ಮಲೆನಾಡಿನಲ್ಲಿ ಅಧಿಕ ಮಳೆಯಿಂದ ಕೊಳೆಯುತ್ತಿರುವ ಕಾಫಿ: ನೆರವಿಗೆ ಧಾವಿಸುವಂತೆ ಬೆಳೆಗಾರರು ಒತ್ತಾಯ

0

ಸಕಲೇಶಪುರ: ಕಾಫಿ ಹಾಗೂ ಏಲಕ್ಕಿ ನಾಡೆಂದೇ ಗುರುತಿಸಿಕೊಂಡಿರುವ ತಾಲೂಕಿನಲ್ಲಿ ಈ ಬಾರಿ ಮೂರು ನಾಲ್ಕು ತಿಂಗಳಿನಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ಇದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
*ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ಅತಿವೃಷ್ಟಿ ಮಳೆಗೆಕಾಫಿ, ಮೆಣಸು, ಭತ್ತದ ಬೆಳೆಗೆ ವ್ಯಾಪಕ ಹಾನಿಯುಂಟಾಗಿತ್ತು.ಸಾಮಾನ್ಯವಾಗಿ ಈ ವೇಳೆಗೆ ತಾಲೂಕಿನ ಮಲೆನಾಡು ಭಾಗ ದಲ್ಲಿಮಳೆ ಪ್ರಮಾಣ ತೀರಾ ಇಳಿಮುಖವಾಗಿರುತ್ತದೆ. ಆದರೆ, ಈ ಬಾರಿ ಅಕ್ಟೋಬರ್‌ ಪ್ರಾರಂಭವಾಗಿ 16 ದಿನ ಕಳೆದರೂ ಮಳೆಬಿಡುವು ನೀಡುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಕೃಷಿಕರು ತತ್ತರಿಸಿಹೋಗಿದ್ದಾರೆ.

*ಒಣಗಿಸುವುದಕ್ಕೂ ಕಷ್ಟವಾಗಿದೆ: ಸಾಮಾನ್ಯವಾಗಿ ನವೆಂಬರ್‌ನಲ್ಲಿ ಅರೇಬಿಕಾ ಕಾಫಿ ಕೊಯ್ಲಿಗೆ ಬರುತ್ತದೆ. ಆದರೆ, ಈ ಬಾರಿ ಸುರಿದ ಭಾರೀ ಮಳೆಯಿಂದ ತೇವಾಂಶ ಹೆಚ್ಚಾಗಿ ಬೇಗನೆ ಕಾಫಿಹಣ್ಣಾಗಿದೆ. ಸದ್ಯ ಹಣ್ಣಾಗಿರುವ ಕಾಫಿ ಬೀಜವನ್ನಾದ್ರೂ ಕೊಯ್ಲುಮಾಡೋಣ ಅಂದರೆ ಮಳೆ ಅವಕಾಶ ನೀಡುತ್ತಿಲ್ಲ. ಕೊಯ್ಲು ಮಾಡಿರುವ ಅರೇಬಿಕಾ ಕಾಫಿ ಹಣ್ಣನ್ನು ಹೇಗೆ ಒಣಗಿಸುವುದು ಎಂಬ ಚಿಂತೆ ಬೆಳೆಗಾರರನ್ನುಕಾಡುತ್ತಿದೆ.
*ಕೊಳೆಯುತ್ತಿರುವ ಹಣ್ಣು: ಈಗಾಗಲೇ ಮಳೆಯಿಂದ ಶೇ.50 ಕಾಫಿ ಹಣ್ಣು ಗಿಡದಲ್ಲೇ ಉದುರಿ ಹೋಗಿದೆ. ಉಳಿದಿರುವ ಫ‌ಸಲನ್ನು ಕೊಯ್ಲು ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ, ಇತ್ತಮಳೆಯೂ ಎಡೆಬಿಡದ ಕಾರಣ ಹಣ್ಣು ಗಿಡದಲ್ಲೇ ಕೊಳೆ ಯುತ್ತಿದೆ. ಇದು ಅರೇಬಿಕಾ ಕಾಫಿ ಬೆಳೆಗಾರರ ಗೋಳಾದರೆ, ಇನ್ನು ರೋಬಾಸ್ಟ ಬೆಳೆಗಾರರ ಸ್ಥಿತಿ ಇನ್ನೂ ಶೋಚನೀಯ ವಾಗಿದೆ. ಮಳೆಯಿಂದ ಕಾಫಿ ಹಣ್ಣಿನ ಜೊತೆ ಎಲೆಯೂಕೊಳೆಯಲಾರಂಭಿಸಿದೆ.
*ಡಿಸೆಂಬರ್‌ನಲ್ಲಿ ಕೊಯ್ಲಿಗೆ ಬರುತ್ತಿತ್ತು: ಮಳೆ ನೀರು ನಿಂತುಹಣ್ಣು, ಎಲೆಕೊಳೆಯುತ್ತಿದೆ. ಇದು ರೈತರನ್ನು ಆತಂಕಕ್ಕೆ ದೂಡಿದೆ.ಸಾಮಾನ್ಯವಾಗಿ ಡಿಸೆಂಬರ್‌ ಅಂತ್ಯಕ್ಕೆ ರೋಬಾಸ್ಟ ಕಾಫಿ ಫ‌ಸಲಿಗೆಬರುತ್ತದೆ. ಆದರೆ, ಈ ಬಾರಿ ಸುರಿಯುತ್ತಿರುವಮಳೆಯಿಂದಾಗಿ ಕೆಲವು ತೋಟಗಳಲ್ಲಿ ರೋಬಾಸ್ಟ ಹಣ್ಣಾಗು ತ್ತಿದೆ. ಇದುಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

