ಹಾಸನದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ಸುಸಜ್ಜಿತ ಕೊವಿಡ್ ಕೇರ್ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಇಂದು ಉದ್ಘಾಟಿಸಿದರು ಸುಮಾರು 250 ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಬಹುದಾಗಿದೆ .

ತೀವ್ರವಲ್ಲದ ಆದರೆ ಸ್ವಲ್ಪಮಟ್ಟಿಗೆ ಸಮಸ್ಯೆ ಇರುವ ಸೋಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು .

ಅನಿವಾರ್ಯವಾದದಲ್ಲಿ ಇದನ್ನು ಡೆಸಿಗ್ನೆಟೆಡ್ ಕೊವಿದ್ ಹೆಲ್ತ್ ಕೇರ್ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು..

ಇಲ್ಲಿ ಆಮ್ಲಜನಕ ಪೂರೈಕೆ ಕೂಡ ಇದೆ ಜಿಲ್ಲೆಯ ಕೊವಿದ್ ಚಿಕಿತ್ಸಾ ವ್ಯವಸ್ಥೆಗೆ ಇದರಿಂದ ಇನ್ನಷ್ಟು ಶಕ್ತಿ ಬಂದಿದೆ .ಜನರಿಗೂ ಸಮಾಧಾನಕರ ವಿಚಾರ…

ವ್ಯವಸ್ಥೆ ಮಾಡಿದ ಜಿಲ್ಲಾಡಳಿತಕ್ಕೆ ಹಾಗೂ ಕಟ್ಟಡದ ಜೊತೆಗೆ ಇತರ ವೈದ್ಯಕೀಯ ನೆರವು ನೀಡುತ್ತಿರುವ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಸಮರ್ಪಿಸೋಣ