ನಾಳೆ ನಾಡಿದ್ದು ಹೊಳೆನರಸೀಪುರ ತಾಲೂಕಿನಲ್ಲಿರುವ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

0

ಹಾಸನ : ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಸಿಂಗಾಪುರ 66/11 ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ 66. ಕೆ.ವಿ. ವಿದ್ಯುತ್ ಮಾರ್ಗವನ್ನು ಲಿಲೋ ಮಾಡುವ ಕಾಮಗಾರಿಗೆ ಸಂಬಂಧಿಸಿದಂತೆ 6.128 ಕಿ.ಮೀ ಉದ್ದದ ಎರಡನೇ ಸರ್ಕ್ಯೂಟ್ ನನ್ನು ಸಿಂಗಾಪುರ ಉಪಕೇಂದ್ರದಿಂದ ಕಡವಿನಕೊಟೆ ಯಾ ಚೇನಹಳ್ಳಿ ಮಾರ್ಗದವರೆಗೆ (ಸಿಂಗಾಪುರ ಟ್ಯಾಪ್ ಪಾಯಿಂಟ್ ) ವಿದ್ಯುತ್ ವಾಹಕ ಅಳವಡಿಸಲು ವಿದ್ಯುತ್ ಮಾರ್ಗದ ಲೈನ್‌ಕ್ಲಿಯರ್ ತೆಗೆದುಕೊಳ್ಳುವುದರಿಂದ 66/11 ಕೆ.ವಿ ಎಫ್ 1 ಎಲಿವಾಲ, ಎಫ್ 2-ಬೀರನಹಳ್ಳಿ, ಎಫ್ 3-ಗುಂಜೇವು, ಎಫ್ 4-ಮೂಡಲಹಿಪ್ಪೆ, ಎಫ್ 5-ಘನ್ನಿಕಡ, ಎಫ್ 6-ವಳಂಬಿಗೆ, ಎಫ್ 7 ಗೋಂದಿಹಳ್ಳಿ, ಎಫ್ 8-ಶ್ರವಣೂರು, ಎಫ್ 9 ಮಾರನಾಯಕನಹಳ್ಳಿ, ಎಫ್ 10-ಸಿಂಗಾಪುರ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕೆ.ವಿ ಪೂರಕಗಳ ಗ್ರಾಹಕರಿಗೆ ಮತ್ತು 11 ಸಾರ್ವಜನಿಕರಿಗೆ ಮಾ. 04 ಮತ್ತು ಮಾ. 05 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು. ಸಾರ್ವಜನಿಕರು ಸಹಕರಿಸಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here