲದ ಪರಿಸ್ಥಿಯಲ್ಲೂ ನಮ್ಮ ಮಲೆನಾಡಿನ ಅಪ್ಪಟ ಗ್ರಾಮೀಣ ಪ್ರತಿಭೆಗಳು ಸಾಧನೆ ಮಾಡಿದ್ದು, ಕಾಲೇಜಿಗೆ ಹಾಗೂ ತಾಲೂಕಿಗೆ ಗೌರವ ತಂದುಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

LEAVE A REPLY

Please enter your comment!
Please enter your name here