ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಿರುವ 1200 ಮೆಟ್ರಿಕ್ ಟನ್ ಆಮ್ಲಜನಕದಲ್ಲಿ ಹಾಸನ ವಿಧಾನಾಭಾ ಕ್ಷೇತ್ರದ ಶಾಸಕರಾದ ಪ್ರೀತಂ ಜೆ ಗೌಡ ಅವರು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನದಿಂದ ಇಂದು(9th May) ಹಾಸನಕ್ಕೆ 8KL ಲಿಕ್ವಿಡ್ ಆಮ್ಲಜನಕ ಪೋರೈಕೆಯಾಗಿದ್ದು ಮುಂದಿನ ಒಂದು ವಾರಕ್ಕೆ ಆಗುವಷ್ಟು ಅಂದರೆ ಸುಮಾರು 900 ಸಿಲಿಂಡರ್ ಅಮ್ಲಜನಕ ಪೋರೈಕೆಯಾಗಿದೆ. ಎಂದು ಪ್ರಕಟಣೆ ತಿಳಿಸಿದೆ ., ಹಾಸನ ಜಿಲ್ಲೆಯ ಆಮ್ಲಜನಕ ಕೊರೆತಯನ್ನು ನೀಗಿಸುವಲ್ಲಿ ಸದ್ಯ ಯಶಸ್ವಿಯಾದ ಮಾನ್ಯ ಶಾಸಕರಿಗೆ ,ಜಿಲ್ಲಾಡಳಿತಕ್ಕೆ ಹಾಗು ಎಲ್ಲರಿಗೂ ಹಾಸನ ಜನತೆಯ ಪರವಾಗಿ ಹೃತ್ಪೂವರ್ಕ ಧನ್ಯವಾದಗಳು .
• 1200 ಮೆಟ್ರಿಕ್ ಟನ್ ಆಮ್ಲಜನಕದಲ್ಲಿ ಮಾನ್ಯ ಶಾಸಕರಾದ ಪ್ರೀತಂ ಗೌಡ ಅವರು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹಾಗು ನಿರಂತರ ಪ್ರಯತ್ನದ ಪಲವಾಗಿ ಇಂದು ಹಾಸನಕ್ಕೆ 8KL ಲಿಕ್ವಿಡ್ ಆಮ್ಲಜನಕ ಪೋರೈಕೆಯಾಗಿದೆ.ಸರ್ಕಾರದ ಆದೇಶದ ಪ್ರಕಾರ ಪ್ರತಿದಿನ 15 KL ಆಮ್ಲಜನಕ ಹಾಸನ ಜಿಲ್ಲೆಗೆ ಬರಲಿದೆ.ಹಾಸನದ ಆಮ್ಲಜನಕ ತಯಾರಿಸುವ ಘಟಕಗಳಿಂದ ಪ್ರತಿನಿತ್ಯ 480 ಸಿಲಿಂಡರ್ ಉತ್ಪಾದನೆ ಮಾಡುವ ಸಾಮ್ರಥ್ಯವಿದ್ದರು ಇಂದಿನ ಪರಿಸ್ಥಿತಿಯಲ್ಲಿ ಅದು ಸಾಕಾಗಾದೆ ಇರುವುದರಿಂದ ಆಮ್ಲಜನಕ ವಿಲ್ಲದೆ ರೋಗಿಗಳನ್ನು ಖಾಸಾಗಿ ಆಸ್ಪತ್ರೆಯಿಂದ ಬಲವಂತವಾಗಿ ಡಿಸ್ಚಾರ್ಜ ಮಾಡುವ ಪರಿಸ್ಥಿತಿ ಎದುರಾಗಿತ್ತು ಇದನ್ನು ಆರಿತುಕೊಂಡು ಸಮಯೋಜಿತವಾದ ನಿರ್ಣಯಗಳಿಂದ ಆಮ್ಲಜನಕದ ಕೊರತೆಯನ್ನು ನೀಗಿಸುವಲ್ಲಿ ಮಾನ್ಯ ಶಾಸಕರು ಯಶಸ್ವಿಯಾಗಿದ್ದಾರೆ.ಸರ್ಕಾರಿ ಆಸ್ಪತ್ರೆಯಲ್ಲಿರುವ 450 ಬೆಡ್ ಗಳಿಗೆ ಈಗ ಆಸ್ಪತ್ರೆ ಆವರಣದಲ್ಲಿರುವ ಆಮ್ಲಜನಕ ಘಟಕದಿಂದ ಪ್ರತಿನಿತ್ಯ 12 KL ಸರಬರಾಜಾಗುತ್ತಿದ್ದು ಅದು ಅವರಿಗೆ ಸಾಕಾಗುವಷ್ಟಿದೆ.ಆದರೆ ಈಗ ಸರ್ಕಾರಿ ಆಸ್ಪತ್ರೆಯನ್ನು ಕರೋನಾ ಸೊಂಕಿತರಿಗೆ 650 ಬೆಡ್ ಮಾಡಿರುವುದರಿಂದ ಹೆಚ್ಚುವರಿ ಬೆಡ್ ಗೆ ಆಮ್ಲಜನಕ ಪೋರೈಕೆಯನ್ನು ಈಗ ರಾಜ್ಯದಿಂದ ಪೋರೈಕೆಯಾಗುತ್ತಿರುವ 15 KL ಆಮ್ಲಜನಕ ದಲ್ಲಿ 12 KL ಸರ್ಕಾರಿ ಆಸ್ಪತ್ರೆಗೆ ಬಳಸಲಾಗುವುದು.ಉಳಿದ 3KL ಖಾಸಗಿ ಆಸ್ಪತ್ರೆಗೆ ಬಳಸಲಾಗುವುದೆಂದು ತಿಳಿದು ಬಂದಿದೆ .ಈ ಎಲ್ಲಾ ಸಮಯೋಜಿತ ನಿರ್ಣಯಗಳಿಂದ ಹಾಸನ ಜಿಲ್ಲೆಯ ಆಮ್ಲಜನಕ ಕೊರೆತಯನ್ನು ನೀಗಿಸುವಲ್ಲಿ ಯಶಸ್ವಿ
ಕಳೆದ ವಾರ ಮಾನ್ಯ ಶಾಸಕರು ಜಿಲ್ಲಾಧಿಕಾರಿಗಳೊಂದಿಗೆ ನೆಡೆದ ಸಭೆಯಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ಕಾರ್ಯಗತಗೊಂಡಿರುವುದು ಸಂತೋಷದ ವಿಷಯ.
1) ಕೋವಿಡ್ ಟೆಸ್ಟಿಂಗ್ ರಿಪೋರ್ಟ ಈಗ 24 ಗಂಟೆಗಳಲ್ಲಿ ಲಬ್ಯ
2) ಕೋವಿಡ ಸೊಂಕಿತರ ಹಾಸಿಗೆ 400 ರಿಂದ 650 ಏರಿಸಲಾಗಿದೆ
3) 13 KL ಸಾಮರ್ಥ್ಯದ ಆಮ್ಲಜನಕ ಘಟಕ ಕೆಲಸ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿದೆ.
4) ರಾಜ್ಯದಿಂದ ಪ್ರತಿನಿತ್ಯ 15 KL ಆಮ್ಲಜನಕ ಪೂರೈಕೆ.