ಹಾಸನ : ಸತತ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಭೂವನಹಳ್ಳಿ (ವಡ್ಡರಹಟ್ಟಿ) ಯಲ್ಲಿ ನಡೆದಿದೆ.
ಗ್ರಾಮದ ವಿಜಯ್ ಕುಮಾರ್ ಮತ್ತು ಚೈತ್ರ ದಂಪತಿಯ ಪುತ್ರ ಪ್ರಜ್ವಲ್ (13) ಎಂಬಾತನೇ ಮೃತಪಟ್ಟ ಬಾಲಕನಾಗಿದ್ದಾನೆ.
ಏಳನೇ ತರಗತಿ ಓದುತ್ತಿದ್ದ ಪ್ರಜ್ವಲ್ ಅವರು ಮನೆಯಲ್ಲಿ ಮಲಗಿದ್ದನು. ಸತತ ಮಳೆಯಿಂದ ಮನೆಯ ಗೋಡೆ ಕುಸಿದು ಬಾಲಕನ ಮೇಲೆ ಬಿದ್ದ ಬಿದ್ದ ಪರಿಣಾಮ ಆತ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ನುಗ್ಗೇಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.