ಬೇಲೂರು: ಬೇಲೂರು ತಾಲೂಕು ಅರೇಹಳ್ಳಿ ಗ್ರಾಮದಲ್ಲಿ 75ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಡೋನರ್ ಫೋರಮ್ ಅವರು ಜೀವ ಸಂಜೀವಿನಿ ರಕ್ತಕೇಂದ್ರ ಹಾಸನ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು ಪಾಪ್ಯುಲರ್ ಫ್ರಂಟ್ ಡೋನರ್ ಫೋರಮ್ ಸದಸ್ಯರಾದ ಸೂಫಿಯನ್ ಪಾಷಾ ಗಣ್ಯರನ್ನು ಸ್ವಾಗತಿಸಿದರು ನಂತರ ಮಾತನಾಡಿದ ಗ್ರಾಮದ ತಾಯಿ ಎಂದು ಗುರುತಿಸಲ್ಪಡುವ ಖ್ಯಾತ ವೈದ್ಯೆ ಡಾ|| ಮಮತಾ ಜಿ. ಗ್ರಾಮದ ಯುವಕರ ಸಮಾಜಸೇವಾ ಮನೋಭಾವದ ನೋಟ ತೃಪ್ತಿದಾಯಕ ವಾಗಿದ್ದು ಇಂತಹ ಕೆಲಸಗಳಲ್ಲಿ ಯುವಕರು ಆಸಕ್ತಿಯನ್ನು ತೋರಿಸಬೇಕಾಗಿದೆ ಹಾಗೆಯೇ ರಕ್ತ ನೀಡುವುದರಿಂದ ಯಾರಿಗೂ ಯಾವುದೇ ರೀತಿಯಾದ ನಷ್ಟವಿಲ್ಲ 50 ಕೆಜಿ ಕಿಂತ ಹೆಚ್ಚು ದೇಹದ ತೂಕವನ್ನು ಹೊಂದಿರುವವರು ಪ್ರತಿಒಬ್ಬರು ರಕ್ತವನ್ನು ನೀಡಬಹುದು ಎಂದರು.

ಈ ವೇಳೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಫಾತಿಮಾ ಬಿ, ಉಪಾಧ್ಯಕ್ಷೆ ಮುನೀರ, ಸದಸ್ಯರಾದ ಫರ್ಹಾನ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಆಫ್ಸಾರ್ ಅಲಿ, ಪಾಪ್ಯುಲರ್ ಫ್ರಂಟ್ ಡೋನರ್ ಫೋರಮ್ ಅಧ್ಯಕ್ಷರಾದ ಜಮೀರ್ ಅಹ್ಮದ್, ಉಪಾಧ್ಯಕ್ಷರಾದ ಮೊಹಮ್ಮದ್ ಸಾದಿಕ್, ಎಸ್ ಡಿ ಪಿ ಐ ಅಧ್ಯಕ್ಷರಾದ ಮೊಹಮ್ಮದ್ ಷರೀಫ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷರಾದ ಅರ್ಷದ್ ಇನ್ನಿತರರು ಉಪಸ್ಥಿತರಿದ್ದರು.
ವರದಿ: ನಸೀರ್ ಉದ್ದಿನ್