ಬೆಂಗಳೂರು/ಮಂಗಳೂರು : ಪ್ರಯಾಣಿಕರ ದಟ್ಟಣೆ ನಿವಾರಿಸಲು ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಈ ಕೆಳಕಂಡ ರೈಲು ಸಂಖ್ಯೆಯ ವಿಶೇಷ ರೈಲು ಸಂಚರಿಸಲಿವೆ ನೋಡಿ .
ಆ.28ರಂದು ಸಂಜೆ 4.35ಕ್ಕೆ ವಿಶೇಷ ರೈಲು (06569) ಬೆಂಗಳೂರಿನಿಂದ ಹೊರಡಲಿದ್ದು . ಮರು ದಿನ ಬೆಳಿಗ್ಗೆ 9.30ಕ್ಕೆ ಮಂಗಳೂರು ತಲುಪಲಿದೆ. ಈ ರೈಲಿಗೆ ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ಶೋರನೂರು, ತಿರೂರ್, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನೂರು, ಕಾಞಂಗಾಡ್ ಮತ್ತು ಕಾಸರಗೋಡುಗಳಲ್ಲಿ ನಿಲುಗಡೆ ಇರಲಿದೆ.
ಆ.29ರಂದು ರಾತ್ರಿ 8.5ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಈ ರೈಲು (06570) ಹೊರಡಲಿದ್ದು, ಮರು ದಿನ ಬೆಳಿಗ್ಗೆ 11.45ಕ್ಕೆ ಬೆಂಗಳೂರು ತಲುಪಲಿದೆ. ಕಾಸರಗೋಡು, ಕಾಞಂಗಾಡ್, ಪಯ್ಯನೂರು, ಕಣ್ಣೂರು, ತಲಶ್ಶೇರಿ, ವಡಕರ, ಕೋಝಿಕ್ಕೋಡ್, ತಿರೂರ್, ಶೋರನೂರು, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರ್, ಈರೋಡ್, ಸೇಲಂ, ಓಮಲೂರ್, ಧರ್ಮಪುರಿ ಮತ್ತು ಹೊಸೂರುಗಳಲ್ಲಿ ನಿಲುಗಡೆಯಾಗಿ ಹೊರಡಲಿದೆ.
( ಎಸಿ-2 ಶ್ರೇಣಿಯ 2, ಎಸಿ-3 ಶ್ರೇಣಿಯ 7, ಸ್ತ್ರೀಪರ್ ವರ್ಗದ 10 ಹಾಗೂ ಸಾಮಾನ್ಯ ದರ್ಜೆಯ 2, ಲಗೇಜ್/ಬ್ರೇಕ್ ವ್ಯಾನ್‌ಗಳು 2 ಹಾಗೀ ಒಂದು ಪ್ಯಾಂಟ್ರಿ ಕಾರು ಸೇರಿ ಒಟ್ಟು 24 ಬೋಗಿಗಳನ್ನು ಈ ರೈಲು ಹೊಂದಿದೆ )