ಕೇವಲ 20ದಿನಗಳಲ್ಲಿ ಹಾಸನದ ಸರ್ಕಾರಿ ಶಾಲೆಗಳಿಗೆ ಎಷ್ಟು ದೊಡ್ಡ‌ಮಟ್ಟದಲ್ಲಿ ಸೇರುತ್ತಿದ್ದಾರೆ ಗೊತ್ತೆ

    0

    ಹಾಸನದಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.

    ಹಾಸನ ಜಿಲ್ಲೆಯಲ್ಲಿ ಈ ಸಾಲಿನ ಶಾಲಾ ದಾಖಲಾತಿ ಪ್ರಾರಂಭವಾದ ಇಪ್ಪತೇ ದಿನಗಳಲ್ಲಿ 5,295 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಒಂದನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಇವರಲ್ಲದೆ ಹಲವು ಮಕ್ಕಳು ಬೇರೆ ಬೇರೆ ತರಗತಿಗಳಿಗೂ ದಾಖಲಾತಿ ಪಡೆಯುತ್ತಿರೋದು ಅದರಲ್ಲು ಬಂದವರಲ್ಲಿ ಎತೇಚ್ಚವಾಗಿ ಖಾಸಗಿ ಶಾಲೆಯಿಂದ ಬರುತ್ತಿರೋದು ಆಶ್ಚರ್ಯ ವಾಗಿದೆ

    ಕೋವಿಡ್ ಸಂಕಷ್ಟದಲ್ಲೂ ಹಣದ ಕೊರತೆಯಿಂದ ಅಥವಾ / ಖಾಸಗಿ ಶಾಲೆಗಳ ಶುಲ್ಕದ ವಿಚಾರ ಅಥವಾ ಸರ್ಕಾರಿ ಶಾಲೆಯಲ್ಲಿ ಬದಲಾವಣೆ ಗಳು ಆಗುತ್ತಿರೋದರಿಂದ ಪೋಷಕರು ಸರ್ಕಾರಿ ಶಾಲೆಗಳಿಗೆ ಮೊರೆ ಹೋಗುತ್ತಿದ್ದಾರ ಗೊತ್ತಿಲ್ಲ

    2021–22ನೇ ಸಾಲಿನ ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಜೂನ್ 15 ರಂದು ಆರಂಭವಾಗಿತ್ತು  ಜುಲೈ 31ರವರೆಗೂ ದಾಖಲಾತಿಗೆ ಅವಕಾಶವಿದೆ.

    ಇದೇ 20 ದಿನಗಳಲ್ಲಿ ಸರ್ಕಾರಿ, ಖಾಸಗಿ ಹಾಗೂ Govt ಎಡೆಡ್ ಶಾಲೆಗಳು ಸೇರಿ 1 ರಿಂದ 10ನೇ ತರಗತಿವರೆಗೆ ಒಟ್ಟು 1,69,302 ವಿದ್ಯಾರ್ಥಿಗಳು ಈ ವರೆಗೂ ದಾಖಲಾತಿ ಪಡೆದಿದಿರುವ ವರದಿಯಾಗಿದೆ .

    ಸರ್ಕಾರಿ ಶಾಲೆಯಲ್ಲಿ ಶೇ 60.50, ಅನುದಾನಿತ ಶೇ 47.27 ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಶೇ 28.22 ರಷ್ಟು ದಾಖಲಾತಿ ಆಗಿದೆ.


    ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರಿಗೆ ಸೌಕರ್ಯಗಳು, ಗುಣಮಟ್ಟ ಹೆಚ್ಚಿಸಲಾಗುತ್ತಿದೆಯಂತೆ .,  ಹಾಸನ ಜಿಲ್ಲೆಯಲ್ಲಿ ಮುಂದಿನವಾರ ಲಾಕ್‌ಡೌನ್ ಸಡಿಲಿಕೆಯಾದರೆ ಇನ್ನಷ್ಟು ಮಕ್ಕಳು ದಾಖಲಾಗುವ ವಿಶ್ವಾಸವಿದೆ

    – ಪ್ರಕಾಶ್ (DDPI , ಹಾಸನ)

    LEAVE A REPLY

    Please enter your comment!
    Please enter your name here