ಹಾಸನ : ಇತ್ತೀಚಿನ ವಿದ್ಯಮಾನಗಳ ಪ್ರಕಾರ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಈ ಹೊತ್ತಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಬೇಕಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅವರು ಬಿಜೆಪಿ ಮನೆ ಬಾಗಿಲಲ್ಲಿ ನಿಂತುಕೊಂಡಿದ್ದಾರ ಅಥವಾ .ಮಾನಸಿಕವಾಗಿ ಜೆಡಿಎಸ್‌ನಿಂದ ಬಹಳ ಹಿಂದೆಯೇ ಹೊರಗೆ ಬಂದಿದ್ದ ರಾಮಸ್ವಾಮಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತಿತ್ತು, ಆದರೆ ಕಾಂಗ್ರೆಸ್‌ನವರು ಟಿಕೆಟ್ ನೀಡುವ ಲಕ್ಷಣ ಕಾಣಿಸುತ್ತಿಲ್ಲವೋ ಅಥವಾ ಸ್ವತಃ ಎಟಿಆರ್ ಪ್ಲಾನ್ ಬೇರೆಯೇ ಇದೆಯೋ ಗೊತ್ತಿಲ್ಲ. , ಸದ್ಯ ಇದೀಗ ಬಂದ ಸುದ್ದಿ ಪ್ರಕಾರ ಅರಕಲಗೂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಎ.ಟಿ.ರಾಮಸ್ವಾಮಿ ,
ಕಮಲದ ಕಡೆ ಕಣ್ಣು ಹಾಯಿಸಿದ್ದಾರೆ ಎನ್ನಲಾಗುತ್ತಿದೆ , . ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ನಾಯಕರೊಂದಿಗೆ ರಾಮಸ್ವಾಮಿ ಅವರು ಚರ್ಚೆ ನಡೆಸಿದ್ದು, ಇದಕ್ಕೆ ರಾಜ್ಯ ಮುಖಂಡರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಔಪಚಾರಿಕವಾಗಿ ದಿಲ್ಲಿ ನಾಯಕರ ಗಮನಕ್ಕೆ ತಂದು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಖಚಿತಪಡಿಸುವುದಾಗಿ ರಾಜ್ಯ ನಾಯಕರು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ . , ಕಳೆದ ಒಂದು ವರ್ಷದಿಂದಲೂ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್‌ನಿಂದ, ವಿಶೇಷವಾಗಿ ಎಚ್.ಡಿ.ರೇವಣ್ಣ ಅವರಿಂದ ಅಂತರಕಾಯ್ದುಕೊಂಡಿದ್ದು ಎಲ್ಲರಿಗೂ ಗೊತ್ತಿದೆ . ಆದರೆ
ದೇವೇಗೌಡರ ಸಂಪರ್ಕದಲ್ಲಿದ್ದರು ಹೌದು . ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರನ್ನು ಎದುರು ಹಾಕಿಕೊಂಡು ಜೆಡಿಎಸ್‌ನಲ್ಲಿ ರಾಜಕಾರಣ ಮಾಡುವುದು ಕಷ್ಟ ಎಂದು ಭಾವಿಸಿದ್ದ ಅವರು ತಮ್ಮ ಮಾತೃಪಕ್ಷ ಕಾಂಗ್ರೆಸ್ ಸೇರುವ ಪ್ರಯತ್ನವನ್ನು ನಡೆಸಿದ್ದರು ಎನ್ನಲಾಗಿದೆ. , ಆಶ್ಚರ್ಯ ವೆಂದರೆ , ಅದೇ ಹೊತ್ತಿಗೆ ಬಿಜೆಪಿಯಲ್ಲಿದ್ದ ಎ.ಮಂಜು ಕೂಡ ಕಾಂಗ್ರೆಸ್ ಸೇರ್ಪಡೆಗೆ ಪ್ರಯತ್ನ ನಡೆಸಿದ್ದರು. ಈ ಬೆಳವಣಿಗೆ ರಾಜ್ಯ ನಾಯಕರಿಗೇ ಗೊಂದಲ ಮೂಡಿಸಿತ್ತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎ.