ಇಂದು ಅರಸೀಕೆರೆ ಶಾಸಕರು ಕಣಕಟ್ಟೆ ಹೋಬಳಿಯ ವಿವಿಧ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸ್ಥಳಿಯವಾಗಿ ಕೋವಿಡ್ ನಿರ್ವಹಣೆಯ ಸ್ಥಿತಿ ಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಶಿವಾಳ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಮಾತನಾಡಿದ ಶಾಸಕರು ಕೊರೋನಾವು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹರಡುತ್ತಿದೆ. ಇದಕ್ಕೆ ಸರ್ಕಾರದ ನೀತಿಯು ಕಾರಣವಾಗಿದೆ ಹೋಮ್ ಐಸೋಲೇಷನ್ ನಿಂದಾಗಿ ಕೊರೋನಾ ಹೆಚ್ಚಾಗಿ ಹರಡುತ್ತಿದೆ…ಈ ವಿಚಾರವಾಗಿ ಡಾಕ್ಟರ್ ಬಳಿ ಮಾತನಾಡಿದ ಶಾಸಕರು ಹೋಮ್ ಐಸೋಲೇಷನ್ ಮಾಡಬೇಡಿ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸಿ ಎಂದರು…ಇದರ ಜಾಗೃತಿ ಬಗ್ಗೆ ಸ್ಥಳಿಯವಾಗಿ ಹೆಚ್ಚು ಹೆಚ್ಚು ಪ್ರಚಾರ ಮಾಡಿ .ಅಂತರ ಕಾಪಾಡಿ. ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ. ಯಾವುದೇ ತೊಂದರೆಗಳು ಕಂಡು ಬಂದರೆ ಕೂಡಲೇ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ ಎಂದರು… ಯಾರನ್ನು ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಮಾಡಲು ಡಾಕ್ಟರ್ ಗೆ ಸೂಚಿಸಿದರು. ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿನ ವ್ಯವಸ್ಥೆ ಪರಿಶೀಲಿಸಿದರು.. ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿದರು. ಪರೀಕ್ಷಾ ಕಿಟ್, ಔಷಧ ಗಳ ದಾಸ್ತಾನು ಪರಿಶೀಲಿಸಿ ಕೊರತೆಯಾದರೆ ಕೂಡಲೇ ತಿಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ರಾಂಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ್.ಗ್ರಾ.ಪಂ.ಸದಸ್ಯರುಗಳಾದ ಮರುಳಸಿದ್ದೆಗೌಡ ಮುಕ್ತ ಚನೇಗೌಡ, ಮುಖಂಡರಾದ ಗಂಗಾಧರ್, ಸ್ವಾಮಿ, ಹೇಮಾವತಿ,ಹಾಜರಿದ್ದರು
ತಾ.ಪಂ.ಇ.ಓ. ನಟರಾಜು, ತಾಲ್ಲೂಕು ಆರೋಗ್ಯಾಧೀಕಾರಿ ನಾಗಪ್ಪ, ಡಾಕ್ಟರ್ ಯೋಗಿಶ್,
ಭವ್ಯ ಸಿಸ್ಟರ್, ಪಿಡಿಓ ಈಶ್ವರ್ ಬೇನಕಟ್ಟಿ ಉಪಸ್ಥಿತರಿದ್ದರು.ಕಣಕಟ್ಟೆ
ಹೋಬಳಿಯ ಜೆ.ಸಿ.ಪುರದ ಸಮುದಾಯ ಆರೋಗ್ಯ ಕೇಂದ್ರ , ಕಾಮಸಮುದ್ರ ಹಾಗೂ ಡಿ.ಎಂ.ಕುರ್ಕೆ, ಮಾಡಾಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಬೇಟಿ ನೀಡಿದರು…
Home Hassan Taluks Arsikere ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸ್ಥಳಿಯವಾಗಿ ಕೋವಿಡ್ ನಿರ್ವಹಣೆಯ ಸ್ಥಿತಿ ಗತಿ ಪರಿಶೀಲಿಸಿದ ಅರಸೀಕೆರೆ ಶಾಸಕ...