ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗಲು ಯತ್ನಿಸಿದ ವಂಚಕ‌ ಮಧುಮಗನಿ ಬಿತ್ತು ಗೂಸ

0

ಹಾಸನ : ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗಲು ಯತ್ನಿಸಿದ ವಂಚಕ‌ ಮಧುಮಗನನ್ನು ಹಿಡಿದು ಧರ್ಮದೇಟು ಕೊಟ್ಟ ಹಾಸನದ ಜನ , ಬೆಂಗಳೂರಿನ ಚಿಕ್ಕಸಂದ್ರ ಮೂಲದ ಮಧುಸೂಧನ್ ಸಿಕ್ಕಿಬಿದ್ದ ಮದುಮಗ ಆಗಿದ್ದು ಕಳೆದ ನಾಲ್ಕು ವರ್ಷದ ಹಿಂದೆ ಬೆಂಗಳೂರಿನ ವಸುದಾ ಎಂಬುವವರ ಜೊತೆ ಮದುವೆ ಯಾಗಿದ್ದ ವಂಚಕ ನಂತರ ಮೊದಲ ಪತ್ನಿ ಜೊತೆಗೆ ಜಗಳಮಾಡಿಕೊಂಡು ದೂರವಾಗಿ ಎರಡನೇ ಮದುವೆಯಾಗಲು ಪ್ಲಾನ್ ಮಾಡಿದ್ದು ಇಂದು ಹಾಸನದಲ್ಲಿ ಹುಡುಗಿ ಹುಡುಕಿ‌ ಮುಹೂರ್ತ ಕ್ಕೆ ದಿನ ನಿಗದಿಯಾಗಿ ಇನ್ನೇನು

ತಾಳಿ ಕಟ್ಟೋಕು ಮುನ್ನ ಸಿನಿಮಾ ಸ್ಟೈಲ್ ನಲ್ಲಿ ಬಯಲಾದ ವಂಚಕನ ಕಪಟತೆ , ತನ್ನ ಪತಿ ಮತ್ತೊಂದು ಮದುವೆ ಆಗುತ್ತಿರೊ ವಿಚಾರ ತಿಳಿದು ಮದುವೆ ನಿಲ್ಲಿಸಲು‌ ಚಾಮುಂಡಿ ಸಿನಿಮಾದ ಮಾಲಾಶ್ರೀ ಸ್ಟೈಲ್ ನಂತೆ ಸಿಟ್ಟಾಗಿ ಬಂದ ಮೊದಲ ಪತ್ನಿ ಪ್ರಯತ್ನಿಸಿ , ಮದುವೆ ಮಂಟಪದ‌‌ ಫೋನ್‌ ನಂಬರ್ ಸಂಗ್ರಹಿಸಿ ವಂಚಕನ ಮೊದಲ‌ ಮದುವೆ ಫೋಟೊ‌ ಕಳಿಸಿ ಮೊದಲ ಪತ್ನಿ ನೆರೆದವರಿಗೆ ಶಾಕ್ ಕೊಟ್ಟಿದ್ದರು .,

ವಿಚಾರ ತಿಳಿಯುತ್ತಲೇ‌ ಎಚ್ಚೆತ್ತು ಮದುವೆ ನಿಲ್ಲಿಸಿದ ಮಧುಮಗಳ‌ ಸಂಬಂದಿಕರು , ಸಿಟ್ಟಿಗೆದ್ದ ಮಧುಮಗನನ್ನು ಹಿಡಿದು ಧರ್ಮದೇಟು ನೀಡುತ್ತಲೆ‌ ಸತ್ಯ ಬಾಯ್ಬಿಡಿಸಿ , ಇಂದೇ ಮದುವೆಯಾಗಿ ನಾಳೆ ತಂದೆ ತಾಯಿ ಪತ್ನಿ ‌ಸೇರಿ ನಾಲ್ವರಿಗೂ ಮಾಲ್ಡೀವ್ಸ್ ಟಿಕೇಟ್ ಬುಕ್ ಮಾಡಿ ಹಾರಲು ತಯಾರಾಗಿದ್ದ ಆ ಕಿರಾತಕನ ದುಷ್ಟ ಪ್ಲಾನ್ ಮಟಾಷ್ ಆಗಿದೆ , ಈಗಾಗಲೇ ಮದುವೆಯಾಗಿದ್ದರೂ ಮತ್ತೊಂದು ಮದುವೆಯಾದ ಮಾರನೇ ದಿನವೇ ಫಾರಿನ್ ಗೆ ಹಾರೋಕೆ ಸ್ಕೆಚ್ ಹಾಕಿದ್ದವನಿಗೆ ಸ್ಥಳೀಯರು ಛೀಮಾರಿ ಹಾಕಿ ಕಳುಹಿಸಿದ್ದಾರಂತೆ …

ಪ್ರಕರಣ ಹಾಸನದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ನಡೆದಿದೆ.

LEAVE A REPLY

Please enter your comment!
Please enter your name here