ಹೀಗೊಂದು ಒಳ್ಳೆಯ ವಿಷಯ ಕೋವಿಡ್ ಭೀತಿಯಿಂದ ಅಂದರೆ ನೀವು ನಂಬಲೇ ಬೇಕು 👉ಹಾಸನದಲ್ಲಿ ತಾಯಿ, ಮಗನನ್ನು ಒಂದಾಗಿಸಿದ ಕೊರೊನಾ; 22 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಪುತ್ರ ಮರಳಿ ಮನೆಗೆ

0

ಹಾಸನ: ಕೊರೊನಾ ಭಾರತದೆಲ್ಲೆಡೆ ದಿನದಿಂದ ದಿನಕ್ಕೆ ತನ್ನ ರೌದ್ರ ನರ್ತನ ವೈರಸ್ , ಸೋಂಕಿತರ ಪ್ರಕರಣ ಹೆಚ್ಚಿಸಿ ,  ಸಾವಿನ ಸಂಖ್ಯೆಯೂ ಗಣನೀಯವಾಗಿ ಏರಿಸುತ್ತಿದೆ .,

•ಕೊರೊನಾಕ್ಕೆ ಇಡೀ ಮಾನವ ಸಂಕುಲ ಶಾಪ ಹಾಕುತ್ತಿದೆ. ಅದೇಕೆ ವಕ್ಕರಿಸಿ , ಬದುಕಬೇಕಾದ ಜೀವವನ್ನು ಕಸಿದುಕೊಳ್ಳುತ್ತಿದೆ.

ಇದರ ರಬ್ಬಸ ಇನ್ನೆಷ್ಟು ದಿನ ಗೊತ್ತಿಲ್ಲ .  ಮನೆ ಮಂದಿಯನ್ನು ಕಳೆದುಕೊಂಡವರು ಕಣ್ಣೀರು ನಿಲ್ಲೋದು ಯಾವಾಗ .

• ಹಾಸನ ಜಿಲ್ಲೆಯಲ್ಲೊಂದು ಕುಟುಂಬಕ್ಕೆ ಕೊರೊನಾ ದೊಡ್ಡ ಪಾಠ ಕಲಿಸಿ ಕುಟುಂಬ ಒಂದಾಗಿದೆ

ಮನೆಯ ಮಗ ಮನೆ ಬಿಟ್ಟು  20 ವರ್ಷ ದಾಟಿತ್ತು .,  ಇರುವ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರಿಗೆ ,  ಮಗನನ್ನು ನೆನೆದು ನರೆಹೊರೆಯವರ ಪ್ರಶ್ನೆಗಳಲ್ಲೇ , ನಿತ್ಯ ಕುಗ್ಗುತ್ತಿದ್ದರು.

• ಮಗನನ್ನು ನೆನೆಯುತ್ತಾ ಏಕಾಂಗಿಯಾಗಿ ದಂಪತಿ ಜೀವನ ಸಾಗಿಸುತ್ತಿದ್ದವರಿಗೆ ಮಗ ಮರಳಿ ಬಂದಿದ್ದು  ಇದೇ ಕೊರೋನಾ ದಿಂದ ಎಂದರೆ , ಈ ಕುಟುಂಬಕ್ಕೆ ಅದೇನು ಸಂತೋಷ ಗೊತ್ತಾ ??

• ಮಗನನ್ನು ತನ್ನ ತಾಯಿಯ ಮಡಿಲ ಸೇರಿಸಲು ನಡೆದ ಆ ಘಟನೆ :

ಹಾಸನ ತಾಲೂಕಿನ ಹೊಂಗೆರೆ ಗ್ರಾಮದ ಶೇಖರ್ ಎಂಬಾತ 16 ವರ್ಷದಲ್ಲಿದ್ದಾಗ ಮನೆ ಬಿಟ್ಟು ಹೋಗಿ ಮುಂಬೈ ನಲ್ಲಿದ್ದ ., ಈಗ ಈತನಿಗೆ 38ವರ್ಷ

• . ಗ್ರಾಮದ ರಾಜೇಗೌಡ ಮತ್ತು ಅಕ್ಕಯ್ಯಮ್ಮ ದಂಪತಿ ಮಗ ಸುಳಿವು ಸಿಗದಿದ್ದರಿಂದ ಮಗ ಸತ್ತೇ ಹೋಗಿದ್ದಾನೆ ಎಂದು ಕೊಂಡಿದ್ದರು. ಆದರೆ ಮಗ 22 ವರ್ಷದ ಬಳಿಕ ಪೋಷಕರ ಹುಡುಕಿ ಮನೆಗೆ ಬಂದಿದ್ದಾರೆ.

• ಮಗನನ್ನು ನೋಡಿದ ಅಪ್ಪ- ಅಮ್ಮನಿಗೆ ಇನ್ನಿಲ್ಲದ ಸಂತಸ ತಂದಿದೆ. ಮಹಾರಾಷ್ಟ್ರದಲ್ಲಿ ಕೊರೊನ ಹಾವಳಿ ಹೆಚ್ಚಿದ್ದರಿಂದ ನಿನ್ನೆ (ಏಪ್ರಿಲ್ 27) ಶೇಖರ್ (38) ಮನೆಗೆ ಮರಳಿದ್ದು, ಕೊರೊನಾ ಹೊಂಗೆರೆ ಗ್ರಾಮದ ದಂಪತಿಗೆ ಉಡುಗೊರೆ ನೀಡಿದಂತಾಗಿದೆ.

• ಹಾಗಂತ ಹೊಂಗೆರೆ ಗ್ರಾಮದವರು ಗಾಬರಿಯಾಗ ಬೇಡಿ , ಮುಂಬೈ ನಿಂದ ಬಂದ ನನ್ನ ಕೋವಿಡ್ ಟೆಸ್ಟ್ ಆಗಿದೆ ಎಂದು ಊರಿನವರಿಗೆ ಧೈರ್ಯ ತುಂಬಿದ್ದಾನೆ

HASSANNEWS  ಸಖತ್ newzz ಮಗ

LEAVE A REPLY

Please enter your comment!
Please enter your name here