ಹೊಳೆನರಸೀಪುರ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಹೊಲ, ಗದ್ದೆ ಮತ್ತು ತೋಟಗಳಲ್ಲಿ ಬೆಳೆದ ಬೆಳೆಗಳ ವಿವರವನ್ನು ಮೊಬೈಲಿನಲ್ಲಿ ಬೆಳೆ ಸಮೀಕ್ಷಾ ಆ್ಯಪ್‌ನಲ್ಲಿ ದಾಖಲಿಸಿಕೊಳ್ಳಲು ಕೃಷಿ ಇಲಾಖೆ ಅವಕಾಶ ಕಲ್ಪಿಸಿದೆ.
ರೈತರು ತಾವು ಬೆಳೆದ ಪ್ರತಿ ಬೆಳೆಯ 2 ಚಿತ್ರವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿ ಆ್ಯಪ್ ನಲ್ಲಿ ಅಪ್‌ಲೋಡ್ ಮಾಡಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರದ ಪರಿಹಾರ ಕಾರ್ಯಕ್ಕೆ ಒಳಪಡಲು ಇದು ಸಹಕಾರಿಯಾಗುತ್ತದೆ. ಬ್ಯಾಂಕ್ ಅಥವಾ ಸಹಕಾರಿ ಸಂಘಗಳಲ್ಲಿ ಸಾಲ ಸೌಲಭ್ಯ ಪಡೆಯಲು ಹಾಗೂ ಬೆಳೆ ವಿಮೆ ಮಾಡಿ ಸಲು ಸಹ ಅಗತ್ಯವಾಗುತ್ತದೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಸಪ್ಪ ತಿಳಿಸಿದ್ದಾರೆ. ವಿಧಾನ: ಗೂಗಲ್ ಪ್ಲೇಸ್ಟೋರ್‌ನಲ್ಲಿ ಹೊಳೆನರಸೀಪುರ ತಾಲೂಕಿನ ನಾನಾ ಗ್ರಾಮಗಳ ರೈತರಿಗೆ ಬೆಳೆ ಸಮೀಕ್ಷೆ ಆ್ಯಪ್‌ನ ಮೂಲಕ ರೈತರ ಮೊಬೈಲ್ ನಲ್ಲಿ ಸ್ವಯಂ ದಾಖಲಿಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ.
ಖಾರಿಫ್ ಸೀಜನ್ ಫಾರ ಕ್ರಾಫ್ಟ್ ಸರ್ವೆ 2020-23 ಎಂದು ಹುಡುಕಿ ಅಥವಾ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳು ವುದು. ಆಧಾರ್ ಮತ್ತು ಮೊಬೈಲ್ ನಂಬರ್‌ನ್ನು ನಮೂದಿಸಬೇಕಿದೆ. ಸಕ್ರಿಯ ಗೊಳಿಸಲು ಒನ್ ಟೈಂ ಪಾಸ್‌ವರ್ಡ್ ನಮೂದಿಸಬೇಕು. ನಂತರ ಮಾಸ್ಟರ್ ವಿವರ ಹಾಗೂ ಜಮೀನಿನ ಸರ್ವೆ ನಂಬರ್ ಗಳನ್ನು ಆ್ಯಪ್ ಗೆ ಸೇರ್ಪಡೆಗೊಳಿಸಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂ. 8448447715 ಅಥವಾ ರೈತರು ಖುದ್ದಾಗಿ ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗಳಲ್ಲಿ ಸಂಪರ್ಕಿಸಬಹುದಾಗಿದೆ. ಬೆಂಬಲ ಬೆಲೆಗೆ ಧವಸಗಳನ್ನು ಸರಕಾರ ಖರೀದಿಸುವ ಸಂಬಂಧ ರೈತರು ತಾವೇ ಸ್ವಯಂ ದಾಖಲಿಸಿಕೊಂಡ ಬೆಳೆ ಸಮೀಕ್ಷಾ ವರದಿ ಅನುಕೂಲವಾಗುತ್ತದೆ. ಅತಿ ವೃಷ್ಟಿ, ಅನಾವೃಷ್ಟಿಗೊಳಗಾದಾಗ ಬೆಳೆ ಪರಿಹಾರ ಕಾರ್ಯಕ್ಕೆ ಇದು ಅಧಿಕೃತ ದಾಖಲೆಯಾಗುತ್ತದೆ ಎಂದಿದ್ದಾರೆ.