ಈ ವರ್ಷ ಹಾಸನಾಂಬ /ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಂಗ್ರಹವಾದ ಒಟ್ಟು ಹಣ ಈ ವರೆಗಿನ ಎರಡನೇ ಅತಿ ದೊಡ್ಡ ಮೊತ್ತ

0

ಹಾಸನ : ಸತತ 12 ಗಂಟೆಗಳಿಂದ ನಡೆದ ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ 28ಅ. ಶುಕ್ರವಾರ ರಾತ್ರಿ ಮುಕ್ತಾಯವಾಯಿತು , ಹಾಸನಾಂಬೆ ಹಾಗೂ ಸಿದ್ದೇಶ್ವರಗೆ ಈ ವರ್ಷವೂ ಹರಿದುಬಂದ ಆದಾಯ ಕೋಟಿ ಗಟ್ಟಲೆ

ಈ ವರ್ಷ ಒಟ್ಟು ಹಾಸನಾಂಬೆ ಉತ್ಸವದಿಂದ 3 ಕೋಟಿ 69 ಲಕ್ಷದ 51 ಸಾವಿರದ 251 ರೂ ಬಂದಿದೆ , ಸಂಕ್ಷಿಪ್ತ ಲೆಕ್ಕಾಚಾರ ನೀವು ಕೇಳುವುದಾದರೆ , ಭಕ್ತರಿಂದ ಕಾಣಿಕೆ(ಹುಂಡಿ) ರೂಪದಲ್ಲಿ 1 ಕೋಟಿ 88 ಲಕ್ಷದ 40 ಸಾವಿರದ 935 ರೂ ಸಂಗ್ರಹ , ನಂತರ ವಿಶೇಷ ದರ್ಶನದ ಪಾಸ್ (300₹/1,000₹) ಮಾರಾಟದಿಂದಲೂ 1 ಕೋಟಿ 48 ಲಕ್ಷದ,27 ಸಾವಿರದ 600 ರೂ ಸಂಗ್ರಹವಾಗಿದೆ , ಲಡ್ಡು ಪ್ರಸಾದ ಮಾರಾಟ ದಿಂದ 32 ಲಕ್ಷದ 82 ಸಾವಿರದ 716 ರೂ ಇವೆಲ್ಲ ಸೇರಿ ಒಟ್ಟಾರೆಯಾಗಿ

ಎಲ್ಲಾ ಮೂಲಗಳೂ ಸೇರಿ ಒಟ್ಟು 3,69,51,251 ರೂ ಸಂಗ್ರಹ ಇದು ಈ ವರ್ಷ 2022 ರ ಹಾಸನಾಂಬೆ ಗರ್ಭಗುಡಿ ಬಾಗಿಲು ತೆಗೆದು ಮುಚ್ಚಲಾದ 15 ದಿನಗಳ ಒಟ್ಟು ಸಂಗ್ರಹ , ಇದು ಈ ವರೆಗಿನ ಹಾಸನಾಂಬೆ ದರ್ಶನದ ವೇಳೆ ಸಂಗ್ರಹದಲ್ಲಿ ಎರಡನೇ ಅತಿ ಹೆಚ್ಚು ಮೊತ್ತದ ದಾಖಲೆಯ ಆದಾಯ ಸಂಗ್ರಹವಾಗಿದೆ ,

ಕಳೆದೆರಡು ವರ್ಷ ಕೋವಿಡ್ ಸಂದರ್ಭ ದಲ್ಲಿ ಭಕ್ತರ ದರ್ಶನಕ್ಕೆ ಸಾಕಾಷ್ಟು ಅವಕಾಶ ಇಲ್ಲದೆ ಆದಾಯ ಕುಸಿದಿತ್ತು

ಈ ಬಾರಿ ಅಂದಾಜು 6 ಲಕ್ಷಕ್ಕು ಹೆಚ್ಚು ಭಕ್ತರಿಂದ ದರ್ಶನವಾಗಿ  ಮತ್ತೆ ಕೋಟಿ ಕೋಟಿ ಆದಾಯ ಸಂಗ್ರಹ ಎಂದಿನಂತೆ ಸಾಗಿದೆ

ಈ ಹಿಂದೆ ಅಂದರೆ 2017 ರಲ್ಲಿ ಅತಿ ಹೆಚ್ಚು ಅಂದರೆ 4.14 ಕೋಟಿ ಹಣ ಸಂಗ್ರಹ ವಾಗಿದ್ದು ದಾಖಲೆಯಾಗಿತ್ತು , 2017ರ ಹೊರತುಪಡಿಸಿದರೆ ಈ ವರ್ಷ   (2022) ಅತಿಹೆಚ್ಚು ಆದಾಯ ಸಂಗ್ರಹ , ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರ ವರೆಗೆ ನಡೆದಿದ್ದ ಹಾಸನಾಂಬೆ ಉತ್ಸವ ನಡೆದಿತ್ತು‌.,


ಮುಂದಿನ ವರ್ಷ ನ.2-11-2023 ರಿಂದ ನ.15-11-2023 ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದೆ

LEAVE A REPLY

Please enter your comment!
Please enter your name here