ಮೈಸೂರು-ಹಾಸನ-ಚಿಕ್ಕಮಗಳೂರಿಗೆ ರಾಜಹಂಸ ಬಸ್
03/03/2022 : ಮೈಸೂರು/ಹಾಸನ/ಚಿಕ್ಕಮಗಳೂರು : KSRTC ಮೈಸೂರು ಗ್ರಾಮಾಂತರ ವಿಭಾಗವು ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲು ಮೈಸೂರಿನಿಂದ ಹಾಸನ ಮತ್ತು ಚಿಕ್ಕಮಗಳೂರು ಮಾರ್ಗದಲ್ಲಿ ರಾಜಹಂಸ ಬಸ್‌ಗಳ ಕಾರ್ಯಾಚರಣೆ ಆರಂಭಿಸಿದೆ.
ಮೈಸೂರಿನಿಂದ ಚಿಕ್ಕಮಗಳೂರಿಗೆ ಬೆಳಿಗ್ಗೆ 6.30 ಮತ್ತು 9.30ಕ್ಕೆ ಬಸ್‌ಗಳು ಹೊರಡಲಿವೆ. ಚಿಕ್ಕಮಗಳೂರಿನಿಂದ ಬೆಳಿಗ್ಗೆ 6.30 ಮತ್ತು 9.30ಕ್ಕೆ ಮೈಸೂರಿಗೆ ನಿರ್ಗಮಿಸಲಿವೆ. ಮೈಸೂರಿನಿಂದ ಹಾಸನಕ್ಕೆ ನಿತ್ಯ ನಾಲ್ಕು ಬಸ್ (ಬೆಳಿಗ್ಗೆ 6.30, 7.20, 9.30 ಮತ್ತು ಮಧ್ಯಾಹ್ನ 2.30ಕ್ಕೆ ಹೊರಡಲಿವೆ) ಸಂಚರಿಸಲಿವೆ. ಹಾಸನದಿಂದ ಮೈಸೂರಿಗೆ ಬೆಳಿಗ್ಗೆ 10.30, ಮಧ್ಯಾಹ್ನ 2, ಸಂಜೆ 4.15 ಮತ್ತು 6ಕ್ಕೆ ಬಸ್ ಸೇವೆ ಇರಲಿದೆ.
ಪ್ರಯಾಣದರ ಮೈಸೂರು-ಚಿಕ್ಕಮಗಳೂರು ₹ 245, ಮೈಸೂರು-ಬೇಲೂರು ₹ 190, ಮೈಸೂರು- ಹಾಸನ ₹ 145, ಮೈಸೂರು-ಹೊಳೆನರಸೀಪುರ ₹ 115 ಮತ್ತು ಮೈಸೂರು-ಕೆ.ಆರ್.ನಗರ ₹ 55 ನಿಗದಿಪಡಿಸಲಾಗಿದೆ ಎಂದು ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