ಹಾಸನ / ಕರ್ನಾಟಕ : ಲೀಟರ್ ಹಾಲಿಗೆ ₹30 ನಿಗದಿ
₹1.25 ಹೆಚ್ಚಳ,( ಸದ್ಯಕ್ಕೆ ಒಕ್ಕೂಟದಿಂದ ₹ 28.75 ನೀಡಲಾಗುತ್ತಿದ್ದು, ಹೊಸ ದರದ ನಂತರ ರಾಜ್ಯದಲ್ಲಿಯೇ ಗರಿಷ್ಠ ದರ ನೀಡುವ ಹಿರಿಮೆ ಒಕ್ಕೂಟದ್ದಾಗಲಿದೆ ) ವಾರದಲ್ಲಿಯೇ ಜಾರಿಗೆ ಕ್ರಮ: ಅಧ್ಯಕ್ಷ HD ರೇವಣ್ಣ
ಹಾಸನದ ಕೌಶಿಕ ಬಳಿ 66 ಎಕರೆ ಜಾಗದಲ್ಲಿ ₹540 ಕೋಟಿ ವೆಚ್ಚದಲ್ಲಿ ಮೆಗಾ ಡೇರಿಯ ಕೆಲಸ ಪ್ರಾರಂಭವಾಗಿದೆ. 2023ರ ಡಿಸೆಂಬರ್ಗೆ ಪೂರ್ಣವಾಗಲಿದೆ
• ಹಾಸನ ಹಾಲು ಒಕ್ಕೂಟವು 2021-22 ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ₹ 1.700 ಕೋಟಿ ವಹಿವಾಟು ನಡೆಸಿದ್ದು, ₹23 ಕೋಟಿಗಳಿಗಿಂತಲೂ ಹೆಚ್ಚು ಲಾಭ ಗಳಿಸಿದೆ
2022-23 ನೇ ಸಾಲಿಗೆ ವಾರ್ಷಿಕ ವಹಿವಾಟನ್ನು 2ಸಾವಿರ ಕೋಟಿ ₹ಗೆ ಹೆಚ್ಚಿಸುವ ಹೊಂದಲಾಗಿದ್ದು, ಎರಡು ತಿಂಗಳಲ್ಲಿಯೇ 9 ಕೋಟಿ ₹ಲಾಭ ಗಳಿಸಿದೆ

ಒಕ್ಕೂಟದಲ್ಲಿ ಪ್ರತಿ ಗಂಟೆಗೆ 30ಸಾವಿರ ಬಾಟಲ್ ತಯಾರಿ ಸಾಮರ್ಥ್ಯ ಹೊಂದಿದ್ದು, UHT, ಸುವಾಸಿತ ಹಾಲಿನ 9 ಬಗೆಯ ವಿವಿಧ ಫ್ಲೇವರ್ಗಳಲ್ಲಿ ಉತ್ಪಾದಿಸಲಾಗುತ್ತಿದೆ. ದೇಶದ ಗಡಿ ಪ್ರದೇಶಗಳಲ್ಲೂ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ನಿತ್ಯ 2 ಲಕ್ಷ ಬಾಟಲ್ಗಳವರೆಗೆ ಮಾರಾಟ ಮಾಡಲಾಗುತ್ತಿದೆ ಅಂತೆಯೇ ರೈಲಿನಲ್ಲಿ ಈ ಹಾಲು ಮಾರಾಟ ಮಾಡಲಾಗುತ್ತಿದ್ದು, ವಿಮಾನದಲ್ಲೂ ಮಾರಾಟ ಮಾಡಲು ತಯಾರಿ ನಡೆದಿದೆ
ರೈತರಿಗೆ ಸಲಹೆ :
ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದ್ದು, ರಾಸುಗಳು ಪೂರ್ಣ ಪ್ರಮಾಣದಲ್ಲಿ ಹಸಿರು ಮೇವನ್ನು ತಿಂದು ಗುಣಮಟ್ಟದ ಹಾಲನ್ನು ಪೂರೈಕೆ ಮಾಡಲು ಸಾಧ್ಯವಾಗಲಿದೆ. ಉತ್ಪಾದನಾ ವೆಚ್ಚದಲ್ಲಿ ಉಳಿತಾಯವಾಗುತ್ತದೆ. ರಬ್ಬರ್ ಮ್ಯಾಟ್ಗಳನ್ನು ಶುಕ್ರವಾರ ವಿತರಿಸಲಾಗಿದ್ದು, ರಾಸುಗಳನ್ನು ಬಹುಮುಖ್ಯವಾಗಿ ಬಾಧಿಸುವ ಕೆಚ್ಚಲು ಬಾವು ರೋಗ, ಮಂಡಿ ನೋವು, ಕೀಲು ನೋವು ತಡೆಗಟ್ಟಲು ಸಾಧ್ಯವಾಗಲಿದೆ. ಶುದ್ಧ ಹಾಲು ಉತ್ಪಾದನೆಗೂ ಸಹಕಾರಿಯಾಗುತ್ತದೆ’
‘ರೈತರು ಜೋಳದ ಬಿತ್ತನೆ ಬೀಜಗಳನ್ನು ಜಮೀನುಗಳಲ್ಲೇ ಬೆಳೆದು, ರಾಸುಗಳಿಗೆ ರಸ ಮೇವು ನೀಡಲು ಸಾಧ್ಯವಾಗಲಿದ್ದು, ಮೇವಿನ ವೆಚ್ಚ ಉಳಿತಾಯವಾಗಲಿದೆ’ ಎಂದರು.


