ರೈತರು ಬಾಡಿಗೆ ಆಧಾರದ ಮೇಲೆ ಕೃಷಿ ಯಂತ್ರಗಳ ಉಪಯೋಗ ಪಡೆಯಬಹುದು

0

ಕೃಷಿ ಇಲಾಖೆಯ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರವನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಇಂದು ಗಂಡಸಿಯಲ್ಲಿ ಉದ್ಘಾಟಿಸಿದರು.
ಕೃಷಿ ಇಲಾಖೆ ಮತ್ತು

ವರ್ಷಾ ಅಗ್ರಿ ಬ್ಯುಸಿನೆಸ್ ಸೆಂಟರ್ ಫಾರ್ ಡೆವಲಪ್ಮೆಂಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಪ್ರಾರಂಭಿಸಿರುವ ಈ ಕೇಂದ್ರ ದಲ್ಲಿ ರೈತರುಗಳು ಬಾಡಿಗೆ ಆಧಾರದ ಮೇಲೆ ಯಂತ್ರಗಳ ಉಪಯೋಗ ಪಡೆಯಬಹುದಾಗಿರುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ

ಕಂಪನಿಗಳ ಶೇ.30 ಬಂಡವಾಳ ಹೂಡಿ ಸರ್ಕಾರದ ಶೇ.70 ರಷ್ಟು ಸಹಾಯ ಧನ ಪಡೆದುಕೊಂಡು ವಿವಿಧ ಕೃಷಿ ಉಪಯೋಗಿ ಯಂತ್ರಗಳನ್ನು ಈ ಯೋಜನೆಯಡಿ ಖರೀದಿಸಲಾಗಿದೆ. ಆದರೆ

ಪ್ರಸ್ತುತ ಯಂತ್ರಗಳ ಬಾಡಿಗೆಯು ದುಭಾರಿಯಾಗಿದ್ದು, ರೈತರುಗಳಿಗೆ ಆರ್ಥಿಕವಾಗಿ ಹೊರೆಯಾಗಲಿದೆ.

ಸರ್ಕಾರದಿಂದ ಹೆಚ್ಚಿನ ಸಹಾಯಧನ ಸಿಗಲಿದ್ದು ಬಾಡಿಗೆಯನ್ನು ಕಡಿಮೆ ಪಡೆಯುವಂತೆ ಒತ್ತಾಯಿಸಿದರು.. ರೈತರು ಈ ಯಂತ್ರಗಳ ಸದುಪಯೋಗ ಪಡೆಯುವಂತೆ ತಿಳಿಸಿದರು..
ಈ ಕಾರ್ಯಕ್ರಮದಲ್ಲಿ

ತಾ.ಪಂ.ಸದಸ್ಯ ಆಗ್ರೋ ಬಾಬು, ಗ್ರಾ.ಪಂ ಅಧ್ಯಕ್ಷೆ ಸವಿತಾ ಪ್ರಶಾಂತ್ ಕುಮಾರ್ , ಮುಖಂಡರಾದ ಗಂಡಸಿ ಅಯ್ಯಣ್ಣ, ನಾಗಣ್ಣ, ಕೃಷ್ಣೇಗೌಡ, ಜಟ್ಟಿ (ತಿಮ್ಮೇಗೌಡ) , ಕೃಷಿ ಸಹಾಯಕ ನಿರ್ದೇಶಕ ಅಶೋಕ್, ಕೃಷಿ ಅಧಿಕಾರಿಗಳು ರೈತರುಗಳು

https://youtu.be/KU69kKFU31c

ಭಾಗವಹಿಸಿದ್ದರು,…

LEAVE A REPLY

Please enter your comment!
Please enter your name here