ಇಲ್ಲಿದೆ ಮಾಹಿತಿ ; ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಜೋಡಣೆಯ ಗಡುವಿನ ಬಗ್ಗೆ

0

ದೆಹಲಿ / ಬೆಂಗಳೂರು  : ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ನಂಬರ್ ಜೋಡಣೆ ಅವಧಿ ವಿಸ್ತರಣೆ ಇದೇ ವರ್ಷದ ಜೂನ್ 30 ಕೊನೇ ದಿನ.
ಮಾರ್ಚ್ 30 ರ ಅವಧಿ ವಿಸ್ತರಿಸಿ ಕೇಂದ್ರ ಆರ್ಥಿಕ ಸಚಿವಾಲಯ ಇದೀಗ ಆದೇಶ. ಲಿಂಕ್ ಆಗದ ಪಾನ್ ಮತ್ತು ಆಧಾರ್ ಕಾರ್ಡ್ ಗೆ ಜೂನ್ 30 ರ ಬಳಿಕ ಮೌಲ್ಯ ಇಲ್ಲ ಎಂದಿದೆ . ಹೆಚ್ಚಿನ ದಂಡ ಶುಲ್ಕ ಪಾವತಿಸಿ ಅನಂತರ ಲಿಂಕ್ ಮಾಡಿಕೊಳ್ಳಬೇಕಾಗುತ್ತದೆ . , ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ

ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಂಡಿತ್ತು. ಹಾಗೂ ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ಈ ವಿಭಾಗ ಸರಿಯಾಗಿ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಅನೇಕರು ದೂರು ಸಹ ನೀಡಿದ್ದರು., ಮೂರು ತಿಂಗಳ ಬಳಿಕವೂ ಈ ಎರಡೂ ಮಹತ್ವದ ದಾಖಲೆಗಳನ್ನು ಲಿಂಕ್ ಮಾಡುವುದರಲ್ಲಿ ತೆರಿಗೆದಾರ ವಿಫಲನಾದಲ್ಲಿ, ಅವರ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆಯಂತೆ . ಅಂತಹ ಪ್ರಕರಣಗಳಲ್ಲಿ ತೆರಿಗೆದಾರ ತಮ್ಮ ಪಾನ್ ಕಾರ್ಡ್ ಅನ್ನು ಒದಗಿಸಲು, ಅದನ್ನು ಉಲ್ಲೇಖಿಸಲು ಅಥವಾ ಬಳಸಲು ಸಾಧ್ಯವಾಗುವುದಿಲ್ಲ ಎಂದರ್ಥ . , ಜೂನ್ 30ರ ಗಡುವಿನ ಒಳಗೆ ಪಾನ್ ಮತ್ತು ಆಧಾರ್ ಸಂಖ್ಯೆ ಜೋಡಣೆ ಮಾಡುವಲ್ಲಿ ವಿಫಲರಾದರೆ, ಜುಲೈ 1ರ ಬಳಿಕ ತೆರಿಗೆದಾರರು ಕಾನೂನಾತ್ಮಕ ದಂಡದ ಕ್ರಮಗಳನ್ನು ಎದುರಿಸಬೇಕಾಗುತ್ತದೆ . ,

ನಿಷ್ಕ್ರಿಯಗೊಂಡ ಪಾನ್ ಕಾರ್ಡ್‌ಗಳಿಗೆ ತೆರಿಗೆ ಮರುಪಾವತಿ ಇರುವುದಿಲ್ಲ. , ರಿಟರ್ನ್ ಫೈಲ್ ಮಾಡಿದ ಬಳಿಕ ಎರಡು ದಾಖಲೆಗಳನ್ನು ತೆರಿಗೆದಾರ ಜೋಡಣೆ ಮಾಡಿದರೆ, ಆದಾಯ ತೆರಿಗೆ ಇಲಾಖೆಯು, ಎರಡೂ ದಾಖಲೆಗಳನ್ನು ಜೋಡಣೆ ಮಾಡದ ಅವಧಿಯಲ್ಲಿನ ಮರುಪಾವತಿ ಮೇಲಿನ ಬಡ್ಡಿಯನ್ನು ಪಾವತಿಸುವುದಿಲ್ಲ. , ಅಂತಹ ಪ್ರಕರಣಗಳಲ್ಲಿ ಮೂಲದಲ್ಲಿ ಕಡಿತಗೊಂಡ ತೆರಿಗೆ ( TDS) ಮತ್ತು ಮೂಲದಲ್ಲಿ ಸಂಗ್ರಹಿಸಿದ ತೆರಿಗೆ ( TCS ) ಎರಡನ್ನೂ ಅಧಿಕ ಪ್ರಮಾಣದಲ್ಲಿ ಕಡಿತ ಹಾಗೂ ಸಂಗ್ರಹ ಮಾಡಲಾಗುತ್ತದೆ ತಿಳಿದಿರಲಿ‌,‌ತೆರಿಗೆದಾರರು,

1,000 ರೂ ವಿಳಂಬ ದಂಡವನ್ನು ಪಾವತಿಸಿದ 30 ದಿನಗಳ ಒಳಗಾಗಿ ತಮ್ಮ ಪಾನ್ ಕಾರ್ಡ್ ಅನ್ನು ಪುನಃ ಸಕ್ರಿಯಗೊಳಿಸಿಕೊಳ್ಳಲು ಅವಕಾಶವಿದೆ. ಈವರೆಗೂ ಆಧಾರ್ ಕಾರ್ಡ್ ಜತೆಗೆ 51 ಪಾನ್ ಕಾರ್ಡ್‌ಗಳನ್ನು ಲಿಂಕ್ ಮಾಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. , ಆಧಾರ್ ಕಾರ್ಡ್ ಮತ್ತು ಪಾನ್ ಜೋಡಣೆಗೆ 2017ರಿಂದಲೂ ಕೇಂದ್ರ ಸರ್ಕಾರ ಸೂಚನೆ ನೀಡುತ್ತಾ ಬಂದಿದೆ ಹೌದು. 2022ರ ಏಪ್ರಿಲ್ 1ರಂದು 500 ರೂ ಶುಲ್ಕ ವಿಧಿಸಲಾಗಿತ್ತು ಆಗಲೂ ಇಷ್ಟು ಮಟ್ಟದ ಸೌಂಡ್ ಮಾಡಿರಲಿಲ್ಲ .

2022ರ ಜುಲೈ 1ರಿಂದ ಶುಲ್ಕವನ್ನು 1,000 ರೂಪಾಯಿಗೆ ಹೆಚ್ಚಿಸಲಾಗಿತ್ತು , ಇಲ್ಲಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆ ಜೋರಾಯಿತು. ಒಂದು ವೇಳೆ ಜೂನ್ 30ರ ಒಳಗೂ ಈ ದಾಖಲೆಗಳನ್ನು ಜೋಡಣೆ ಮಾಡದೆ ಇದ್ದರೆ ಮುಖ್ಯವಾಗಿ ಆದಾಯ ತೆರಿಗೆ ಪಾವತಿದಾರರಿಗೆ ಸಮಸ್ಯೆ ಎದುರಾಗಲಿದೆ ಎನ್ನಲಾಗಿದೆ .

LEAVE A REPLY

Please enter your comment!
Please enter your name here