ಹಾಸನ: ತಾಲೂಕಿನ ದೊಡ್ಡಪುರ ಗ್ರಾಮದಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ (Murder) ಆಗಿದೆ. ಹಂತಕರು ಮನೆಯ ಬಳಿಯೇ ಕೊಚ್ಚಿ ಕೊಂದು ಎಸ್ಕೆಪ್ (Escape) ಆಗಿದ್ದಾರೆ. ಗ್ರಾಮದ ಗುರುಪ್ರಸಾದ್ ಪತ್ನಿ ರೇವತಿ(35) ಕೊಲೆಯಾದ ಮಹಿಳೆ. ಮನೆಯಲ್ಲಿ ಪತಿ ಹಾಗು ಮಕ್ಕಳು ಇಲ್ಲದ ವೇಳೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಕೊಚ್ಚಿ ಕೊಂದಿರುವ ಶಂಕೆ ಮೂಡಿದೆ. ಮಹಿಳೆ ನಿನ್ನೆ (ಮಾರ್ಚ್ 16) ಸಂಜೆ ಮನೆ ಹೊರಗೆ ಬಟ್ಟೆ ತೊಳೆಯುತ್ತಾ ಕುಳಿತಿದ್ದರು. ಆಗ ಆಕೆಯ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಎಸ್‌ಪಿ ಡಾ.ನಂದಿನಿ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಹಳ್ಳಿಯ ಲತೇಶ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕೆಯನ್ನು ಮದುವೆ ಯಾಗುವುದಾಗಿ ಪೀಡಿಸುತ್ತಿದ್ದ ಲತೇಶ್, ಇದಕ್ಕೆ ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಗುರುಪ್ರಸಾದ್- ರೇವತಿ ದಂಪತಿಗೆ ವಸಂತ (12), ತನುಶ್ರೀ (8) ಎಂಬ ಮಗಳಿದ್ದಾಳೆ. ಗ್ರಾಮದ ಜಯರಾಮು ಎಂಬುವರ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡಿ ಕೊಂಡಿದ್ದರು. ಜೊತೆಗೆ ಕುರಿ, ಕೋಳಿ ಸಾಕಿಕೊಂಡು ಜೀವನ ನಡೆಸುತ್ತಿದ್ದರು. ಲತೇಶನ ಕಾಟ ಹೆಚ್ಚಾದಾಗ ಇಲ್ಲಿ ಇರುವುದು ಬೇಡ, ಬೇರೆಡೆ ಬಾಡಿಗೆ ಮನೆ ಮಾಡಿ ಅಲ್ಲಿಗೆ ಹೋಗೋಣ ಎಂದು ನಿರ್ಧರಿಸಿ, ಗ್ರಾಮದೊಳಗೆ ಮನೆಯನ್ನೂ ನೋಡಿದ್ದರು.
#crimedairyhassan