ಬಾಣಾವರ ಪೊಲೀಸರಿಂದ 130 ಕೆ.ಜಿ ಗಾಂಜಾ ಸೊಪ್ಪಿನ ಗಿಡಗಳ ವಶ

0

ಮಾನ್ಯ ಪೊಲೀಸ್ ವರಿಷ್ಠಾಧಿಕಾರಿ ಯವರು ಶ್ರೀ ಶ್ರೀನಿವಾಸಗೌಡ, ಐಪಿಎಸ್ ಹಾಸನ ಜಿಲ್ಲೆ, ಹಾಸನ ಮತ್ತು ಶ್ರೀಮತಿ ನಂದಿನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಯವರು ಹಾಸನ ಜಿಲ್ಲೆ, ಹಾಸನ ಹಾಗೂ ಶ್ರೀ ನಾಗೇಶ್ ಎಲ್, ಮಾನ್ಯ ಪೊಲೀಸ್ ಅಧೀಕ್ಷಕರು ಅರಸೀಕೆರೆ ಉಪ ವಿಭಾಗ, ಅರಸೀಕೆರೆ ಶ್ರೀ ವಸಂತ್ ಕೆ.ಎಂ, ಪೊಲೀಸ್ ವೃತ್ತ ನಿರೀಕ್ಷಕರು ಅರಸೀಕೆರೆ ಗ್ರಾಮಾಂತರ ವೃತ್ತ. ಅರಸೀಕೆರೆ ಅವರ ಮಾರ್ಗದರ್ಶನದಲ್ಲಿ ದಿನಾಂಕ:16/09/2020 ರಂದು ಶ್ರೀ ಅರುಣ್ ಕುಮಾರ್ ಹೆಚ್.ಬಿ ಪೊಲೀಸ್ ಉಪ ನಿರೀಕ್ಷಕರು (ಕಾ ಸು) ಮತ್ತು ಶ್ರೀ ಆನಂದ್ ಎಂ.ಹೆಚ್ ಪೊಲೀಸ್ ಉಪ ನಿರೀಕ್ಷಕರು (ಅಪರಾಧ) ಬಾಣಾವರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಠಾಣೆ ಸಿಬ್ಬಂದಿಗಳಾದ ಹೆಚ್ ಸಿ 67 ಪ್ರಕಾಶ್, ಹೆಚ್ ಸಿ 277 ಮೋಹನ್ ಕುಮಾರ್, ಪಿಸಿ 480 ದಿನೇಶ್ ಕುಮಾರ್, ಪಿಸಿ 332 ನಾಗರಾಜು, ಪಿಸಿ 86 ಹೇಮಂತಕುಮಾರ್, ಪಿಸಿ 407 ಹರೀಶ್, ಪಿಸಿ 518 ಬೆಟ್ಟಸ್ವಾಮಿ, ಪಿಸಿ 544 ದೇವರಾಯ ಹೂಗಾರ, ಪಿಸಿ 338 ನಾಗರಾಜನಾಯಕ, ಪಿಸಿ, 520 ಲಕ್ಷ ನಾಯಕ್, ಜೀಪ್ ಚಾಲಕ ಎ ಹೆಚ್ ಸಿ 113 ಕುಮಾರಸ್ವಾಮಿ ರವರೊಂದಿಗೆ ದೊಡ್ಡನಹಳ್ಳಿ ಗ್ರಾಮದ ಸಂತೋಷ್ ಅವರ ಜಮೀನಿನಲ್ಲಿರುವ ಇಟ್ಟಿಗೆ ಫ್ಯಾಕ್ಟರಿ ಹಿಂಭಾಗ ಹೋಗಿ ನೋಡಲಾಗಿ ಇಟ್ಟಿಗೆ ಗೂಡಿನ ಹಿಂಭಾಗ ಇರುವ 60*20 ಅಡಿ ವಿಸ್ತೀರ್ಣದ ಖಾಲಿ ಜಾಗದಲ್ಲಿ ಹಸಿರು ಗಿಡಗಳನ್ನು ಸಾಲಾಗಿ ಬೆಳೆದಿದ್ದ ಗಾಂಜಾ ಗಿಡವನ್ನು ಅರಸೀಕೆರೆ ತಾಲೂಕು ತಹಸೀಲ್ದಾರ್‌ರವರ ಸಮಕ್ಷಮ ದಾಳಿ ನಡೆಸಿ ಆರೋಪಿಯಾದ ಸಂತೋಷ ಬಿನ್ ನಾಗರಾಜು ಅವರ ವಿರುದ್ಧ ಬಾಣಾವರ ಪೊಲೀಸ್ ಠಾಣೆಯಲ್ಲಿ NDPS Act ರೀತ್ಯಾ ಪ್ರಕರಣ ದಾಖಲಿಸಿ

ದಿನಾಂಕ – 19.09.2020 ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತರೆ .

ಸದರಿ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿ ಅವರು ಶ್ರೀ ಶ್ರೀನಿವಾಸಗೌಡ ಐಪಿಎಸ್ ಹಾಸನ ಜಿಲ್ಲೆ ರವರು ಶ್ಲಾಘಿಸುತ್ತಾರೆ ಹಾಗೂ ಬಾಣಾವರ ಠಾಣಾ ವ್ಯಾಪ್ತಿಯ ಇತರ ಭಾಗಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಮಾಹಿತಿ ನೀಡುವಂತೆ ಈ ಮೂಲಕ ಕೋರಲಾಗಿದೆ. (ದೂರವಾಣಿ ಸಂಖ್ಯೆ 9480804756)

LEAVE A REPLY

Please enter your comment!
Please enter your name here