” ಕಳೆದ ಕೆಲವು ತಿಂಗಳಿಂದ ನಡೆದಿರುವ ಮೂರು ಆನೆಗಳ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ” -ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್

0

ಹಾಸನ ಮಾ.15(ಹಾಸನ್_ನ್ಯೂಸ್ !,  ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಸುಂಡೆಕೆರೆ  ಎಸ್ಟೇಟ್ ನಲ್ಲಿ 16ರಿಂದ 18 ವರ್ಷದ ಗಂಡು ಆನೆಯು ಮರಣ ಹೊಂದಿದ್ದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ 50 ಸೆ. ಮೀ.ಉದ್ದ ದಂತ ಆನೆಯ ದೇಹದಲ್ಲಿಯೇ ಇದೆ  ಕಳೆದ ಕೆಲವು ತಿಂಗಳಿಂದ ನಡೆದಿರುವ ಮೂರು ಆನೆಗಳ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್ ಅವರು ತಿಳಿಸಿದ್ದಾರೆ.

ಅರಣ್ಯ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ  ಮಾಹಿತಿ ನೀಡಿದ ಅವರು ಹಾಸನ ಪಶು ವೈದ್ಯಕೀಯ ಇಲಾಖೆ ಕಾಲೇಜಿನ ರೋಗ ವಿಜ್ಞಾನ ಶಾಸ್ತ್ರದ ಅಧ್ಯಯನ ಹಾಗೂ ಪಶು ವೈದೈಕೀಯ ವೈದ್ಯರಿಂದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ ಯಾವುದೇ ರೀತಿಯ  ಗುಂಡಿನಿಂದ ದಾಳಿ ಆಗಿಲ್ಲ ಎಂದರು.

ಮಾ.2 ರಂದು ಎಸ್ಟೇಟ್ ನ  ವ್ಯವಸ್ಥಾಪಕರು ಮಾಹಿತಿ ನೀಡಿದರು ಸುಮಾರು 25 ಆನೆಗಳು ಎಸ್ಟೇಟ್‍ನ  ಭಾಗದಲ್ಲಿ ಬೀಡುಬಿಟ್ಟಿವೆ ಕೆಲಸ ಮಾಡಲು ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಹ ಸ್ಥಳಕ್ಕೆ  ಭೇಟಿ ನೀಡಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು ಹಾಗಾಗಿ ಗುಂಡಿನ ದಾಳಿ ನಡೆದಿರುವ  ಸಾಧ್ಯತೆ ಇಲ್ಲ ಎಂದು  ತಿಳಿಸಿದರು.

ಮರಣ ಹೊಂದಿದ ಆನೆಯ ದೇಹದ ಕತ್ತಿನ ಭಾಗದಲ್ಲಿ ಗಾಯದ ರೂಪದಲ್ಲಿ ರಂದ್ರಗಳಾಗಿದ್ದು ಮದ ಏರಿದ ಗಂಡು ಆನೆ ದಾಳಿಯಿಂದ ಗಾಯಗೊಂಡು ಮರಣ ಹೊಂದಿರಬಹುದು  ಎಂದು ಊಹಿಸಲಾಗಿದೆ ಎಂದು ಡಾ.ಬಸವರಾಜ್ ಹೇಳಿದರು.

ಕಳೆದ ಜನವರಿ ತಿಂಗಳಲ್ಲಿ ಅನೆಗುಂಡಿಯಲ್ಲಿ ಒಂದು ಹೆಣ್ಣಾನೆ ಮೃತಪಟ್ಟಿದ್ದು ಅದರ ದೇಹದಲ್ಲಿ 12 ಎಂ.ಎಂ. ಗುಂಡು ದೊರಕಿದೆ ಗುಂಡು ತಾಗಿದ  7 ರಿಂದ 8 ದಿನಗಳ ನಂತರ ಅನಾರೋಗ್ಯಗೊಂಡು   ಸಾವನ್ನಪ್ಪಿದೆ .ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಯಸಳೂರು ಭಾಗದ ಶನಿಕಲ್ಲು ನಲ್ಲಿ 55ರಿಂದ 60 ವರ್ಷದ ಆನೆಯು ನೈಸರ್ಗಿಕವಾಗಿ ಸಾವನ್ನಪ್ಪಿದ್ದು 15 ರಿಂದ 20 ದಿನಗಳ ನಂತರ ಪತ್ತೆಯಾಗಿತ್ತು ಅದರ ದೇಹದಲ್ಲಿ ದಂತ  ಕಳವಾಗಿದೆ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಿಂದ  ಹಾಸನಕ್ಕೆ ಪ್ರಯಾಣಿಸುವ  ಆನೆಗಳನ್ನು ತಡೆಯಲು ಆಲೂರು ವಲಯದ ಹೇಮಾವತಿ ಹಿನ್ನೀರಿನ ಭಾಗದಲ್ಲಿ 4.24 ಕಿಲೋ.ಮೀಟರ್ ಆನೆ  ತಡೆಗೋಡೆಯನ್ನು ನಿರ್ಮಿಸಲಾಗುತ್ತಿದ್ದು ಕಾಮಗಾರಿಯು ಪ್ರಗತಿಯಲ್ಲಿದ್ದು 15ರಿಂದ 20  ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

30ರಿಂದ 40 ಕಿಲೋಮೀಟರ್ ಆನೆ ತಡೆಗೋಡೆಯನ್ನು ನಿರ್ಮಿಸುವುದರಿಂದ ಆನೆ ಹಾವಳಿಗೆ ಶಾಶ್ವತ ಪರಿಹಾರವನ್ನು ದೊರೆಯುವ ನಿರೀಕ್ಷೆ ಇದೆ. ಈ ಕಾಮಗಾರಿಗೆ ಒಂದು ಕಿಲೋಮೀಟರ್‍ಗೆ  1.20 ಕೋಟಿ ವೆಚ್ಚವಾಗಲಿದ್ದು ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ ಸಂಧರ್ಭದಲ್ಲಿ  ಕೇಂದ್ರಕ್ಕೆ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆನೆ ಹಾವಳಿ ತಡೆಗಟ್ಟಲು ಹೆಚ್ಚಿನ ವ್ಯಾಪ್ತಿಯಲ್ಲಿ ತಡೆಗೋಡೆ  ನಿರ್ಮಿಸಲಾಗುವುದು ಎಂದರು.

LEAVE A REPLY

Please enter your comment!
Please enter your name here