ಹಾಸನ ಮೂಲದ ನ್ಯಾಚುರಲ್ ಸ್ಟಾರ್ ಆಕಾಶ್ ನಾಯಕನಾಗಿ ನಟಿಸುತ್ತಿರುವ ಕಟ್ಟ ಕಡೆಯ ನಿಮಿಷ ಚಿತ್ರದ ಚಿತ್ರೀಕರಣ ಮುಕ್ತಾಯ

0

ನ್ಯಾಚುರಲ್ ಸ್ಟಾರ್ ಆಕಾಶ್ ನಾಯಕನಾಗಿ ನಟಿಸುತ್ತಿರುವ ಕಟ್ಟ ಕಡೆಯ ನಿಮಿಷ ಚಿತ್ರದ ಚಿತ್ರೀಕರಣ ಮುಕ್ತಾಯ

ಕನ್ನಡದಲ್ಲಿ ಈಗಾಗಲೇ ಅನೇಕ ನೈಜ ಘಟನೆ ಆಧಾರಿತ ಚಿತ್ರಗಳು ಬಂದಿವೆ ಇ ಸಾಲಿಗೆ ಕಟ್ಟ ಕಡೆಯ ನಿಮಿಷ ಚಿತ್ರವೂ ಸೇರಿದೆ.
ಇ ಹಿಂದೆ ಕನ್ನಡದಲ್ಲಿ ಬಂದು ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದ್ದ 6-5:2 ಚಿತ್ರದ ಚಿತ್ರವನ್ನು ತಮಿಳು ಭಾಷೆಗೆ ರಿಮೇಕ್ ಮಾಡಿದ್ದ ನಿರ್ದೇಶಕ ಜಗನ್ ಅಲೋಶಿಯಸ್ ಸದ್ದಿಲ್ಲದೆ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ “ಕಟ್ಟ ಕಡೆಯ ನಿಮಿಷ ” ಎಂಬ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ಮಿಸಿದ ಚರ್ಚಿನಲ್ಲಿ ಇ ಚಿತ್ರದ ಚಿತ್ರೀಕರಣವನ್ನು ಮಾಡಿದ್ದು
1961 ರಲ್ಲಿ ಆ ಚರ್ಚಿನಲ್ಲಿ ನಡೆದ ನೈಜ ಘಟನೆಯನ್ನು ಆದರಿಸಿ ಇ ಚಿತ್ರವನ್ನು ತೆರೆಗೆ ತರಲು ಸಿದ್ದಮಾಡಿಕೊಂಡಿದ್ದು ಇಂದು ಕುಂಬಳ ಹೊಡೆಯುವುದರ ಮೂಲಕ ಚಿತ್ರೀಕರಣವನ್ನು ಮುಕ್ತಾಯ ಮಾಡಲಾಯಿತು.

ಹಾಸನ ಸಮೀಪದ ಶೆಟ್ಟಿಹಳ್ಳಿ ಬೆಂಗಳೂರು ಸುತ್ತಮುತ್ತಲಿನಲ್ಲಿ ಚಿತ್ರೀಕರಣವನ್ನು ಚಿತ್ರತಂಡ ಮಾಡಿದೆ.
ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ .ಇ ಚಿತ್ರಕ್ಕೆ ನಾಯಕ ನಟನಾಗಿ ಮೊಗ್ಗಿನ ಮನಸು ಚಿತ್ರದ ನಾಯಕ ನಟ ನ್ಯಾಚುರಲ್ ಸ್ಟಾರ್ ಆಕಾಶ್ ನಟಿಸಿದ್ದು ಅವರಿಗೆ ಕನ್ನಡ ಭಾಷೆಯಲ್ಲಿ ನಾಯಕಿಯಾಗಿ ಸ್ಟೇಫಿ ಡೇವಿಡ್ ತಮಿಳು ಭಾಷೆಯಲ್ಲಿ ನಿತ್ಯಾರಾಜ್ ನಟಿಸಿದ್ದು. ಜೀವಾ .ಲೋಹಿಕಾ ಹಾಗೂ ಹಿರಿಯ ಕಲಾವಿದ ಗಣೇಶ್ ರಾವ್ ತಾರಗಣದಲ್ಲಿದ್ದು .ಕನ್ನಡ ಹಾಗೂ

ತಮಿಳು ಭಾಷೆಗೆ ನಾಯಕನಾಗಿ ನ್ಯಾಚುರಲ್‌ ಸ್ಟಾರ್ ಆಕಾಶ್ ನಟಿಸಿದ್ದಾರೆ . ಆರ್ಯನ್ ಪ್ರೊಡಕ್ಷನ್ ಮೂಲಕ ಯತೀಶ್ ಅವರು ಇ ಚಿತ್ರವನ್ನು ನಿರ್ಮಾಣ ಮಾಡಿದ್ದು .ಟೀಸನ್ ಅವರ ಸಂಗೀತವಿದ್ದು .ಕಥೆಗೆ ತಕ್ಕಂತೆ 1 ಫೈಟ್ ಹಾಗೂ 1 ಸಾಂಗ್ ಇದ್ದು ಇಂದಿಗೆ ಚಿತ್ರತಂಡ ಚಿತ್ರೀಕರಣವನ್ನು ಮುಗಿಸಿದೆ ಎಲ್ಲವೂ ಅಂದುಕೊಂಡಂತೆ ಆದರೆ ಎರಡು ಭಾಷೆಯಲ್ಲಿ ಚಿತ್ರವನ್ನು ಏಕಕಾಲದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕ ಜಗನ್ ಅಲೋಶಿಯಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here