ದಕ್ಷಿಣ ಪದವೀಧರರ ಚುನಾವಣೆ ಮತದಾರರ ಪಟ್ಟಿಗೆ ಮತದಾರರ ಹೆಸರು ನೋಂದಣಿ ಅಹ್ವಾನ

0

ಹಾಸನ ಅ.05 : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಗೆ ಮತದಾರರ ಹೆಸರನ್ನು ನೊಂದಾಯಿಸುವ ಬಗ್ಗೆ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿರುತ್ತದೆ.

ಮತದಾರರ ಸೇರ್ಪಡೆಗೆ ಅ. 1 ರಂದು ಸಾರ್ವಜನಿಕ ಪ್ರಕಟಣೆಗೆ ಹೊರಡಿಸಲಾಗಿದ್ದು. ನಮೂನೆ 18 ಮತ್ತು 19ರಲ್ಲಿ ಅರ್ಜಿ ಸ್ವೀಕರಿಸಲು ನ.6 ಕಡೆ ದಿನವಾಗಿದೆ. ಮತದಾರರ ಕರಡು ಪಟ್ಟಿ ಸಿದ್ದಪಡಿಸಲು ನ.19 ರವರೆಗೆ ಅವಕಾಶವಿದೆ. ನ.23 ರೊಳಗೆ ಕರಡು ಪಟ್ಟಿ ಪ್ರಕಟಿಸಲಾಗುವುದು. ಅಕ್ಟೋಬರ್ 1 ರಿಂದ ಪ್ರಾರಂಭಿಸಿ ಡಿ.9 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಡಿ.25 ರೊಳಗೆ ಆಕ್ಷೇಪಣೆ ವಿಲೇವಾರಿ ಮಾಡಲು ದಿನಾಂಕ ನಿಗಧಿ ಪಡಿಸಲಾಗುವುದು ಡಿ.30ರಂದು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಹೊರಡಿಸಲಾಗುವುದು.

 
ಕರ್ನಾಟಕ ದಕ್ಷಿಣ ಪದವೀಧರರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ನಿಯೋಜಿತ ಅಧಿಕಾರಿಗಳ ವಿವರಗಳು : ಸಹಾಯಕ ಮತದಾರರ ನೋಂದಣಾಧಿಕಾರಿ ಆರ್. ಗಿರೀಶ್  ಭಾ. ಆ. ಸೇ, ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಬಿ.ಎಂ ರಸ್ತೆ ಹಾಸನ. ದೂ. ಸಂ 08172-267345, ಹಾಸನ ಜಿಲ್ಲೆ, ನಿಯೋಜಿತ ಅಧಿಕಾರಿಗಳಾದ ಕವಿತ ರಾಜಾರಾಂ(ಕ. ಆ. ಸೇ ) ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಬಿಎಂ ರಸ್ತೆ ಹಾಸನ, ದೂ. ಸಂ 08172-250554, ಹಾಸನ ಜಿಲ್ಲೆ,   ಬಿಎ ಜಗದೀಶ( ಕ. ಆ. ಸೇ ) ಉಪವಿಭಾಗಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ಕಚೇರಿ ಆರ್.ಸಿ ರಸ್ತೆ ಹಾಸನ, ದೂ. ಸಂ 08172-268403,  ಹಾಸನ ಉಪವಿಭಾಗ, ಪ್ರತೀಕ್ ಬಯಾಲ್  ಉಪವಿಭಾಗಾಧಿಕಾರಿಗಳು,  ಉಪವಿಭಾಗಾಧಿಕಾರಿಗಳ ಕಚೇರಿ ಬಿ.ಎಂ ರಸ್ತೆ ಹಾಸನ, ದೂ. ಸಂ 08173-244003, ಹಾಸನ ಉಪವಿಭಾಗ, ರೇಖಾ ತಹಶೀಲ್ದಾರ್, ತಹಸಿಲ್ದಾರ್ ( ಚುನಾವಣೆ) ಜಿಲ್ಲಾಧಿಕಾರಿಗಳ ಕಚೇರಿ ಬಿ.ಎಂ ರಸ್ತೆ ಹಾಸನ,ದೂ. ಸಂ 08172-265028, ಹಾಸನ ಜಿಲ್ಲೆ,    ಜೆ.ಬಿ ಮಾರುತಿ ತಹಶೀಲ್ದಾರ್ , ಚನ್ನರಾಯಪಟ್ಟಣ, ತಾಲ್ಲೂ ಕು ಕಚೇರಿ, ಮಿನಿ ವಿಧಾನಸೌಧ ಚನ್ನರಾಯಪಟ್ಟಣ, ದೂ. ಸಂ 08176-252235, ಚನ್ನರಾಯಪಟ್ಟಣ ತಾಲ್ಲೂಕು, ಸಂತೋಷ ಕುಮಾರ್ ತಹಶೀಲ್ದಾರ್ ಅರಸೀಕೆರೆ, ತಾಲ್ಲೂಕು ಕಚೇರಿ ಮಿನಿ ವಿಧಾನಸೌಧ ಅರಸೀಕೆರೆ, ದೂ ಸಂ 08174-234879,

ಮೋಹನ್ ಕುಮಾರ್ ತಹಸೀಲ್ದಾರ್ ಬೇಲೂರು ತಾಲ್ಲೂಕು  ಕಚೇರಿ ಮಿನಿವಿಧಾನಸೌಧ ಬೇಲೂರು  ಮೊಬೈಲ್ ಸಂಖ್ಯೆ 08172-230800, ಬೇಲೂರು ತಾಲ್ಲೂಕು. ಎಂ.ವಿ ನಟೇಶ್ ತಹಸೀಲ್ದಾರ್ ಹಾಸನ ತಾಲ್ಲೂಕು ಕಚೇರಿ ಬಿಎಂ ರಸ್ತೆ ಹಾಸನ, 08172-260395, ಹಾಸನ ತಾಲ್ಲೂಕು. ಕೃಷ್ಣಮೂರ್ತಿ ತಹಸೀಲ್ದಾರ್ ಹೊಳೆನರಸೀಪುರ ತಾಲ್ಲೂಕು ಕಚೇರಿ ಮಿನಿವಿಧಾನಸೌಧ ಹೊಳೆನರಸೀಪುರ,08175-272111,  ಹೊಳೆನರಸೀಪುರ ತಾಲ್ಲೂಕು. ರೇಣುಕುಮಾರ್ ತಹಸೀಲ್ದಾರ್ ಅರಕಲಗೂಡು ತಾಲ್ಲೂಕು ಕಚೇರಿ ಮಿನಿವಿಧಾನಸೌಧ ಅರಕಲಗೂಡು,08175-221736, ಅರಕಲಗೂಡು ತಾಲ್ಲೂಕು. ಜಯಕುಮಾರ್ ತಹಸೀಲ್ದಾರ್ ಸಕಲೇಶಪುರ ತಾಲ್ಲೂಕು ಕಚೇರಿ ಮಿನಿವಿಧಾನಸೌಧ ಸಕಲೇಶಪುರ, 08173-244004, ಸಕಲೇಶಪುರ ತಾಲ್ಲೂಕು. ಶೀರಿನ್  ತಾಜ್ ತಹಸೀಲ್ದಾರ್ ಆಲೂರು ತಾಲ್ಲೂಕು ಕಚೇರಿ ಮಿನಿವಿಧಾನಸೌಧ ಆಲೂರು.08170-218222 ಆಲೂರು ತಾಲ್ಲೂಕು.

#ದಕ್ಷಿಣಪದವಿದರಚುನಾವಣೆ

LEAVE A REPLY

Please enter your comment!
Please enter your name here