ಧರ್ಮಸ್ಥಳ ಪಾದಯಾತ್ರೆ ಹೊರಡುತ್ತಿರುವವರಿಗೆ ಅರಣ್ಯ ಇಲಾಖೆಯಿಂದ ಸೂಚನೆ

0

ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕೆಂಪೊಳೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಬದಿಗಳಲ್ಲಿ ಕಾಡಾನೆಗಳ ಸಮಸ್ಯೆಯು ಉಲ್ಬಣಗೊಂಡಿರುವುದರಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳಕ್ಕೆ ಶಿರಾಡಿ ಘಾಟ್ ಮೂಲಕ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಕೈಗೊಂಡಿರುವ ಭಕ್ತಾಧಿಗಳಲ್ಲಿ ವಿನಂತಿಸಿ ಕೊಳ್ಳುವುದೇನೆಂದರೆ –

1) ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಹಾಗೂ ಗುಂಪು ಗುಂಪಾಗಿ ಸಂಚರಿಸಬೇಕು.

2) ಈ ಬಗ್ಗೆ ರಸ್ತೆಬದಿಯಲ್ಲಿ ಅಳವಡಿಸಿರುವ ಸೂಚನಾ ಫಲಕಗಳ ಮಾಹಿತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ.

3) ಈ ಸ್ಥಳಗಳಲ್ಲಿ ನಿಯೋಜಿಸಲಾಗಿರುವ ಅರಣ್ಯ ಸಿಬ್ಬಂದಿಗಳಿಗೆ ಸಹಕಾರ ನೀಡಿ ಯಾವುದೇ ರೀತಿ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಬೇಕು.

4) ಕತ್ತಲಾದ ನಂತರ ರಾತ್ರಿ ವೇಳೆಯಲ್ಲಿ ತಮ್ಮ ಪಾದಯಾತ್ರೆಗಳನ್ನು ಮುಂದುವರೆಸಬಾರದು.

5) ಯಾವುದೇ ರೀತಿಯ ಪ್ಲಾಸ್ಟಿಕ್/ಘನತ್ಯಾಜ್ಯ ವಸ್ತುಗಳನ್ನು ರಸ್ತೆಯ ಅಕ್ಕ ಪಕ್ಕಗಳಲ್ಲಿ ಎಸೆಯಬಾರದಾಗಿ ಸೂಚಿಸಿದೆ.

ಪ್ರಕಟಣೆ ! ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ವಿಭಾಗ, ಹಾಸನ

LEAVE A REPLY

Please enter your comment!
Please enter your name here