ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳ ಬಂಧನ

0

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ  ಬಾಳ್ಳುಪೇಟೆ ಜೆ ಪಿ ನಗರದಲ್ಲಿ ಗಾಂಜಾ ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ಜೆ ಪಿ ನಗರದ ಸುಬ್ರಮಣ್ಯ ಹಾಗೂ ಶಹಾಬಾಜ್ ಬೆಳಗೋಡು ಕಾಕನ ಮನೆ ಬಸ್ ನಿಲ್ದಾಣ ಬಳಿ ಬಳಿ ತಿರು ಮಲ್ಲೇಶ್ ಹಾಗೂ ಖಾಸಿಂ ರನ್ನು ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಎಳೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅವರ ಮೇಲೆ ದಾಳಿ ಮಾಡಿದ್ದಾರೆ

ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಇಬ್ಬರು ಯುವಕರು ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಾಗೆ ಸಮೀಪದ ಅರಸುನಗರ ವಾಸಿ ಸುಬ್ರಹ್ಮಣ್ಯ, ಬಾಳ್ಳುಪೇಟೆಯ ಜೆ.ಪಿ. ನಗರ ಬಡಾವಣೆ ನಿವಾಸಿ ಶಹಬಾಜ್‌ ಅವರನ್ನು ಬಂಧಿಸಿದ್ದು, ಗಾಂಜಾ ಸೇವನೆ  ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದ್ದು,  10 ಗ್ರಾಂ ಗಾಂಜಾ ಸೊಪ‍್ಪು ವಶಕ್ಕೆ ಪಡೆಯಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬಾಗೆ ಸಮೀಪದ ಕಾಕನಮನೆ ಗ್ರಾಮದ ಬಸ್ಸು ನಿಲ್ದಾಣ ಹಿಂಭಾಗ ಬಾಳ್ಳುಪೇಟೆ ಜೆ.ಪಿ. ನಗರ ನಿವಾಸಿ ತಿರುಮಲೇಶ್ ಹಾಗೂ ಸಕಲೇಶಪುರ ಕುಶಾಲನಗರ ಬಡಾವಣೆ ನಿವಾಸಿ ರದ್ವಾನ್  ಎಂಬುವರನ್ನು ಬಂಧಿಸಲಾಗಿದ್ದು, ಬಂಧಿತರಿಂದ 10 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದ್ದು,  ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಿಮ್ಮ ಸುತ್ತಮುತ್ತಲಿನಲ್ಲಿ ಗಾಂಜಾ ಅಥವಾ ಇತೃ ಮಾರಕ ವಸ್ತುಗಳ ಸರಬರಾಜು ಅಥವಾ ಚಟುವಟಿಕೆ ನಡೆಯುತ್ತಿದ್ದರೆ ಕರೆಮಾಡಿ 112

ಎಎಸ್‌ಪಿ ಎಚ್‌.ಎನ್‌. ಮಿಥುನ್‌, ಇನ್‌ಸ್ಪೆಕ್ಟರ್‌ ಚೈತನ್ಯ ಮಾರ್ಗದರ್ಶನದಲ್ಲಿ ಕಾನ್‌ಸ್ಟೆಬಲ್‌ಗಳಾದ ಸುನಿಲ್‌, ಲೋಕೇಶ್‌ ಹಾಗೂ ವೆಂಕಟೇಶ್‌ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪಿಎಸ್‌ಐ ಬಸವರಾಜ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here