ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಕೆ ಎಸ್ ಲಿಂಗೇಶ್ ಬೇಲೂರು ಶಾಸಕರು

0

12-06-21 ರಂದು ಮಾನ್ಯ ಶಾಸಕರಾದ ಕೆ ಎಸ್ ಲಿಂಗೇಶ್ ಅವರು ಉಂಡಿಗನಹಾಳು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ ಸುಮಾರು 80 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ನವೀನರವರು, ಪಿ ಡಿ ಓ ಉಷಾರಾಣಿಯವರು, ಮಹಾಲಿಂಗಪ್ಪನವರು, ರಂಗನಾಥ್ ರವರು, ಜಾವಗಲ್ ಹೋಬಳಿ ಜೆ ಡಿ ಎಸ್ ಅಧ್ಯಕ್ಷರಾದ ಸಿದ್ದೇಗೌಡರವರು, ಮುಖಂಡರಾದ ತಿಮ್ಮಣ್ಣ ನವರು ಉಪಸ್ಥಿತರಿದ್ದರು

14-06-21 ರಂದು ಮಾನ್ಯ ಶಾಸಕರಾದ ಕೆ ಎಸ್ ಲಿಂಗೇಶ್ ಅವರು ದೇವಿಹಳ್ಳಿ ಬೋವಿ ಕಾಲೋನಿಯ ಅಂಗನವಾಡಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ‘ಅಂಗನವಾಡಿ ಶೌಚಾಲಯ ಹಾಗೂ ಇತರೆ ಕಾರ್ಯಗಳಿಗೆಂದು 50 ಸಾವಿರ ರೂ ಅನುದಾನವನ್ನು ನೀಡಿದ್ದೇನೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಉತ್ತಮ ಬಾಲ್ಯ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಈ ಕಾರ್ಯ ಮಾಡಲಾಗಿದೆ ‘ ಎಂದರು. ಈ ಸರಳ ಕಾರ್ಯಕ್ರಮದಲ್ಲಿ ಸಿ ಡಿ ಪಿ ಓ ಆದ ಶಿವಪ್ರಕಾಶ್ ರವರು, ಸದಸ್ಯರಾದ ಸುನಿಲ್ ರವರು, ಮಾಜಿ ಸದಸ್ಯರಾದ ಅಣ್ಣಪ್ಪ ನವರು, ಹನುಮಂತು ರವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು .

12-06-21ರಂದು ಮಾನ್ಯ ಶಾಸಕರಾದ ಕೆ ಎಸ್ ಲಿಂಗೇಶ್ ಅವರು ಕರಗುಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಯಡಿಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಕರಗುಂದದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾದ ಶ್ರುತಿರವರು ಸದಸ್ಯರಾದ ದಯಾನಂದರವರು ಹಾಗೂ ಎಲ್ಲಾ ಸದಸ್ಯರು, ಪಿ ಡಿ ಓ ರವಿರವರು. ಜಾವಗಲ್ ಹೋಬಳಿ ಜೆ ಡಿ ಎಸ್ ಅಧ್ಯಕ್ಷರಾದ ಸಿದ್ದೇಗೌಡರವರು ಮುಖಂಡರಾದ ನಾಗರಾಜ ರೆಡ್ಡಿ ರವರು, ಧನಂಜಯ ರವರು ಉಪಸ್ಥಿತರಿದ್ದರು

12-06-21 ರಂದು ಮಾನ್ಯ ಶಾಸಕರಾದ ಕೆ ಎಸ್ ಲಿಂಗೇಶ್ ಅವರು ಕರಗುಂದ ಪಂಚಾಯತಿ ವ್ಯಾಪ್ತಿಯ ಗೊಲ್ಲರಹಳ್ಳಿಯಲ್ಲಿ ಜೆ ಜೆ ಎಂ ಯೋಜನೆಯಲ್ಲಿ ಪ್ರತಿ ಮನೆ ಮನೆಗೂ ನಲ್ಲಿಯ ಮೂಲಕ ನೀರು ನೀಡುವ ಯೋಜನೆಗೆ ಭೂಮಿ ಪೂಜೆಯನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆಯಾದ ಶ್ರುತಿರವರು ಸದಸ್ಯರಾದ ದಯಾನಂದ್ ಶ್ರೀನಿವಾಸ್ ಹಾಗೂ ಜಾವಗಲ್ ಹೋಬಳಿ ಜೆ ಡಿ ಎಸ್ ಅಧ್ಯಕ್ಷರಾದ ಸಿದ್ದೇಗೌಡರವರು ಮುಖಂಡರಾದ ಮನು, ತಿಮ್ಮಣ್ಣನವರು ಗುತ್ತಿಗೆದಾರರಾದ ಯತೀಶ್ ಅವರು ಉಪಸ್ಥಿತರಿದ್ದರು

09-06-21 ರಂದು ಬೇಲೂರಿನ ಮಾನ್ಯ ಶಾಸಕರಾದ ಕೆ. ಎಸ್.ಲಿಂಗೇಶ್ ಅವರು ಹಳೇಬೀಡಿನ ಕೃಷಿ ಕೇಂದ್ರದಲ್ಲಿ ರೈತರಿಗೆ ಟಾರ್ಪಲ್ ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ‘ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಬ್ಸಿಡಿ ದರದಲ್ಲಿ ಟಾರ್ಪಲ್ ವಿತರಣೆ ಕೈಗೊಂಡಿದ್ದು, ಆನ್ ಲೈನ್ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಪಾರದರ್ಶಕತೆಯಿಂದ ಕೂಡಿದೆ ಎಂದರು ‘. ಈ ಸಂದರ್ಭದಲ್ಲಿ AO ಪವಿತ್ರರವರು, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ರಂಗೇಗೌಡರು, ಮುಖಂಡರಾದ ಮಲ್ಲಿಕಣ್ಣ ನವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here