*ರೋಗಕ್ಕೆ ತುತ್ತಾಗುವ ಸಾಧ್ಯತೆ: ಧಾರಣೆ ಕುಸಿತ, ಇಳುವರಿ ಕುಂಟಿತ, ರೋಗ, ಸಾಲಬಾಧೆಯಿಂದ ಕಂಗೆಟ್ಟಿರುವ ಬೆಳೆಗಾರರಿಗೆ, ಇದೀಗ ಮತ್ತೂಮ್ಮೆ ಸುರಿಯುತ್ತಿರುವ ಮಳೆ ಗಾಯದಮೇಲೆ ಬರೆ ಎಳೆದಿದೆ. ಒಂದೆಡೆಕಾಫಿ ನೆಲಕಚ್ಚಿದ್ದು, ಮತ್ತೂಂ ದೆಡೆಕಾಳು ಮೆಣಸಿನ ಬಳ್ಳಿಕೊಳೆತು ಹೋಗುತ್ತಿದೆ. ಇನ್ನು ಉಳಿದಿರುವ ಗಿಡ ಗಳು ಬಿಸಿಲು ಬಂದ ನಂತರ ಹಳದಿ ರೋಗಕ್ಕೆ ತುತ್ತಾಗುವಸಾಧ್ಯತೆಯಿದೆ. ಮಳೆಯಿಂದಾಗಿ ಹಲವು ಕಾಫಿ ತೋಟಗಳಲ್ಲಿ ಬದುಗಳು ಒಡೆದು ಹೋಗಿದ್ದು, ಪುನರ್‌ ನಿರ್ಮಾಣ ಮಾಡ ಬೇಕಾಗಿದೆ. ತಾಲೂಕಿನಲ್ಲಿ ಬೆಳೆಯಲಾಗಿದ್ದ ಅಡಕೆ ಬೆಳೆ ಬಹುತೇಕವಾಗಿ ನಾಶವಾಗಿದೆ. ಕಾಫಿ ಬೆಳೆಗಾರರಿಗೆ ಕೂಲಿ ಕಾರ್ಮಿಕರಿಗೆಕೊಡಲು ಹಣವಿಲ್ಲದಂತಾಗಿದೆ.
*ಒಟ್ಟಾರೆಯಾಗಿ ತಾಲೂಕಿನಲ್ಲಿ ಬೆಳೆಗಾರರ ಪರಿಸ್ಥಿತಿ ಚಿಂತಾಜನಕ ವಾಗಿದ್ದು, ಇದು ರೀತಿ ಮಳೆ ಮುಂದುವರಿದಲ್ಲಿ ಅರೇಬಿಕಾ ಬೆಳೆಗಾರರಿಗೆ ತೀವ್ರಪೆಟ್ಟುಬೀಳುವ ಸಾಧ್ಯತೆಯಿದೆ.2 ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದು, 15 ದಿನಗಳ ನಂತರ ತಾಲೂಕಿನ ಜನ ಬಿಸಲುಕಾಣುವಂತಾಗಿದೆ.
*ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ, ಮೆಣಸು, ಅಡಕೆ ಶೇ.50ಕ್ಕೂ ಹೆಚ್ಚು ನಾಶವಾಗಿದೆ.ಕಾಫಿ, ಮೆಣಸು ದರಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಕುಸಿದಿದೆ. ಈಹಿನ್ನೆಲೆಯಲ್ಲಿ ಸರ್ಕಾರಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು.
*ವಾರದಿಂದ ವಾಡಿಕೆಗೂ ಹೆಚ್ಚು ಮಳೆಯಾಗಿದೆ.ಕಾಫಿ,ಮೆಣಸು ಉದುರಿ ಹೋಗುತ್ತಿದೆ. ಸರ್ಕಾರಕೂಡಲೇ ರೈತರ ನೆರವಿಗೆ ಧಾವಿಸಬೇಕು.

LEAVE A REPLY

Please enter your comment!
Please enter your name here