ಹಾಸನ ಜಿಲ್ಲೆಯಾದ್ಯಂತ ಜ. 3 ಇಂದಿನಿಂದ 15-18 ವಯೋಮಿತಿಯ 175 ಪಿಯು ಕಾಲೇಜು ಹಾಗೂ 564 ಪ್ರೌಢಶಾಲೆಗಳ ಸುಮಾರು 79 ಸಾವಿರ ವಿದ್ಯಾರ್ಥಿಗ ಳಿಗೆ ಕೋವಿಡ್ ಲಸಿಕೆ ನೀಡಲು ಚಾಲನೆ
ಉದ್ಘಾಟನಾ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ನಗರದ ವಿಭಜಿತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು
ಸರ್ಕಾರದ ಮಾರ್ಗಸೂಚಿ :
• 15 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ನೀಡಲು (ಕೋವ್ಯಾಕ್ಸಿನ್ ಮಾತ್ರ)
• 175 ಪದವಿ ಪೂರ್ವ ಕಾಲೇಜು, ITI, ಡಿಪ್ಲೊಮಾ ಕಾಲೇಜುಗಳಲ್ಲಿ 33 ಸಾವಿರ ವಿದ್ಯಾರ್ಥಿಗಳು
• 564 ಶಾಲೆಗಳಲ್ಲಿ 9 ಮತ್ತು 10ನೇ ತರಗತಿ ಗಳಲ್ಲಿ 15 ವರ್ಷ ತುಂಬಿದ 45 ಸಾವಿರ ವಿದ್ಯಾರ್ಥಿಗಳು
• ಶಾಲಾ ಕಾಲೇಜು ಬಿಟ್ಟ 1 ಸಾವಿರ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಬೇಕು
• 4 ದಿನಗಳೊಳಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಜಿಲ್ಲಾಡಳಿತಕ್ಕೆ ಆದೇಶ
• 2007ರ ಜನವರಿ 1ಕ್ಕಿಂತ ಮೊದಲು ಜನಿಸಿದ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಅರ್ಹರು
• ಆಯಾ ಶಾಲಾ ಕಾಲೇಜುಗಳಲ್ಲೇ ಲಸಿಕೆ ವ್ಯವಸ್ಥೆ
• ಲಸಿಕೆ ಪಡೆಯುವ ಮಕ್ಕಳು ಆಧಾರ್ ಕಾರ್ಡ್ ಅವಶ್ಯಕ
ಕೋವಿಡ್ 19 ಲಸಿಕೆ ಬಗ್ಗೆ ಹಾಗೂ ನೆರವಿಗೆ ಸಹಾಯವಾಣಿ ತೆರೆಯಲಾಗಿದ್ದು, ಪೋಷಕರು 90084 45969ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್ ಕುಮಾರ್, ಆರ್ ಸಿ ಎಚ್ ಅಧಿಕಾರಿ ಡಾ.ಕಾಂತರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎಸ್.ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ , ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಗೌಡ,
ನಗರಸಭೆ ಅಧ್ಯಕ್ಷ ಆರ್.ಮೋಹನ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹಾಲಿಂಗಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್.ಪ್ರಕಾಶ್ ಪಾಲ್ಗೊಂಡಿದ್ದರು
ಸೂಚನೆ : *ಬಹುತೇಕ 18 ವರ್ಷಮೇಲ್ಪಟ್ಟವರು ಲಸಿಕೆ ಪಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲದ ಕಾರಣ ಪೋಷಕರು 15 ರಿಂದ 18 ವರ್ಷದೊಳಗಿನ ಎಲ್ಲರಿಗೂ ಲಸಿಕೆ ಹಾಕಲು ಸ್ವಯಂ ಪ್ರೇರಿತವಾಗಿ ಸಹಕಾರ ನೀಡಬೇಕು*