ಟೆಲಿವಿಷನ್ ಜರ್ನಲಿಸಂ /ಕ್ಯಾಮರಾಮೆನ್ ತರಬೇತಿಗೆ ಅರ್ಜಿ ಆಹ್ವಾನ(ಯುವಕ / ಯುವತಿಯರಿಗೆ Television Journalism, Camaranman Training)

0

ಹಾಸನ ಜ.5(ಹಾಸನ್_ನ್ಯೂಸ್ );- ಡಾ: ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ  ಇವರ ವತಿಯಿಂದ ಪರಿಶಿಷ್ಟ ಜಾತಿಯ ಎಸ್.ಎಸ್.ಎಲ್.ಸಿ. ಪಾಸಾದ ಹಾಗೂ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಹಾಗೂ

ಡಿ.19.12.2020 ಕ್ಕೆ 18 ವರ್ಷ ಹಾಗೂ ಮೇಲ್ಪಟ್ಟು ಗರಿಷ್ಟ 30 ವರ್ಷದೊಳಗಿರುವ ನಿರುದ್ಯೋಗಿ ವಿದ್ಯಾವಂತ ಯುವಕ / ಯುವತಿಯರಿಗೆ Television Journalism, Camaranman Training ತರಬೇತಿಗಳನ್ನು ಮಂಡ್ಯದಲ್ಲಿರುವ ತರಬೇತಿ ಸಂಸ್ಥೆಯಲ್ಲಿ ನೀಡಲಾಗುವುದು.

ತರಬೇತಿಯು 3 ತಿಂಗಳ ಅವಧಿಯಾಗಿದೆ.
     ತರಬೇತಿ ಪಡೆಯಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಜಿಲ್ಲಾ ವ್ಯವಸ್ಥಾಪಕರು, ಡಾ:ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ, ಎಸ್.ಬಿ.ಎಂ.ಕಾಲೋನಿ, ಅರಸೀಕೆರೆ ರಸ್ತೆ, ಹಾಸನ ಇವರಿಂದ ಅರ್ಜಿ ನಮೂನೆಯನ್ನು ಪಡೆದು ಅರ್ಜಿಯೊಂದಿಗೆ ಪೋಟೋ, ಜೀವಿತಾವಧಿಯ ಜಾತಿ ಪ್ರಮಾಣ ಪತ್ರ, 5 ವರ್ಷ ಅವಧಿಯವರಿಗೆ ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ, ಆಧಾರ್‍ಕಾರ್ಡ್, ರೇಷನ್‍ಕಾರ್ಡ್, 10ನೇ ತರಗತಿ ಉತ್ತೀರ್ಣಗೊಂಡಿರುವ ಅಂಕಪಟ್ಟಿ (ಕಡ್ಡಾಯವಾಗಿ ಸಲ್ಲಿಸ ತಕ್ಕದ್ದು),

ಯಾವುದೇ ಪದವಿಯ ಅಂಕಪಟ್ಟಿಗಳನ್ನು ದ್ವಿಪ್ರತಿಯಲ್ಲಿ ಜಿಲ್ಲಾ ಕಚೇರಿಗೆ ಜ.25 ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಡಾ:ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ಎಸ್.ಬಿ.ಎಂ. ಕಾಲೋನಿ ಅರಸೀಕೆರೆ ರಸ್ತೆ ಹಾಸನ ಇವರಿಗೆ ಸಲ್ಲಿಸಬವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08172-267213 / 9448569023

LEAVE A REPLY

Please enter your comment!
Please enter your name here