ಸಕಲೇಶಪುರ: ಕಾಡಾನೆ ದಾಳಿಯಿಂದಾಗಿ ತಾಲೂಕಿನಲ್ಲಿ ಬೆಳಗೋಡು ಹೋಬಳಿ ಸಮೀಪ ಮನು ( 32 ) ಎಂಬ ರೈತ ಮೃತಪಟ್ಟಿರುವುದರಿಂದ ಈತನ ಕುಟುಂಬ ಅಕ್ಷರಶಃ ಅನಾಥವಾಗಿದೆ
ಮೃತ ಮನುವಿಗೆ ಪತ್ನಿ ಹಾಗೂ ಮೂರುವರೆ ವರ್ಷದ ಮಗನಿದ್ದು ಮನುವಿನ ಸಾವಿನಿಂದ ಕುಟುಂಬ ಸಂಕಷ್ಠಕ್ಕೆ ಸಿಲುಕಿದೆ. ಮನುವಿನ ಮನೆಯ ಪಕ್ಕದಲ್ಲೆ ಈತನ ಅಣ್ಷನ ಕುಟುಂಬವಿದ್ದು ಮನುವಿನ ಅಣ್ಣ ಹಾಗೂ
ತಾಯಿ ಸಹ ಮನುವಿನ ಸಾವಿನಿಂದ ದಿಗ್ರಮೆಗೆ ಒಳಗಾಗಿದ್ದಾರೆ. ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಸುಮಾರು 75 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.ಆದರು ಸಹ ಸರ್ಕಾರಗಳು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿರುವುದು ದುರಂತವಾಗಿದೆ
ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದ್ದ ತಾಲೂಕಿನ ಹಾನುಬಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾದ್ಯಯ ಎಸ್.ದೇವೆಗೌಡ ಸೋಮವಾರ ರಾತ್ರಿ ನಿಧನರಾದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು
ಶತಾಯುಷಿ ಶಾಲೆಗೆ 9-00 ಗಂಟೆಗೆ ತಂದು ಹತ್ತು ನಿಮಿಷಗಳ ಕಾಲ ಇಟ್ಟು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು
ಈ ಸಂಧರ್ಭದಲ್ಲಿ ಹಾನುಬಾಳುನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶಾಲೆಯಲ್ಲಿ ಪ್ರೀತಿಯ ಗುರುಗಳಿಗೆ ಅಂತಿಮ ನಮನ ಸಲ್ಲಿಸಲಾಯಿತು.