ಮಂಜು ಪರ ಬ್ಯಾಟಿಂಗ್ ನಡೆಸಿದ್ದರೆ, ಸಿದ್ದರಾಮಯ್ಯ ಎ.ಟಿ.ರಾಮಸ್ವಾಮಿ ಪರ ಒಲವು ತೋರಿ, ಎ.ಮಂಜು ಸೇರ್ಪಡೆಗೆ ಬಲವಾಗಿ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿ . ಎ.ಮಂಜು ಜೆಡಿಎಸ್ ಸಹಿತ ಅರಕಲಗೂಡು ಟಿಕೆಟ್ ಬಹುತೇಕ ಖಚಿತಪಡಿಸಿಕೊಂಡದ್ದು ಇದೀಗ ಜಗಜಾಹಿರು ಎ.ಮಂಜು ಅವರು ಜೆಡಿಎಸ್ ಅಭ್ಯರ್ಥಿಯಾಗುವುದು ಖಚಿತವಾದ ಅನಂತರ ರಾಮಸ್ವಾಮಿ ಅವರು ಕಾಂಗ್ರೆಸ್ ಸೇರುವ ಪ್ರಯತ್ನ ತೀವ್ರಗೊಳಿಸಿದರು. ಆದರೆ ಅಷ್ಟರಲ್ಲಿ ಎಂ.ಟಿ.ಕೃಷ್ಣೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಅನ್ನು ಸಿದ್ದರಾಮಯ್ಯ ಅವರು ಬಹುತೇಕ ಖಚಿತಪಡಿಸಿದ್ದರು. ಹಾಗಾಗಿ ರಾಮಸ್ವಾಮಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಸಿದ್ಧರಾಮಯ್ಯ ಅವರು ಉತ್ಸುಕರಾಗಿದ್ದರೂ ವಿಧಾನಸಭಾ ಚುನಾವಣೆ ಟಿಕೆಟ್ ಕೇಳಬೇಡಿ. ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದ ಅಭ್ಯರ್ಥಿಯಾಗುವುದಾದರೆ ಕಾಂಗ್ರೆಸ್ ಸೇರ್ಪಡೆಗೆ ಸ್ವಾಗತ ಎಂದು ಹೇಳಿದ್ದರು ಎನ್ನಲಾಗಿದೆ . ,
ಬಿಜೆಪಿ ಹೋಗ್ತಾರಾ ಎಟಿಆರ್??
ಈ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯದಿದ್ದರೆ ಲೋಕಸಭಾ ಚುನಾವಣೆ ವರೆಗೆ ತಮ್ಮ ಬೆಂಬಲಿಗರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ ಅಥವಾ ವಿಧಾನಸಭಾ ಚುನಾವಣೆಯೇ ಸೂಕ್ತ . ಹಾಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದ ರಾಮಸ್ವಾಮಿ ಅವರು ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದಾರೆ ಎನ್ನುವುದಾದರೆ. ಈಗಾಗಲೇ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗಾರಮೇಶ್ ಅವರು ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸಬಯಸಿದ್ದರು ಎಟಿಆರ್ ಪ್ರತಿಸ್ಪರ್ಧಿ ಬಿಜೆಪಿ ಟಿಕೆಟ್ ಗೆ ಎನ್ನಲಾಗುತ್ತಿದೆ. ಆದರೆ
ಈಗ ಬಿಜೆಪಿ ಮುಖಂಡರು ಯೋಗಾರಮೇಶ್ ಅವರಿಗೆ ಯಾವ ಭರವಸೆ ನೀಡಿ ರಾಮಸ್ವಾಮಿ ಅವರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂಬುದು ಕಾದುನೋಡಬೇಕಿದೆ , ಒಂದು ವೇಳೆ ಬಿಜೆಪಿ ಟಿಕೆಟ್ ಎಟಿಆರ್ ಅಥವಾ ಯೋಗ ರಮೇಶ್ ನಿರ್ಧಾರದ ಮೇಲೆ ಏನು ಅರಕಲಗೂಡು ರಾಜಕೀಯ ಬದಲಾವಣೆ ಕಾದು ನೋಡ ಬೇಕಿದೆ .