ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಂಘ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಸೂಚನೆ #covidupdateshassan

0

ಹಾಸನ ಮಾ. (ಹಾಸನ್_ನ್ಯೂಸ್ !,
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಕೋವಿಡ್-19 ನಿಯಂತ್ರಣ ಕುರಿತು  ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಕೋವಿಡ್ ಮಾರ್ಗ ಸೂಚಿಗಳಾದ ಮಾಸ್ಕ್, ಸ್ಯಾನಿಟೈಸರ್ ಬಳಕೆ  ಹಾಗೂ ಸಾಮಾಜಿಕ ಅಂತರವನ್ನು ಪ್ರತಿಯೊಬ್ಬರೂ  ಕಡ್ಡಾಯವಾಗಿ ಪಾಲಿಸಬೇಕು   ಎಂದರಲ್ಲದೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು  ಮತ್ತಷ್ಟು ಹೆಚ್ಚಿಸಬೇಕು ಎಂದು ನಿರ್ದೇಶನ ನೀಡಿದರು
ಕೇರಳ ಮತ್ತು ಮಹಾರಾಷ್ಟದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ಮುಂಜಾಗ್ರತೆ ವಹಿಸಿ ಲಸಿಕೆ ನೀಡುವುದನ್ನು ಚುರುಕುಗೊಳಿಸಬೇಕು   ಎಂದರು.

ಕೋವಿಡ್ ಲಸಿಕಾ ಕಾರ್ಯದಲ್ಲಿ ಹಿಂದುಳಿದಿರುವ ಜಿಲ್ಲೆಗಳು ಶೀಘ್ರವೇ ಗುರಿ ಸಾದನೆಗೆ ಅಗತ್ಯ ಕ್ರಮವಹಿಸಬೇಕು ಎಂದರು.

  ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಮಾತನಾಡಿ ಸಾರ್ವಜನಿಕರು ತಮ್ಮ ಹತ್ತಿರದ ಆಸ್ಪತ್ರೆಗಳಿಗೆ ಹೋಗಿ  ಕೋವಿಡ್-19  ಲಸಿಕೆ ಹಾಕಿಸಿಕೊಳ್ಳಿ ಎಂದರಲ್ಲದೆ 45 ರಿಂದ 59 ವರ್ಷದೊಳಗಿನ ನಾಗರೀಕರಿಗೆ  ಯಾವುದೇ ರೀತಿಯ ರಕ್ತದೊತ್ತಡ ಮದುಮೇಹ ಹೃದಯ ಸಂಬಂದಿಸಿದ ಕಾಯಿಲೆಗಳಿದ್ದರೆ  ವೈದ್ಯರಿಂದ ಪ್ರಮಾಣೀಕರಿಸಿದ  ದೃಡಿಕರಣ ಪತ್ರವನ್ನು ತಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದರು. ಮಾ.30 ರೊಳಗೆ ಸಾರ್ವಜನಿಕರಿಗೆಲ್ಲರಿಗೂ ಲಸಿಕೆಯನ್ನು ನಿಡಲಾಗುವುದು ಎಂದು ಹೇಳಿದರು
ಜಿಲ್ಲಾಧಿಕಾರಿ ಆರ್,ಗಿರೀಶ್ ಅವರು ವಿಡಿಯೋ ಸಂವಾದ  ನಂತರ  ಅಧಿಕರಿಗಳೊಂದಿಗೆ  ಮಾತನಾಡಿ ಆರೊಗ್ಯ ಕಾರ್ಯಕರ್ತರು, ಕಂದಾಯ, ನಗರ ಸಭೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು  ಆದಷ್ಟು ಬೇಗ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ  ಎಂದರಲ್ಲದೆ ಸಾರ್ವಜನಿಕರಲ್ಲಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು  ಕರಪತ್ರದ   ಮೂಲಕ ಹಾಗು ವಿವಧ ಸ್ವರೂಪದಲ್ಲಿ  ಜಾಗೃತಿ ಮೂಡಿಸಿ ಎಂದರು.
ಸಭೆಯಲ್ಲಿ ಹಿಮ್ಸ್ ನಿರ್ದೇಶಕರಾದ ಡಾ|| ಬಿ.ಸಿ.ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ|| ಸತೀಶ್, ಆರ್.ಸಿ.ಎಚ್ ಅಧಿಕಾರಿ ಡಾ|| ಕಾಂತರಾಜ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here