
ಹಾಸನ : ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಬಳಿ ಆ24 ಗುರುವಾರ ಸ್ಕೂಟರ್ನಿಂದ ಬಿದ್ದು ಶಿಕ್ಷಕಿ ಮೃತಪಟ್ಟ ಘಟನೆ ನಡೆದಿದೆ .,
ಮುಗಳೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಕುಸುಮಾ (38) ಮೃತರು. ಶಾಲೆಯಿಂದ ಸ್ಕೂಟರ್ನಲ್ಲಿ ಹಾಸನ ಕಡೆಗೆ ತೆರಳುತ್ತಿದ್ದಾಗ ದೊಡ್ಡಮಗ್ಗೆ ರಸ್ತೆ ಉಬ್ಬಿನಲ್ಲಿ ಆಯತಪ್ಪಿ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .
ಇವರಿಗೆ ಪತಿ, ಇಬ್ಬರು ಮಕ್ಕಳು ಇದ್ದು , ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ .