ನೀವು ರೈತರೇ , ಹುಡುಗಿ ಸಿಗುತ್ತಿಲ್ಲವೇ ?
ಕೃಷಿ ಸ್ವಯಂವರ ವಿನೂತನ ಕಾರ್ಯಕ್ರಮ ಹಾಸನದ ಅಶೋಕ್ ಮತ್ತು ತಂಡದಿಂದ
ಹಾಸನ: ರೈತ ಎನ್ನುವ ಒಂದೆ ಕಾರಣಕ್ಕೆ ಗ್ರಾಮಗಳ ರೈತ ಮಕ್ಕಳ ಮದುವೆ ಆಗಲು ಯಾರು ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ಕೃಷಿ ಸ್ವಯಂವರ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಡೆನಹಳ್ಳಿ ನಾನೋ ಫುಡ್ ಪಾರ್ಕ್ ಸಿಇಒ ಅಶೋಕ್ ತಿಳಿಸಿದರು. , ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ,
ನಮ್ಮ ದೇಶದಲ್ಲಿ ಇಂದಿಗೂ ಶೇಕಡ. 60 ರಷ್ಟು ಜನರ ಜೀವನ ಸಾಗಿಸಲು ಕಾರಣ ಆಗಿರುವುದು ಕೃಷಿ ಮತ್ತು ಇದರ ಉಪಕಸುಬುಗಳು. ಆದರೆ ಈಗ ಕೃಷಿ ಲಾಭದಾಯಕವಲ್ಲ ದಾಗಿರುವುದರಿಂದ ಎಷ್ಟೋ ಯುವಕರು ಹಿಮ್ಮುಖರಾಗುತ್ತಿರುವುದು ಒಂದು ಕಡೆಯಾದರೆ ರೈತ ಎನ್ನುವ ಕಾರಣಕ್ಕೆ ಹುಡುಗಿ ಸಿಗದಿರುವುದು ಇನ್ನೊಂದು ಕಡೆಯಾಗಿದೆ. ಎಷ್ಟೋ ಜನರು ನಗರಗಳಲ್ಲಿ ಕೆಲಸ ಸಿಗದೇ ಇರುವ ವಿದ್ಯಾವಂತ ಯುವಕರು ಊರಿನಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿರುವುದು ಹಳ್ಳಿಗಳಲ್ಲಿ ಸಾಮಾನ್ಯ ಆಗಿದೆ ಮತ್ತು ಸಾಕಷ್ಟು ದುಡ್ಡು ಸಂಪಾದನೆಯಿದ್ದರೂ ಹುಡುಗಿಯರು ಸಿಗದೇ ಇರುವುದು ಎಷ್ಟೋ ಮಾನಸಿಕ ಹಿಂಸೆಯಿಂದ ತತ್ತರಿಸಿರುತ್ತಾರೆ. ಕೆಲವರಿಗೆ 30-35 ವರ್ಷ ಕಳೆದರು ಮದುವೇ ಆಗದೆ ಇರುವುದು ಎಲ್ಲ ಹಳ್ಳಿಗಳಲ್ಲೂ ಸರ್ವೇ ಸಾಮಾನ್ಯ ಆಗಿ ಪರಿಣಮಿಸಿದ್ದು, ಹಳ್ಳಿಗಳ ಸ್ವಾಸ್ಥ್ಯ ಹದಗೆಡುವುದರ ಜೊತೆಗೆ ಸಮಾಜದಲ್ಲಿ ಅಸಮತೋಲನ ಸೃಷ್ಟಿಸುತ್ತಿದೆ ಮತ್ತು
ಕುಡಿತದ ದಾಸರಾಗುತ್ತಿದ್ದಾರೆ ಎಂದು ಆತಂಕವ್ಯಕ್ತಪಡಿಸಿದರು. ಪ್ರಮುಖವಾಗಿ ಬೆಳೆಯುವ ಪ್ರತಿಯೊಂದು ಬೆಳೆಯನ್ನು ಚಿನ್ನ, ಬೆಳ್ಳಿ, ವಜ್ರ, ವೈಡೂರ್ಯ ಎಂದು ಕರೆಯುವುದು. ನಮ್ಮ ಸಂಸ್ಥೆಯು ಕೃಷಿ ಸ್ವಯಂವರ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಚಿನ್ನ, ಬೆಳ್ಳಿ, ವಜ್ರ, ವೈಡೂರ್ಯ ಬೆಳೆಯುವ ನನ್ನ ಹಾಸನ ರೈತ ಅಣ್ಣ ತಮ್ಮಂದಿರಿಗೆ ಭಾರತ ದೇಶದ ಇತರ ಭಾಗಗಳಿಂದ ವಧುಗಳನ್ನು ಹುಡುಕಿ ತಂದು ಮದುವೆ ಮಾಡುವುದು ಇದರ ಮುಖ್ಯ ಉದ್ದೇಶ ಆಗಿರುತ್ತದೆ ಎಂದರು.
ಸಿಟಿಯಲ್ಲಿ ಬೆಳೆದ ನಾನು ಕಳೆದ 2.5 ವರ್ಷದಿಂದ ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದು, ಪ್ರತಿಯೊಂದು ಸಮಸ್ಯೆಯನ್ನು ಸ್ವತಃ ನಾನೇ ಕೇಳಿ ತಿಳಿದುಕೊಂಡು ತಕ್ಕ ಮಟ್ಟಿಗೆ ಪರಿಹಾರ ಕಂಡುಹಿಡಿಯುತ್ತಿದ್ದೇನೆ. ಅದರಲ್ಲಿಯೂ ಈ ಸಮಸ್ಯೆ ಯುವ ರೈತರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ಕುಡಿತದ ದಾಸಕ್ಕೆ ಕಂಡುಹಿಡಿಯಬೇಕಾಗಿದ್ದವರು ಹೀಯಾಳಿಸಿ ಸಮಸ್ಯೆ ಮತ್ತಷ್ಟು ಶರಣಾಗುತ್ತಿದ್ದಾರೆ. ಪರಿಹಾರ ಕಂಡುಹಿಡಿಯಬೇಕಾಗಿದ್ದವರು ಬೃಹದಾಕಾರವಾಗಿ ಬೆಳೆಯಲು ಕಾರಣರಾಗುತ್ತಿದ್ದಾರೆ. ನಮ್ಮ ಸಂಸ್ಥೆಯು ಅಧ್ಯಯನ ನಡೆಸಿ ಮತ್ತು ಇತರ ಮೂಲಗಳಿಂದ ವಿವರ ಸಂಗ್ರಹಿಸಿ ನಮ್ಮ ಸಂಸ್ಥೆಯ
ಮುಖಾಂತರ ಪರಿಹಾರ ಕಂಡುಹಿಡಿದಿದೆ ಮತ್ತು ಅದನ್ನು ತಲುಪಿಸುವ ಜವಾಬ್ದಾರಿ ವ್ಯಯಕ್ತಿಕವಾಗಿ ನಾನೇ ವಹಿಸಿಕೊಂಡಿರುತ್ತೇನೆ ಎಂದು ಹೇಳಿದರು. ನನ್ನ ಈ ನಿರ್ಧಾರ ನಗೆಪಾಟಲಿಗೆ ಈಡಾದರು ಯಾವುದೇ ಮುಜುಗರ ಇಲ್ಲದೆ ವ್ಯವಸ್ಥಿತವಾಗಿ ಕಾನೂನು ಅಂಶಗಳನ್ನು ಇಟ್ಟುಕೊಂಡು ಸಾಮಾಜಿಕ ನೆಲೆಗಟ್ಟಿನಲ್ಲಿ ಪರಿಹರಿಸಲು ನಿರ್ಧರಿಸಲಾಗಿದೆ ಮತ್ತು ಇದು ನನ್ನ ಕರ್ತವ್ಯ ಆಗಿರುತ್ತದೆ ಹಳ್ಳಿಗಳಲ್ಲಿ ಇದರಿಂದ ಒಂದಷ್ಟು ಬದಲಾವಣೆ ತರುವುದು ನಿಶ್ಚಿತ ಮತ್ತು ಇದಕ್ಕೆ ರೈತರು ಮಾಡಬೇಕಾಗಿರುವುದು ಇಷ್ಟೇ.
ತಮ್ಮ ವಿವರಗಳನ್ನು 9964979899 ವಾಟ್ಸಪ್ಪ ಮಾಡಬೇಕಾಗಿರುತ್ತದೆ. ಕೃಷಿ ಸ್ವಯಂವರ ಫೀಸ್ ಬಂದು 100 ರೂಪಾಯಿ ಕಟ್ಟಲೇಬೇಕಾಗಿರುತ್ತದೆ. ರೈತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9964979899 ಅಥವಾ ಅರಕಲಗೂಡಿನಲ್ಲಿ ಇರುವ ನಮ್ಮ ಸಂಸ್ಥೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.