ಕಾಣೆಯಾದ ಬಾಲಕಿ ಹುಡುಕಿಕೊಡುವಂತೆ ಮನವಿ ಮಾಡಿದ ನೊಂದ ಕುಟುಂಬ

0

ಈ ಫೊಟೋದಲ್ಲಿರುವ ಬಾಲಕಿ ಕಾಣೆಯಾಗಿ ಒಂದು ವಾರವಾಗಿದ್ದು ಮನೆಯವರು ದಿನಾ ಆತಂಕದಲ್ಲಿ ದಿನದೂಡುತ್ತಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ, ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದ ಮನೆಯಿಂದ ಕಾಣೆಯಾಗಿದ್ದು ಸಹಾಯಕ್ಕಾಗಿ ಈ ಮೂಲಕ ಮನವಿ ಮಾಡುತ್ತಿದ್ದಾರೆ.,  ದಿವ್ಯ ಉಮೇಶ ಮತ್ತು ಇಬ್ಬರು ಮಕ್ಕಳಲ್ಲಿ ಮೊದಲನೇ ಮಗಳಾದ 16 ವರ್ಷ ವಯಸ್ಸಿನ ಸ್ಪಂದನಗಳು, ಸಕಲೇಶಪುರದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದು, ಕಳೆದವಾರ ಅಂದರೆ ದಿನಾಂಕ 19-07-2021ರಂದು ಬೆಳಗ್ಗೆ 8:30 ಗಂಟೆಗೆ ತಾಯಿ ಕೆಲಸ ನಿಮಿತ್ತ ಮನೆಯಿಂದ ಹೊರಹೋಗಿದ್ದು, ವಾಪಾಸ್ ಮಧ್ಯಾಹ್ನ ಸುಮಾರು 12PM ಗಂಟೆಯ ಸಮಯದಲ್ಲಿ ಮನೆಗೆ ಬಂದಾಗ, ಮನೆಯಲ್ಲಿ ಸ್ಪಂದನ ಇಲ್ಲದೇ ಇರುವುದು ಕಂಡು ಬಂತು. ಅಕ್ಕಪಕ್ಕದ ಮನೆಗಳು ಆಕೆಯ ಸ್ನೇಹಿತರ ಮನೆಗೆ ಹೋಗಿರಬಹುದೆಂದು ಸಂಜೆ 5:00 ಗಂಟೆಯವರೆಗೆ ಕಾದರ ಸಹ ಮನೆಗೆ ಬಾರದ ಕಾರಣ, ಪೋಷಕರು ಗಾಬರಿ ಗೊಂಡು, ಗ್ರಾಮ , ಅಕ್ಕಪಕ್ಕದ ಗ್ರಾಮಗಳು ಮತ್ತು ದೂರದ ಊರಿನ ಇವರ ಸಂಬಂಧಿಕರು, ಸ್ನೇಹಿತರುಗಳ ಮನೆಗಳಲ್ಲಿ ಮಗಳು ಹುಡುಕಿದರೂ ಸಹ ಇದುವರೆಗೂ ಸುಳಿವು ದೊರೆತಿರುವುದಿಲ್ಲ. ಆದುದರಿಂದ ಈ ಕೆಳಕಂಡ ಚಹರೆವುಳ್ಳ ಕಾಣೆಯಾಗಿರುವ ಸ್ಪಂದನ (ಬಾಲಕಿ) ಹುಡುಕಿಕೊಡುವಂತೆ ಮನೆಯವರು ಈ ಮೂಲಕ‌ ಪ್ರಾರ್ಥಿಸುತ್ತಿದ್ದಾರೆ

ಕಾಣೆಯಾದ ಬಾಲಕಿ ವಿವರ :
ಹೆಸರು : ಸ್ಪಂದನ
ವಯಸ್ಸು : 16
ಎತ್ತರ : 5.2
ಮುಖದ ಚಹರೆ : ಗುಂಡು‌ಮುಖ
ಬಣ್ಣ : ಎಣ್ಣೆಗೆಂಪು
ಭಾಷೆ : ಕನ್ನಡ
ಕಾಣೆಯಾದಾಗ ಧರಿಸಿದ್ದ ಬಟ್ಟೆ : ಚೂಡಿದಾರ ( ಪ್ಯಾಂಟ್ ಕಪ್ಪು , ಟಾಪ್ ಬಿಳಿ)

ಈ ಬಾಲಕಿ ಬಗ್ಗೆ ಮಾಹಿತಿ ಸಿಕ್ಕರೆ ಸ್ಥಳೀಯ ಪೊಲೀಸ್ ಠಾಣೆ ಅಥವಾ 9008837143 ಅಥವಾ 9740962110 ಫೋನ್ ಸಂಖ್ಯೆ ಕರೆಮಾಡಿ ಸಹಾಯ ಮಾಡಬಹುದು

ಮೇಲ್ದಂಡ ಚಹರವುಳ್ಳ ಬಾಲಕಿ ಆದಷ್ಟು ಬೇಗ ಸಿಗಲಿ ಎಂದು ಪ್ರಾರ್ಥಿಸೋಣ

ಧನ್ಯವಾದಗಳು

LEAVE A REPLY

Please enter your comment!
Please enter your name here