ಕೊರೋನ ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕಾಂಶ ಹೆಚ್ಚಿಸುವ ಔಷಧಿ ವಿತರಣೆ.
ಬೇಲೂರು : ಬೇಲೂರು ತಾಲ್ಲೂಕು ಅರೇಹಳ್ಳಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ಕೊರೋನ ೩ ನೇ ಅಲೆ ಮುಂಜಾಗ್ರತಾ ಕ್ರಮವಾಗಿ , ಅಂಗನವಾಡಿ ಮಕ್ಕಳಿಗೆ ತಪಾಸಣೆ ಮಾಡಿ, ಅವರಲ್ಲಿ ಕಡಿಮೆ ತೂಕ ಹಾಗೂ ರಕ್ತ ಹೀನತೆ ಇರುವ ಮಕ್ಕಳಿಗೆ ಅವರ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಆರೋಗ್ಯ ಜಾಗೃತಿ ಜೊತೆಗೆ ಪೌಷ್ಟಿಕಾಂಶ ಔಷಧಿಗಳನ್ನು ಆಸ್ಪತ್ರೆ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ ಮಮತ ಜಿ ಮಾತನಾಡಿ ನಾಲ್ಕು ಮತ್ತು ಐದು ವರ್ಷದ ಒಳಗಿರುವ ಮಕ್ಕಳು ಅತೀ ಕಡಿಮೆ ತೂಕವಿರುವ ಮತ್ತು ರಕ್ತ ಹೀನತೆ ಇರುವ ಮಕ್ಕಳಿಗೆ ಅವರ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಆರೋಗ್ಯ ಜಾಗೃತಿ ಜೊತೆಗೆ ಪೌಷ್ಟಿಕಾಂಶ ಔಷಧಿಗಳನ್ನು ಮಕ್ಕಳ ಆರೋಗ್ಯವನ್ನು ತಪಾಸಣೆ ಮಾಡಿ ಅವರಿಗಾಗಿ ಇಂದು ಗ್ರಾಮಸ್ಥರ ಸಹಕಾರದೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ನೀಡುತ್ತಿದ್ದೆವೆ ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ನೀಡಲು ಸಲಹೆ ನೀಡಿದರು.
ನಂತರ ಡಾ. ಹಿರಣ್ಣಯ್ಯ ಮಾತನಾಡಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಆಗಾಗಿ ಮಕ್ಕಳ ಸುರಕ್ಷತೆಗಾಗಿ ನೀಡುತ್ತಿರಿರುವ ಔಷಧಿಗಳನ್ನು ತಪ್ಪದೇ ಪ್ರತಿನಿತ್ಯ ಮಕ್ಕಳಿಗೆ ಕೊಡಲು ಹೇಳಿದರು.
ಕರೋನ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಸಾವು ನೋವುಗಳಾಗಿದ್ದು ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ಹರಡುವ ಸಾಧ್ಯತೆಗಳ ಬಗ್ಗೆ ತಜ್ಞರು ತಿಳಿಸಿದ್ದಾರೆ ಆಗಾಗಿ ಮಕ್ಕಳ ಅರೋಗ್ಯದ ಬಗ್ಗೆ ಪೋಷಕರು ಜಾಗೃತಿಯಾಗಿರ ಬೇಕು ಎಂದು ನಟರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಡಾ ಮಮತ, ಡಾ ನಯನ ,ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಕ್ಕಳ, ಪೋಷಕರು ಇದ್ದರು.