ಮೆಗಾ ಡೇರಿಗೆ 400 ಕೋಟಿ ರೂ. ವೆಚ್ಚದ ಯಂತ್ರೋಪಕರಣ ಖರೀದಿ
ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮಗಾಡೇರಿಗೆ ವಿದೇಶದಿಂದ 400 ಕೋಟಿ ರೂ. ವೆಚ್ಚದ ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಒಕ್ಕೂಟದ ಅಧ್ಯಕ್ಷಎಚ್.ಡಿ. ರೇವಣ್ಣ ಹೇಳಿದರು. ಹಾಸನ ಮುಖ್ಯಡೇರಿ ಸಂಕೀರ್ಣದಲ್ಲಿರುವ ಪೆಟ್ ಬಾಟಲ್ ಘಟಕದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯ ವಿವಿಧ ಹಾಲು ಉತ್ಪಾದಕ ಸಹಕಾರ ಸಂಘಗಳ ಪ್ರಗತಿ ಪರ ಹಾಲು ಉತ್ಪಾದಕರ ಹೈನುಗಾರಿಕೆಗೆ ಪೂರಕವಾದ ಮೇವು ಕತ್ತರಿಸುವ ಯಂತ್ರಗಳು, ಹಸುಗಳು ಜಾರಿ ಬೀಳದಂತೆ ರಬರ್ ಮ್ಯಾಟ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 30 ಸಾವಿರ ಹಸುಗಳಿಗೆ ವಿಮೆ ಮಾಡಿಸುವುದಲ್ಲದೆ, ಐದು ಸಾವಿರ ಹಾಲು ಉತ್ಪಾದಕರಿಗೆ ವೈಯಕ್ತಿಕ ವಿಮೆ ಮಾಡಿಸಲಾಗುವುದು ಎಂದು ತಿಳಿಸಿದರು. ಎನ್ಆರ್ ಎಲ್ ಎಂ ಯೋಜನ ಅಡಿ

ಗುರುತಿಸಲಾದ ಮಹಿಳಾ ಸಹಕಾರ ಸಂಘಗಳಿಗೆ ಹೈನು ರಾಸು ಖರೀದಿಸಲು ಹಣ ಸಹ ಬಿಡುಗಡೆ ಮಾಡಲಾಯಿತು ಮತ್ತು ಉತ್ತಮ ಹಾಲು ಶೇಖರಣೆ ಮಾಡಿದ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಸಿಬ್ಬಂದಿಗಳನ್ನು ಇದೇ ವೇಳೆ ಅಭಿನಂದಿಸಲಾಯಿತು. ಬಳಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ವಹಣೆಯಲ್ಲಿನ ಕುಂದುಕೊರತೆಗಳ ಅವಲೋಕನ ನಡೆಯಿತು. ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ, ಹಾಮೂಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಜೈಪ್ರಕಾಶ್ ಕೆ. ನಿರ್ದೇಶಕರಾದ ಹೊನ್ನವಳ್ಳಿ ಸತೀಶ್, ನಾರಾಯಣಗೌಡ ಮತ್ತಿತರರು ಇದ್ದರು